ಕೋಲಾರ

ಒಂದು ಲಕ್ಷ ಶಿವಲಿಂಗ ದರ್ಶನ

Published On :

ಕೆಜಿಎಫ್: ಮಹಾಶಿವರಾತ್ರಿಯಂದು ಮಹಾರುದ್ರಹೋಮ ಮಾಡಿದರೆ ಈಶ್ವರನ ಅನುಗ್ರಹ ಪಡೆದು ಜನ್ಮ ಸಾರ್ಥಕವಾಗುವುದು ಎಂದು ಪೇಜವಾರ ಮಠಾಧೀಶರಾದ ವಿಶ್ವೇಶ್ವರತೀರ್ಥ ಸ್ವಾಮೀಜಿ ಹೇಳಿದರು.
ಮಹಾಶಿವರಾತ್ರಿ ಪ್ರಯುಕ್ತ ಆರ್ಯ ವೈಶ್ಯ ಮಂಡಲಿ ವತಿಯಿಂದ ನಗರದ ವಾಸವಿ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಒಂದು ಲಕ್ಷ ಶಿವಲಿಂಗಗಳ ದರ್ಶನ ಹಾಗೂ ಮಹಾರುದ್ರಹೋಮದಲ್ಲಿ ಮಾತನಾಡಿದ ಅವರು, ಮನುಷ್ಯರಿಗೆ ಕೋಪತಾಪಗಳು, ಧ್ವೇಷ ಅಸೂಯೆ ತೊರೆದು ಮಾನವರನ್ನು ಪ್ರೀತಿಸಿದರೆ ಪರಮಾತ್ಮ ಮೆಚ್ಚುತ್ತಾನೆ ಎಂದರು.
ಜಿಲ್ಲೆಯಲ್ಲೇ ಪ್ರಥಮ ಭಾರಿಗೆ ಮಹಾಶಿವರಾತ್ರಿಯಂದು ಭಕ್ತಾಧಿಗಳ ದರ್ಶನಕ್ಕೆಂದು ಆರ್ಯ ವೈಶ್ಯ ಮಂಡಲಿ ವತಿಯಿಂದ ಕಳೆದ ಮೂರು ತಿಂಗಳಿಂದ ಪ್ರತಿದಿನ ನೂರುರು ಭಕ್ತಾಧಿಗಳು ನಿಷ್ಠಾ ಭಕ್ತಿಯಿಂದ ತಯಾರಿಸಲಾದ ಶಿವಲಿಂಗಗಳ ದರ್ಶನ ಹಾಗೂ ಮಹಾರುದ್ರಹೋಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತಾಧಿಗಳಿಗೆ ಮಹಾ ಪೂರ್ಣಹುತಿ, ಆಶೀರ್ವಚನ, ಅನುಗ್ರಹ ಭಾಷಣ, ಮಾಹಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಿದರು.
 


ಭಾರತ ಮಾತೆಯ ಶೋಭಾ ಯಾತ್ರೆ
ಕೆಜಿಎಫ್: ಚಂದ್ರಶೇಖರ್ ಆಜಾದ್ ಅವರ ಹುತಾತ್ಮರ ದಿನಾಚರಣೆ ಅಂಗವಾಗಿ ಪಟ್ಟಣದ ಧರ್ಮರಕ್ಷಾ ಸಮಿತಿ ವತಿಯಿಂದ ಬಂಗಾರಪೇಟೆಯಲ್ಲಿ ಹಮ್ಮಿಕೊಂಡಿರುವ ಭಾರತ ಮಾತೆಯ ಶೋಭಾ ಯಾತ್ರೆಗೆ ಬೇತಮಂಗಲ ಗ್ರಾಮದಿಂದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಚಾಲನೆ ನೀಡಿದರು. ವಿಜಯೇಂದ್ರ, ಸುರೇಶ್, ಶೇಕಿ, ಸುನಿಲ್, ರಾಜೇಶ್, ಅಭಿ, ವೆಂಕಟರಾಮೇಗೌಡ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.