ಕಾಂಪೌಂಡ್ ಇಲ್ಲದ ಮಿನಿ ವಿಧಾನಸೌಧ
ಗುಡಿಬಂಡೆ: ಪಟ್ಟಣದ ಹೃದಯಭಾಗದಲ್ಲಿ ಸುಮಾರು ರು. 2.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧ ಕಟ್ಟಡದ ಮುಖ್ಯ ಕಾಮಗಾರಿಗಳು ಆರ್ಥಿಕ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿವೆ.
ಮಿನಿ ವಿಧಾನ ಸೌಧ ಕಟ್ಟಡಕ್ಕೆ ಸುಸಜ್ಜಿತ ಕಾಂಪೌಂಡ್ವ್ಯೆವಸ್ಥೆ, ಸಾರ್ವಜನಿಕರ ವಾಹನ ನಿಲುಗಡೆ ಮತ್ತು ಕೆಲ ಕಚೇರಿ ಪಿಠೋಪಕರಣಗಳ ಕೊರತೆ ಎದ್ದು ಕಾಣುತ್ತಿದೆ. ಇದಕ್ಕಾಗಿ ಈಗಾಗಲೇ ಸುಮಾರು 1.50 ಕೋಟಿ ಹಣ ಅಗತ್ಯವಿದೆಯೆಂದು ಮೂಲಗಳಿಂದ ತಿಳಿದುಬಂದಿದೆ.
ಪಾರ್ಕಿಂಗ್ ವ್ಯವಸ್ಥೆ ಕೊರತೆ: ಕಚೇರಿ ಕೆಲಸಗಳ ನಿಮಿತ್ತ ಬರುವ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿಲ್ಲದೇ ಕಟ್ಟಡದ ಆವರಣದಲ್ಲೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ ಇದರಿಂದ ಸಾರ್ವಜನಕರ ಓಡಾಟಕ್ಕೂ ತೊಂದರೆಯಾಗಿದೆ.
ಮಿನಿವಿಧಾನ ಸೌಧಕ್ಕೆ ಬರುವ ಸಾರ್ವಜನಿಕರ ಸೌಲಭ್ಯಕ್ಕಾಗಿ ಕಚೇರಿ ಆವರಣದಲ್ಲಿ ಅಥವಾ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ಮಹಿಳೆಯರು, ವೃದ್ಧರು ಪರದಾಡಬೇಕಾಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಪಂ ವತಿಯಿಂದ ಒಂದು ಶೌಚಾಲಯ ನಿರ್ಮಿಸಿದ್ದರೂ ಇದರ ಬಳಕೆ ಅಷ್ಟಕಷ್ಟೆ.
ಮಿನಿವಿಧಾನ ಸೌಧದ ಆವರಣದಲ್ಲಿ ಶೌಚಾಲಯವಿಲ್ಲದ ಕಾರಣ ಕಾಂಪೌಂಡ್ ಮರೆಯನ್ನು ಆಶ್ರಯಿಸುವಂತಾಗಿದೆ. ಕಚೇರಿ ಆವರಣ ಈಗಾಗಲೇ ಸಾರ್ವಜನಿಕ ಶೌಚಾಲಯವಾಗಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಮಿನಿವಿಧಾನ ಸೌಧದ ಕಟ್ಟಡದ ಒಳಭಾಗದಲ್ಲಿ ನಿರ್ಮಿಸಿರುವ ಶೌಚಾಲಯಗಳಿಗೆ ಬೀಗ ಹಾಕಿದ್ದು, ಸೇವೆಗೆ ಲಭ್ಯವಾಗಿಲ್ಲ, ಇನ್ನು ಮುಂದಾದರೂ ತಾಲೂಕು ಆಡಳಿತ ಸಮಸ್ಯೆ ನಿವಾರಣಯತ್ತ ಗಮನಹರಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

