ಇಗ್ಗಲೂರಲ್ಲಿ ಅದ್ಧೂರಿ ಸಂಕ್ರಾಂತಿ ಆಚರಣೆ
ಮಾಲೂರು: ತಾಲೂಕಿನ ಚಿಕ್ಕ ಇಗ್ಗಲೂರು ಗ್ರಾಮದಲ್ಲಿ 300 ಜೋಡಿ ಹಸುಗಳಿಗೆ ಅಲಂಕಾರ ಮಾಡಿ ರಾಸುಗಳ ಓಟ ಹಮ್ಮಿಕೊಳ್ಳುವ ಮೂಲಕ ಅದ್ಧೂರಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ನೆರೆ ರಾಜ್ಯವಾದ ತಮಿಳುನಾಡು ಹಾಗೂ ಪಕ್ಕದ ಜಿಲ್ಲೆಗಳಾದ ಆನೇಕಲ್ಲು, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಸಂಕ್ರಾಂತಿ ಆಚರಿಸಲು ಬಂದಿದ್ದ ರಾಸುಗಳನ್ನು ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ಸಂಕ್ರಾತಿ ಪ್ರಯುಕ್ತ ಗ್ರಾಮದ ಹೊರವಲಯದಲ್ಲಿ ಆಯೋಜಿಸಿದ್ದ ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ಶಾಸಕ ಮಂಜುನಾಥ್ ಗೌಡ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಸೊಗಡು ಪಸರಿಸುವ ಈ ರಾಸುಗಳ ಹಬ್ಬ ನಮ್ಮಿಂದ ಮರೆಯಾಗದಂತೆ ನೋಡಿ ಕೊಳ್ಳಬೇಕಾಗಿದೆ. ಕೆಲವೂಂದು ನಿರ್ಭಂಧಗಳನ್ನು ಹಾಕಿ ರಾಜ್ಯ ಸರ್ಕಾರ ರಾಸುಗಳ ಇಂತಹ ಹಬ್ಬಗಳಿಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ ಎಂದರು. ತಾಪಂ ಮಾಜಿ ಸದಸ್ಯ ನಂಜೇಗೌಡ, ಸಂಘಟಕ ರವಿ ಇದ್ದರು.
ನಂತರ ನಡೆದ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಜೋಡಿ ಹಸುಗಳನ್ನು ಓಡಿಸಲಾಯಿತು. ಹಸುಗಳಿಗೆ ಕಟ್ಟಿದ್ದ ಪಟಗಳನ್ನು-ಜಲ್ಲಿಯನ್ನು ನರೆದಿದ್ದ ಯುವಕರು ಕೀಳುಲು ಮಾಡಿದ ಪ್ರಯತ್ನ ನರೆದಿದ್ದವರ ಮೈ ನೆವಿರೇಳುವಂತೆ ಮಾಡಿತ್ತು. ಇಂದಿನ ಸಂಕ್ರಾಂತಿ ಹಬ್ಬದ ರಾಸುಗಳ ಓಟವನ್ನು ವೀಕ್ಷಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರು ಬಂದಿದ್ದು, ರಾಸುಗಳ ಓಟಗಳಿಂದ ಪುಳಕಿತರಾದರು. ಕಳೆದ 4 ದಶಕಗಳಲ್ಲಿ ಇದೇ ಪ್ರಥಮ ಬಾರಿಗೆ ಹದಿನೈದು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದ ಈ ಹಬ್ಬದಲ್ಲಿ ಬಂದವರಿಗಾಗಿ ಕುಡಿಯುವ ನೀರು-ಊಟದ ವ್ಯವಸ್ಥೆ ಮಾಡಲಾಗಿತ್ತು. ಡಿವೈಎಸ್‌ಪಿ ಆಶೋಕ್ ಕುಮಾರ್ ನೇತೃತ್ವದಲ್ಲಿ ಬಂದೂಬಸ್ತು ಮಾಡಲಾಗಿತ್ತು. ಇದಕ್ಕಾಗಿ ನಾಲ್ಕು ಡಿ.ಆರ್. ವ್ಯಾನ್ ಕರೆಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

