ಕೋಲಾರ

ಸುದ್ದಿ ಸಂಕ್ಷೇಪ

Published On :

ನೂತನ ವರ್ಷ; ವಿವಿಧೆಡೆ ವಿಶೇಷ ಪೂಜೆ
ಮಾಲೂರು: ನೂತನ ವರ್ಷರಾಂಭದ ಮೊದಲದಿನವನ್ನು ಪಟ್ಟಣದಲ್ಲಿ ಜನತೆ ಸಡಗರದಿಂದ ಬರಮಾಡಿಕೊಂಡರು.
ಪಟ್ಟಣದ ಗ್ರಾಮ ದೇವತೆ ಮಾರಿಕಾಂಬ, ಶಂಕರನಾರಾಯಣಸ್ವಾಮಿ, ಆಂಜನೇಯ ಸ್ವಾಮಿ, ಸುಬ್ರಮಣ್ಯಸ್ವಾಮಿ, ಧರ್ಮರಾಯ ದೇವಾಲಯದಲ್ಲಿ ನೂತನ ವರ್ಷದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗಿನಿಂದಲೇ ಪಟ್ಟಣದ ಹೃದಯ ಭಾಗದಲ್ಲಿರುವ ಮಾರಿಕಾಂಬ ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ದೇವಾಲಯವನ್ನು ಸಂಪೂರ್ಣವಾಗಿ ಹೂವಿನಲ್ಲಿ ಅಲಂಕಾರ ಮಾಡಲಾಗಿತ್ತು. ನೂತನ ವರ್ಷದ ಅಂಗವಾಗಿ ಹತ್ತು ಸಾವಿರಕ್ಕೂ ಹೆಚ್ಚು ಸಿಹಿ ಲಾಡುಗಳನ್ನು
ವಿತರಿಸಲಾಯಿತು. ಪೊಲೀಸ್ ಠಾಣೆಯ ಮುಂಭಾಗದ  ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಮಾಡಿರುವ ವಿಶೇಷ ಅಲಂಕಾರವನ್ನು ವೀಕ್ಷಿಸಲು ಭಕ್ತಾದಿಗಳು ಸಾಲಿನಲ್ಲಿ ನಿಂತು ದರ್ಶನ ಪಡೆದರು. ಧರ್ಮರಾಯ ದೇವಾಲಯದಲ್ಲೂ ವಿಶೇಷ ಅಲಂಕಾರ ಮಾಡಲಾಗಿತ್ತು.
ನಿವೃತ್ತ ಎಎಸ್‌ಐ ಬೀಳ್ಕೊಡುಗೆ
ಟೇಕಲ್: ಮಾಸ್ತಿ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಸೋಮಸುಂದರರಾವ್ ಅವರನ್ನು ರಾಜ್ಯ ರೈತ ಸಂಘ, ದಲಿತ ಸಿಂಹ ಸೇನೆ ಪದಾಧಿಕಾರಿಗಳು ಬೀಳ್ಕೊಟ್ಟರು. ದಲಿತ ಸಿಂಹ ಸೇನೆ ಜಿಲ್ಲಾಧ್ಯಕ್ಷ ತಿಪ್ಪಸಂದ್ರದ ಶ್ರೀನಿವಾಸ್ ಮಾತನಾಡಿ, ಡಿ.ಎಸ್. ಸೋಮಸುಂದರ್‌ರಾವ್ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಉತ್ತಮ ರೀತಿಯಿಂದ ನ್ಯಾಯ ಒದಗಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.  ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಬಿ.ಮಂಜುನಾಥ್, ದಲಿತ ಸಿಂಹ ಸೇನೆಯ ಅರಳೇರಿ ನಾರಾಯಣಸ್ವಾಮಿ, ದೊಡ್ಡಕಲ್ಲಹಳ್ಳಿ ವೆಂಕಟೇಶ್, ತಿಮ್ಮನಾಯಕನಹಳ್ಳಿ ಮುನಿರಾಜು ಉಪಸ್ಥಿತರಿದ್ದರು.
ಅಪಹೃತರಿಂದ  ವಿದ್ಯಾರ್ಥಿ ಪಾರು
ಕುಣಿಗಲ್: ಸಮಯ ಪ್ರಜ್ಞೆ ಮೆರೆದ ವಿದ್ಯಾರ್ಥಿಯೊಬ್ಬ, ಅಪಹೃತರ ಕಪಿಮುಷ್ಟಿಯಿಂದ ಪಾರಾಗಿ ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಪಟ್ಟಣದ ಕುವೆಂಪುನಗರದಲ್ಲಿನ ಖಾಸಗಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಸಂದೀಪ್ ಎಂಬಾತ, ಎಂದಿನಂತೆ ಶಾಲೆಗೆ ಸಮೀಪದ ತನ್ನ ಮನೆಯಿಂದ ಸೋಮವಾರ ಆಗಮಿಸುವಾಗ, ವಿಳಾಸ ಕೇಳುವ ನೆಪದಲ್ಲಿ ಮೂವರು ಅಪರಿಚಿತ ಯುವಕರು, ವಿದ್ಯಾರ್ಥಿಯನ್ನು ತಡೆದು, ಮತ್ತುಬರಿಸಿ, ವಾಹನವೊಂದರಲ್ಲಿ ವಿದ್ಯಾರ್ಥಿಯನ್ನು ಅಪಹರಿಸಿ, ತುಮಕೂರು ರಸ್ತೆಯ ದೊಡ್ಡಕೆರೆಯ ಏರಿ ಸಮೀಪದ ಪಕ್ಕದಲ್ಲಿನ ನಿರ್ಜನ ಪ್ರದೇಶವಾದ ಕಡೆತೆರಳಿ ವಾಹನ ನಿಲ್ಲಿಸಿದರು. ಪ್ರಜ್ಞೆ ಕಳೆದುಕೊಂಡಿದ್ದ ವಿದ್ಯಾರ್ಥಿ ವಾಹನ ನಿಂತಾಗ, ಎಚ್ಚರಗೊಂಡಿದ್ದು, ಅಪಹರಣಕಾರರು, ವಾಹನ ನಿಲ್ಲಿಸಿ, ಧೂಮಪಾನದಲ್ಲಿ ನಿರತರಾಗಿದ್ದಾಗ, ಸಮಯಪ್ರಜ್ಞೆ ಮೆರೆದ ಬಾಲಕ, ದುಷ್ಕರ್ಮಿಗಳ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು, ಸಮೀಪದ ಮುಖ್ಯರಸ್ತೆಯಲ್ಲಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ವಿಷಯ ತಿಳಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.