ಎಲ್ಲೆಲ್ಲೂ ಶಿವನ ಆರಾಧನೆ
ಕೋಲಾರ: ಮಹಾಶಿವರಾತ್ರಿ ಪ್ರಯುಕ್ತ ಚಿನ್ನದ ನಾಡಾದ ಕೆಜಿಎಫ್ನಲ್ಲಿ ಆರ್ಯ ವೈಶ್ಯ ಮಂಡಳಿ ಹಮ್ಮಿಕೊಂಡಿದ್ದ ಬಿಲ್ವ ಪ್ರಿಯ, ಅಭಿಷೇಕ ಪ್ರಿಯಶಿವನ ದರ್ಶನ ಅಮೋಘವಾಗಿತ್ತು.
ಲೋಕಕಲ್ಯಾಣಕ್ಕಾಗಿ ಆರ್ಯ ವೈಶ್ಯ ಮಂಡಳಿಯ ಮಹಿಳಾ ಮಣಿಗಳು ದೃಢ ಸಂಕಲ್ಪ ಹಾಗೂ ಸ್ಪಷ್ಟ ಗುರಿಯೊಂದಿಗೆ ಸುಮಾರು ಎರಡೂವರೆ ತಿಂಗಳ ಪರಿಶ್ರಮದಿಂದ ತಯಾರಿಸಿರುವ ಲಕ್ಷ ವಿವಿಧ ಅಕಾರಗಳ ಶಿವ ಲಿಂಗಗಳನ್ನು ಭಕ್ತರ ದರ್ಶನಕ್ಕಾಗಿ ಆರ್ಯ ವೈಶ್ಯ ಮಂಡಳಿಗೆ ಸೇರಿದ ಕಲ್ಯಾಣ ಮಂಟಪದಲ್ಲಿ ವಿನ್ಯಾಸಗೊಳಿಸಲಾಗಿದೆ.
2 ದಿನ ಶಿವಲಿಂಗ ದರ್ಶನದ ಬಳಿಕ ಶನಿವಾರ(ಮಾ.1) ಶಿವಲಿಂಗಗಳನ್ನು ಟಿ. ನರಸೀಪುರ, ತಲಕಾಡು, ಶ್ರೀರಂಗಪಟ್ಟಣದ ನಿಮಿಷಾಂಬ ಸನ್ನಿಧಿ, ತ್ರಿವೇಣಿ ಸಂಗಮ, ನಂಜನಗೂಡು ಶ್ರೀಕ್ಷೇತ್ರದ ಕಪಿಲೆಯಲ್ಲಿ ಹಾಗೂ ರಾಮೇಶ್ವರ, ಕಾಶಿ, ಧರ್ಮಸ್ಥಳದ ತಪೋನದಿಗಳಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲಾಗುವುದು. ಸಮಿತಿಯ ನೂರು ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ.
ಕಳೆದ ವರ್ಷ ಸಂಕಲ್ಪ: ಲಕ್ಷ ಲಿಂಗ ದರ್ಶನದ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಆರ್ಯ ವೈಶ್ಯ ಮಹಿಳಾ ಮಂಡಳಿಯ ಕಾರ್ಯದರ್ಶಿ ವಾಣಿ ಶ್ರೀಧರ್, ಕಳೆದ ವರ್ಷ ಕೆಜಿಎಫ್ನಲ್ಲಿ ಶಿವರಾತ್ರಿ ಪ್ರಯುಕ್ತ ಲಕ್ಷ ಲಿಂಗ ಪ್ರತಿಷ್ಠಾಪನೆ ಮಾಡಬೇಕೆಂದು ಸಂಕಲ್ಪ ಮಾಡಿದ್ದೆವು. ತಲಕಾಡಿನಲ್ಲಿ ಕಂಡ ಶಿವಲಿಂಗಗಳೇ ಸ್ಫೂರ್ತಿ. 3 ವರ್ಷದ ಮಗುವಿನಿಂದ 60 ವರ್ಷ ಮೇಲ್ಪಟ್ಟ ವಯೋವೃದ್ಧರ ಸಹಾಯ ಪಡೆದು ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಲಿಂಗ ತಯಾರಿಸಲಾಗಿದೆ ಎಂದು ಸಂಸತ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

