ಕೋಲಾರ

ಆವಣೆ ರಾಮಲಿಂಗೇಶ್ವರಸ್ವಾಮಿ ರಥೋತ್ಸವ ಶನಿವಾರ

Published On :

ಮುಳಬಾಗಲು: ಕೋಲಾರ ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶ, ತಮಿಳುನಾಡು ಗ್ರಾಮಗಳಲ್ಲಿ ಪ್ರಸಿದ್ಧವಾಗಿರುವ ಆವಣೆ ಗ್ರಾಮದ ರಾಮಲಿಂಗೇಶ್ವರಸ್ವಾಮಿ ಜಾತ್ರೆ ಪ್ರಾರಂಭವಾಗಿದೆ.
ಕಳೆದ ಭಾನುವಾರ ಅಂಕುರಾರ್ಪಣದಿಂದ ಪ್ರಾರಂಭವಾದ ಜಾತ್ರೆ ಅಂಗವಾದ ಬ್ರಹ್ಮ ರಥೋತ್ಸವ ಸರ್ಕಾರದ ವತಿಯಿಂದ ಮಾ.1ರ ಶನಿವಾರ ನಡೆಯಲಿದೆ. ರಥೋತ್ಸವಕ್ಕೆ ಸೌಹರ್ಧತೆಯ ಮೆರುಗು ಪಕ್ಕದ ಕೀಲುಹೊಳಲಿ ಗ್ರಾಮ ದೇವತೆಯ ಸಲ್ಲಾಪುರಮ್ಮನ ಉತ್ಸವ, ರಥೋತ್ಸವದ ಬಳಿ ಸಲ್ಲಾಪುರಮ್ಮನ ಉತ್ಸವ ಬರುವವರೆವಿಗೂ ರಥೋತ್ಸವ ಕದುಲುವಂತಿಲ್ಲ ಎಂಬುದು ವಿಶೇಷ.
ಆವಣೆ ಜಾತ್ರಿ ಜಾನುವಾರು ಜಾತ್ರೆಗೆ ಹೆಸರು ವಾಸಿ, ಸುತ್ತಮುತ್ತಲವಲ್ಲದೇ ದೂರದ ಊರುಗಳಿಂದಲೂ  ಜಾನುವಾರುಗಳ ಕೊಳ್ಳಲು, ಮಾರಲು ಬರುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ, ಆದರೆ ಈ ವೆರ್ಷ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಕಾರಣವಾಗಿ ಜಾನುವಾರುಗಳ ಜಾತ್ರೆಯನ್ನು ಜಿಲ್ಲಾಡಳಿತ ನಿಷೇದಿಸಿದೆ, ಅದರೂ ಸ್ವಯಂ ಇಚ್ಚೆಯಿಂದ ಜಾನುವಾರುಗಳ ಸೇರುತ್ತಿದೆ. ದೇವಾಲಯಕ್ಕೆ ಸೇರುವ ಅಂಗಡಿಗಳಿಂದ ಮುಜರಾಯಿ ಇಲಾಖೆಯವರು ಸುಂಕ ವಸೂಲಿ ಮಾಡದಂತೆ ಗ್ರಾಮದ ಆವಣೆ ಬಾಬು ಎಂಬುವರು ತಾವೇ ಸ್ವತಹ ಸರ್ಕಾರಕ್ಕೆ ಮೂವತ್ತೆರಡು ಸಾವಿರ ರು.ಗಳನ್ನು ತೆತ್ತಿದ್ದಾರೆ, ಇದೇ ರೀತಿಯಲ್ಲಿ ಹಲವಾರು ಮಂದಿ ಭಕ್ತಾಧಿಗಳು ತಮ್ಮ ಕೈಯಲ್ಲಾದಷ್ಚು ಸೇವೆ ಮಾಡಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಪೌರಾಣಿಕವಾಗಿ ಗ್ರಾಮದ ಹೆಸರು ಅವಂತಿಕಾ ಕ್ಷೇತ್ರವೆಂದು ಮಹಾಭಾರತದಲ್ಲಿ ದಾಖಲಾಗಿದೆ, ಇಲ್ಲಿನ ಬೆಟ್ಟಿದಲ್ಲಿ ಮಹರ್ಷಿ ವಾಲ್ಮಿಕಿ ಜನಸಿದ್ದರೆಂದು ಅವರ ಆಶ್ರಯದಲ್ಲಿ ಸೀತಾಮಾತೆ ಇದ್ದು ನಂತರ ಲವಕುಶರು ಇಲ್ಲಿಯೆ ಜನಿಸಿದರೆಂದು ಹೇಳಲಾಗುತ್ತದೆ. ಬೆಟ್ಟದ ಮೇಲಿನ ಸೀತಮ್ಮನ, ಲವಕುಶರ ಗುಡ್ಡ ಇಂದಿಗೂ ಪ್ರಸಿದ್ಧ ತಾಣವಾಗಿದೆ. ಶ್ರೀರಾಮನ ಭಕ್ತನಾದ ಜಾಬುವಂತ ಸಹ ಇಲ್ಲಿ ನೆಲೆಸಿದ್ದು ಅವರ ಹೆಸರಿನ ದೇವಾಲಯವಿದ್ದು ಅದನ್ನು ನೂತನವಾಗಿ ನಿರ್ಮಿಸುವ ಪ್ರಯತ್ನಗಳು ನಡೆದಿದೆ. ಮಾರ್ಚ್ 2ರಂದು ಪಾರ್ವಟೋತ್ಸವ, 3ರಂದು ನಂದಿ ಉತ್ಸವ, ವಸಂತೋತ್ಸವ, ರಾತ್ರಿ ನಂದಿವಾಹಮೋತ್ಸವ, 4ರಂದು ರಾವಣೋತ್ಸವ, 5ರಂದು ಮುತ್ತಿನ ಪಲ್ಲಕ್ಕಿ ಉತ್ಸವ, 6ರಂದು ಪುಷ್ಪಪಲ್ಲಕ್ಕಿ ಉತ್ಸವ, ನಂತರ ಮುಂದಿನ ದಿವಸಗಳಲ್ಲಿ ಕ್ರಮವಾಗಿ ಚಿತ್ರಗೋಪುರೋತ್ಸವ, ಮಂಟಪೋತ್ಸವ, ಮುತ್ತಿನ ಪಲ್ಲಕ್ಕಿ, ಸಿಂಹವಾಹನೋತ್ಸವ, ಶಯನೋತ್ಸವ ಕಾರ್ಯಕ್ರಮಗಳು ನಡೆಯಲಿದೆ. ಲಕ್ಷಾಂತರ ಮಂದಿ ಭಕ್ತಾಧಿಗಳು ಜಾತ್ರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.