'ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ'
ಕೋಲಾರ: ಗ್ರಾಮೀಣ ಭಾಗದ ಯುವ ಜನತೆಯಲ್ಲಿ ಉತ್ತಮ ಪ್ರತಿಭೆಗಳು ಇದ್ದು, ಸರ್ಕಾರ ಸೃಷ್ಟಿಸುತ್ತಿರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ವಾವಲಂಭಿ, ಸ್ವಾಭಿಮಾನಿಗಳಾಗಿ ಜೀವಿಸುವ ಜೊತೆಗೆ ವಿವಿಧ ವಲಯಗಳ ತರಬೇತಿ ಪಡೆದು, ಸ್ವ-ಉದ್ಯೋಗಿಗಳಾಗುವಂತೆ ಯುವಕರಿಗೆ ಜಿ.ಪಂ. ಯೋಜನಾ ನಿರ್ದೇಶಕ ಮೋಹನ್‌ಕುಮಾರ್ ಸಲಹೆ ನೀಡಿದರು.
ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಆರಂಭಗೊಂಡ ರಾಜೀವ್‌ಗಾಂಧಿ ಚೈತನ್ಯ ಯೋಜನೆಯ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೃಷಿ-ಕೃಷಿಯೇತರ ಕೈಗಾರಿಕೆ ಮತ್ತು ಕೌಶಲ್ಯಯುತವಾದ ಯಾವುದೇ ಉದ್ಯೋಗಗಳ ನಿರ್ಮಿತಿಗಾಗಿ ಯುವ ಜನರನ್ನು ತರಬೇತಿಗೊಳಿಸುವ ತರಬೇತಿಯಲ್ಲಿ ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗಿರುವ ನಿರುದ್ಯೋಗಿ ಯುವಕ, ಯುವತಿಯರು ಸಕ್ರಿಯವಾಗಿ ಭಾಗವಹಿಸಿ ತರಬೇತಿಯ ಲಾಭ ಪಡೆದು ಸ್ವತಂತ್ರ ಜೀವನಕ್ಕೆ ಅಣಿಯಾಗಬೇಕೆಂದರು.
ಇದುವರೆವಿಗೂ ಯಾವುದೇ ಯೋಜನೆಯ ಲಾಭ ಪಡೆಯದವರು ಈ ಯೋಜನೆಯಲ್ಲಿ ಅವಕಾಶ ಪಡೆದು, ಬದುಕನ್ನು ಸುಂದರಗೊಳಿಸಿಕೊಂಡು ಸದೃಡರಾಗಬೇಕೆಂದರು.
ಸಮಾರಂಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಎಸ್.ಪಿ. ಚನ್ನಬಸವಣ್ಣ, ನಿರ್ಮಿಲ ಭಾರತ ಅಭಿಯಾನ ಸಂಯೋಜಕ ಜಿ. ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಶ ಕಾಮತ್, ಸಾಮರ್ಥ್ಯಸೌಧ ಉಸ್ತುವಾರಿ ಡಿ. ಜಯರಾಮ್, ಸಂಪನ್ಮೂಲ ವ್ಯಕ್ತಿ, ಪಿ. ಶಿಲ್ಪಾ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

