ಮಹಿಳೆ ಬಳಿ ಸರ ಕಸಿದು ಪರಾರಿ
ಬಂಗಾರಪೇಟೆ: ರಂಗೋಲಿ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬಳ ಕೊರಳಲ್ಲಿದ್ದ ಸುಮಾರು 3ಲಕ್ಷ ರು. ಬೆಲೆ ಬಾಳುವ ಮಾಂಗಲ್ಯ ಸರವನ್ನು ಕಳ್ಳರಿಬ್ಬರು ಕಸಿದುಕೊಂಡು ಕತ್ತಲಲ್ಲಿ ಪರಾರಿಯಾಗಿದ್ದು ಒಬ್ಬ ಕದೀಮನನ್ನು ಹಿಡಿಯುವಲ್ಲಿ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ.
ಬಂಧಿತ ಕಳ್ಳನನ್ನು ಕೆಜಿಎಫ್ ಅಂಬೇಡ್ಕರ್ ಬಡಾವಣೆ ಚಿಟ್ಟು ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಕಳ್ಳ ಕತ್ತಲಲ್ಲಿ ಪರಾರಿಯಾಗಿದ್ದಾನೆ.
ಕಳೆದ ರಾತ್ರಿ ಮುನಿಯಮ್ಮ ಬಡಾವಣೆಯಲ್ಲಿ ವಾಸವಾಗಿರುವ ರೇಣುಕಾ ವಿಜಯಕುಮಾರ್ ಎಂಬಾಕೆ ಹೊಸ ವರ್ಷದ ಸಲುವಾಗಿ ತಮ್ಮ ಪಕ್ಕದ ಮನೆಯವರು ಬಿಡಿಸಿದ್ದ ಸುಂದರವಾದ ರಂಗೋಲಿ ನೋಡಲು ಹೋಗಿದ್ದಾಗ ಇಬ್ಬರು ಕಳ್ಳರು ಹಠಾತ್ತನೆ ಬಂದು ರೇಣುಕಾ ಕತ್ತಲ್ಲಿ ಹಾಕಿಕೊಂಡಿದ್ದ ಮೂರು ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಸಿದು ಕತ್ತಲಲ್ಲಿ ಪರಾರಿಯಾದರು.
ನಂತರ ರೇಣುಕಾ ಜೋರಾಗಿ ಕಿರುಚಿದಾಗ ಸಾರ್ವಜನಿಕರು ಕಳ್ಳರನ್ನು ಹಿಂಬಾಲಿಸಿಕೊಂಡು ಹೋಗಿ ಜೂನಿಯರ್ ಕಾಲೇಜು ಬಳಿ ಚಿಟ್ಟು ಎಂಬಾತನನ್ನು ಹಿಡಿಯುವಳ್ಳಿ ಯಶಸ್ವಿಯಾದರು. ಆದರೆ ಮತ್ತೊಬ್ಬ ಕಳ್ಳ ಮಾತ್ರ ಸಿಗಲಿಲ್ಲ. ನಂತರ ಸಾರ್ವಜನಿಕರೇ ಕಳ್ಳನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಸರ ಕಳ್ಳತನ ಹೆಚ್ಚಾಗಿ ನಡೆಯುತ್ತಿದ್ದು ಮಹಿಳೆಯರು ಒಂಟಿಯಾಗಿ ಹೊರಗಡೆ ಓಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬತ್ತದ ಮೂಟೆ ಬಿದ್ದು ಸಾವು
ಪಟ್ಟಣದ ಆರ್.ಕೆ.ಎನ್. ಮಿಲ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬಿಹಾರಿ ನಿವಾಸಿ ಸುರೇಶ್ರಾಮ್ 33 ಎಂಬಾತ ಕಳೆದ ರಾತ್ರಿ ಆರ್.ಕೆ.ಎನ್.ಮಿಲ್ನಲ್ಲಿ ಬತ್ತದ ಮೂಟೆಗಳನ್ನು ಜೋಡಿಸುತ್ತಿದ್ದಾಗ, ಆಕಸ್ಮಿಕವಾಗಿ ಮೂಟೆಗಳು ಜಾರಿ ಬಿದ್ದು ಸುರೇಶ್ರಾಮ್ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಚಿದ್ದಾನೆ.
ಗಂಡನ ಕಿರುಕುಳ; ಪತ್ನಿ ಸಾವು
ಗಂಡನೊಬ್ಬ ಪ್ರತಿದಿನ ಹೆಂಡ್ತಿಗೆ ಕಿರುಕುಳ ನೀಡುತ್ತಿದ್ದ ಕಾರಣ ಬೇಸತ್ತ ಪತ್ನಿ ನೇಮು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೊಂಪಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವರ ಪತ್ನಿ ಶಾಂತಮ್ಮ ಎಂಬಾಕೆ ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಶರಣಾಗಿದ್ದು, ಕಳೆದ 6 ವರ್ಷಗಳಿಂದ ಇಬ್ಬರ ನಡುವ ಹೊಂದಾಣಿಕೆ ಕೊರತೆಯಿಂದ ಪ್ರತಿದಿನ ಸಣ್ಣಪುಟ್ಟ ವಿಷಯಕ್ಕೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಇತ್ತೀಚೆಗೆ ಅದು ಮಿತಿಮೀರಿದರಿಂದ ಬೇಸತ್ತು ಶಾಂತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಯೋಗ-ಆರೋಗ್ಯ ಶಿಬಿರ
ಚಿಕ್ಕಬಳ್ಳಾಪುರ: ನಗರದ ಕಲ್ಯಾಣ ಮಂಟಪದಲ್ಲಿ ಜ.2 ರಂದು ಬೆಳಗ್ಗೆ 10.30 ಕ್ಕೆ ಶಿಕ್ಷಕರಿಗೆ ಯೋಗ ಆರೋಗ್ಯ ಪ್ರಶಿಕ್ಷಣ ಶಿಬಿರ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಸಹಕಾರದಲ್ಲಿ ಜಿಲ್ಲಾ ಆಯುಷ್ ಇಲಾಖೆಯು ಐ.ಇ.ಸಿ. ಕಾರ್ಯಕ್ರಮ ಅಡಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಶಾಸಕ ಡಾ.ಕೆ. ಸುಧಾಕರ್ ಅಧ್ಯಕ್ಷತೆ ವಹಿಸುವರು. ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಶಾಸಕರಾದ ಎಂ. ರಾಜಣ್ಣ, ಎಸ್.ಎನ್. ಸುಬ್ಬಾರೆಡ್ಡಿ, ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾವು, ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ನಸೀರ್ ಅಹಮದ್, ಡಿ.ಎಸ್. ವೀರಯ್ಯ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಎಸ್ಪಿ ಎನ್. ಶಿವಪ್ರಸಾದ್, ಆಯುಷ್ ಇಲಾಖೆ ನಿರ್ದೇಶಕ ವಿಜಯಕುಮಾರ್ ಗೋಗಿ, ತಾ.ಪಂ. ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ಆಂಜನಪ್ಪ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಯುಷ್ ಇಲಾಖೆ ಉಪ ನಿರ್ದೇಶಕ ಡಾ. ಸತೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ. ಅಜಿತ್ ಪ್ರಸಾದ್ ಮುಂತಾದವರು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

