ಕೋಲಾರ

ನಿಷೇಧದ ನಡುವೆಯೂ ಜಲ್ಲಿಕಟ್ಟು ಯಶಸ್ವಿ

Published On :

ಮಾಲೂರು: ಕಾಲುಬಾಯಿ ರೋಗದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಾಸುಗಳ ಜಾತ್ರೆ-ಹಬ್ಬಗಳನ್ನು ನಿಷೇಧಿಸಿ ಸುಪ್ರಿಂ ಕೋರ್ಟ್ ನಿರ್ದಶನದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವಿದ್ದರೂ ಸಂಕ್ರಾಂತಿ ಹಬ್ಬದ ಹೆಸರಿನಲ್ಲಿ ರಾಸುಗಳಿಗೆ ಜಲ್ಲಿ ಕಟ್ಟುವಲ್ಲಿ ತಾಲೂಕಿನ ಇಗ್ಗಲೂರು ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ಕಳದೆ ವಾರ ನಡೆಯಬೇಕಾದ ಈ ಸಂಕ್ರಾಂತಿ ಹಬ್ಬವನ್ನು ಜಿಲ್ಲಾಧಿಕಾರಿಗಳು ಅನುಮತಿ ನೀಡದ ಕಾರಣ ಕಾರ್ಯಕ್ರಮ ರದ್ದು ಪಡಿಸಲಾಗಿತ್ತು. ಆದರೆ ಸಂಕ್ರಾಂತಿ ಹಬ್ಬ ಮಾತ್ರ ಆಚರಿಸುವುದಾಗಿ ತಿಳಿಸಿ ಸ್ಥಳೀಯ ತಹಸೀಲ್ದಾರ್‌ರಿಂದ 3 ಗಂಟೆಗಳ ಅನುಮತಿ ಪಡೆಯಲಾಗಿತ್ತು. ಅನುಮತಿ ನೀಡಿರುವ ತಹಸೀಲ್ದಾರ್ ಕಾನೂನು ಭಂಗವಾಗದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ತಿಳಿಸಿ ತಮ್ಮ ಭಾರ ಕಳೆದುಕೊಂಡಿದ್ದರು. ಆದರೆ ಚಿಕ್ಕ ಇಗ್ಗಲೂರಿನ ಗ್ರಾಮಸ್ಥರು ತಾಲೂಕಿನ ಇತಿಹಾಸದಲ್ಲೇ ಹಿಂದೆಂದೂ ಆಗದಂತಹ ಜಲ್ಲಿ ಕಟ್ಟುವ ಕಾರ್ಯಕ್ರಮ ನಡೆಸೇ ಬಿಟ್ಟರು. ಶಾಸಕ ಮಂಜುನಾಥ್ ಗೌಡರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮವನ್ನು ಸಂಪೂರ್ಣ ವೀಕ್ಷಿಸಿದರು. ರಾಸುಗಳ ಓಟ ನಿಷೇಧಿಸಿದರೂ ತಾವೂ ಚಾಲನೆ ನೀಡಿರುವ ಬಗ್ಗೆ ಶಾಸಕರನ್ನು ವಿಚಾರಿಸಿದಾಗ ಗ್ರಾಮೀಣ ಸೂಗಡುವುಳ್ಳ ಈ ರಾಸುಗಳ ಓಟವನ್ನು ನಿಷೇಧಿಸಿರುವ ಬಗ್ಗೆ ರಾಜ್ಯ ಸರ್ಕಾರ ಮರು ಚಿಂತನೆ ಮಾಡಬೇಕು. ಇಲ್ಲಿ ಮೆರವಣಿಗೆ ಮಾತ್ರ ಚಾಲನೆ ನೀಡಲಾಗಿತ್ತು. ಆದರೆ ಬಹುತೇಕ ಮಂದಿ ಸಾಂಕೇತಿಕವಾಗಿ ಹಸುಗಳನ್ನು ಓಡಿಸಲೇ ಬೇಕು ಎಂಬ ಕಾರಣದಿಂದ ಕೇಲವು ರಾಸುಗಳಿಗೆ ಜಲ್ಲಿ ಕಟ್ಟಲಾಗಿತ್ತು. ಹದಿನೈದು ಸಾವಿರ ಮೇಲ್ಪಟ್ಟು ಜನ ಹಾಗೂ ಮೂನ್ನೂರುಕ್ಕೂ ಹೆಚ್ಚು ಹಸುಗಳು ಈ ಹಬ್ಬದಲ್ಲಿ ಭಾಗವಹಿಸಿದ್ದರೂ ಒಂದು ಸಣ್ಣ ಅವಘಡವಾಗಿಲ್ಲವಲ್ಲ ಎಂಬ ಸಮಜಾಯಿಷಿ ನೀಡಿದರು.
ಬಂದೋಬಸ್ತು ನೇತೃತ್ವ ವಹಿಸಿದ್ದ ಡಿವೈಎಸ್‌ಪಿ ಆಶೋಕ್ ಕುಮಾರ್ ಸಮಕ್ಷಮದಲ್ಲಿ ನಡೆದ ರಾಸುಗಳಿಗೆ ಜಲ್ಲಿಕಟ್ಟುವ ಕಾರ್ಯಕ್ರಮದಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಇನ್ನಷ್ಟು ರಾಸುಗಳಿಗೆ ಜಲ್ಲಿ ಕಟ್ಟುವುದಾಗಿ ಒತ್ತಡ ಹೇರಿದ ಗ್ರಾಮಸ್ಥರು ಶಾಸಕರ ಮಧ್ಯಸ್ಥಿಕೆಯಲ್ಲಿ ಯಶಸ್ವಿ ಆದರು. ಪೊಲೀಸ್ ಅಧಿಕಾರಿಗಳ ಎದುರೇ ನಡೆದ ಜಲ್ಲಿ ಕಟ್ಟು ಕಾರ್ಯಕ್ರಮಕ್ಕೆ ಅನುಮತಿ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಥಳೀಯ ಇನ್ಸ್‌ಪೆಕ್ಟರ್ ಶಿವುಕುಮಾರ್  ಸಂಕ್ರಾಂತಿ ಹಬ್ಬಕ್ಕಾಗಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ತಹಸೀಲ್ದಾರ್ ರವರು 3 ಗಂಟೆಗಳ ಅನುಮತಿ ನೀಡಿದ್ದು, ಅಲ್ಲಿ ರಾಸುಗಳ ಮೆರವಣಿಗೆ ನಡೆದಿರುವುದು ಬಿಟ್ಟರೆ ಬೇರೆನ್ನೂ ನೆಡಿದಿಲ್ಲ ಎನ್ನುತ್ತಿದ್ದಾರೆ. ಆದರೆ ಅಲ್ಲಿ ನಡೆದಿರುವ ಜಲಿಕಟ್ಟಿಸಿಕೊಂಡಿರುವ ರಾಸುಗಳು ಓಡುತ್ತಿರುವ ಪೋಟೋಗಳೇ ಇಗ್ಗಲೂರು ಗ್ರಾಮದಲ್ಲಿ ಏನು ನಡೆದಿದೆ ಎಂದು ತಿಳಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.