ಕೋಲಾರ

ಈಶ್ವರನ ಪ್ರತಿರೂಪ ಸಾಯಿನಾಥ

Published On :

ಮಾಲೂರು: ಈಶ್ವರನ ಪ್ರತಿರೂಪವಾಗಿರುವ ಸಾಯಿನಾಥನ ಮಹತ್ವ ಅತೀತವಾಗಿದ್ದು, ಸಾಯಿ ಬಾಬಾ ಗುರುವಿನಲ್ಲಿ ದೇವರ ಕಾಣಬಹುದಾಗಿದೆ ಎಂದು ಶಿರಡಿ ಬಾಬಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ ಹೇಳಿದರು.
ತಾಲೂಕು ಕಚೇರಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ  ಹಮ್ಮಿಕೊಂಡಿದ್ದ ಅಖಂಡ ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಲಿಯುಗದಲ್ಲಿ ಈಶ್ವರನ ಪ್ರತಿರೂಪದಂತಿರುವ ಸಾಯಿನಾಥ ನೊಂದ ಮನಸ್ಸಿಗೆ ಶಾಂತಿ ನೀಡುವ ಶಾಂತಿಧೂತನಾಗಿದ್ದು, ಪ್ರತಿಯೊಬ್ಬರು ಸಾಯಿ ಭಜನೆ ಮಾಡಬೇಕು ಎಂದರು. ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ರ ವರೆಗೆ ನಡೆದ ಭಜನೆ ನಂತರ ಸಾಯಿನಾಥರಿಗೆ ಕಾಕಡಾರತಿ ಮಾಡಲಾಯಿತು. ಟ್ರಸ್ಟ್‌ನ ಆಂಜನೇಯ ರೆಡ್ಡಿ, ನಾರಾಯಣರೆಡ್ಡಿ, ಶ್ರೀನಾಥ್‌ರೆಡ್ಡಿ, ಜೈಭಾರತಮ್ಮ, ಬೇಬಿರಾಣಿ, ಭಾಗ್ಯಮ್ಮ, ಅನುಸೂಯಮ್ಮ, ನಿರ್ಮಲಮ್ಮ, ರಾಘವೇಂದ್ರ, ಗಜೇಂದ್ರ, ವಾಸುದೇವ, ಮಂಜು, ಸುರೇಶ್, ಲಿಖಿತ್, ಮಣಿ, ರವಿ, ಚಂದಿರ್, ಉಜ್ವಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.