ಒರಿಸ್ಸಾ ಘಟನೆ ಖಂಡಿಸಿ ಜೀವಿಕ ಪ್ರತಿಭಟನೆ
ಗುಡಿಬಂಡೆ: ಒರಿಸ್ಸಾದ ಇಬ್ಬರು ಜೀತದಾಳುಗಳ ಕೈಯನ್ನು ಗುತ್ತಿಗೆದಾರರು ಕತ್ತರಿಸಿರುವುದನ್ನು ಖಂಡಿಸಿ ಜೀವಿಕ ಸಂಘಟನೆ ಪ್ರತಿಭಟನೆ ನಡೆಸಿತು. ಪಟ್ಟಣದಲ್ಲಿ ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯಿಂದ ಒರಿಸ್ಸಾದ ಇಬ್ಬರು ಜೀತದಾಳುಗಳಾದ ದಲಿತ ದಿಯಾಲ್ ನಿಯಾಲ್ ಮತ್ತು ಆದಿವಾಸಿ ನೀಲಾಂಬರ್ ಧಿಂಗ್ದಮುಝಿ ಎಂಬವರ ಬಲಗೈಯನ್ನು ಕಾರ್ಮಿಕ ಗುತ್ತಿಗೆದಾರರು ಮತ್ತವರ ಸಹಾಯಕರು ಕತ್ತರಿಸಿರುವ ಘಟನೆ ಖಂಡಿಸಿ ನಡೆದ ರ್ಯಾಲಿಯ ನೇತೃತ್ವವ ವಹಿಸಿ ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೀತವಿಮುಕ್ತರ ಕಷ್ಟಕ್ಕೆ ಸ್ಪಂದಿಸದಿರುವುದು ನೋವಿನ ಸಂಗತಿ ಎಂದರು.
ಮಾನವ ಹಕ್ಕುಗಳ ಹೋರಾಟಗಾರ ಉನ್ನತಿ ವಿಶ್ವನಾಥ್, ನಾಗರಿಕ ಸಮಾಜದಲ್ಲಿ ಕಾನೂನು ಮತ್ತು ನ್ಯಾಯಿಕ ವ್ಯವಸ್ಥೆ ಹೆಚ್ಚಾದರೂ ಜೀತ ಪದ್ದತಿಯಂತಹ ಅನಿಷ್ಟಗಳು ತಲೆ ಎತ್ತಿರುವುದು ನೋವಿ ಸಂಗತಿ ಎಂದರು. ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಮುಖ್ಯ ಬೀದಿ ಮೂಲಕವಾಗಿ ನೂರಾರು ಜೀತಮುಕ್ತ ಕೂಲಿ ಕಾರ್ಮಿಕರು ಮಿನಿವಿಧಾನಸೌದದ ವರೆಗೆ ಒರಿಸ್ಸಾ ಸರ್ಕಾರದ ವಿರುದ್ದ ಘೋಷಣೆ ಕೂಗಿ, ಮಿನಿವಿಧಾನಸೌಧದ ಬಳಿ ಕೆಲಕಾಲ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಶೈಲಜಾ ಅವರಿಗೆ ಮನವಿ ಸಲ್ಲಿಸಿದರು. ಜೀವಿಕ ಸಂಘಟನೆಯ ತಾಲೂಕು ಸಂಚಾಲಕ ಚನ್ನರಾಯಪ್ಪ, ಮಹಿಳಾ ಸಂಚಾಲಕಿ ಅಮರಾವತಿ, ಹೋಬಳಿ ಸಂಚಾಲಕ ರಾಮಾಂಜನೇಯ, ಸುಜಾತ, ತಾಲೂಕು ಒಕ್ಕೂಟದ ಅಧ್ಯಕ್ಷ ಅಶ್ವತ್ಥಪ್ಪ ಇದ್ದರು.
ಬಂಗಾರಪೇಟೆಯಲ್ಲೂ...
ಬಂಗಾರಪೇಟೆ: ಒಡಿಸಾದಲ್ಲಿ ಇಬ್ಬರು ಜೀತದಾಳುಗಳ ಕೈ ಕತ್ತರಿಸಿರುವ ಘಟನೆಯನ್ನು ಇಲ್ಲಿನ ಜೀತ ವಿಮುಕ್ತ ಕರ್ನಾಟಕ ಕಾರ್ಯಕರ್ತರು ತೀವ್ರವಾಗಿ ಖಂಡಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಒಡಿಸಾದಲ್ಲಿ ಕೈ ಕಳೆದುಕೊಂಡಿರುವ ಇಬ್ಬರು ಜೀತದಾಳುಗಳಿಗೆ ನ್ಯಾಯ ಕೊಡಿಸಬೇಕು, ಜೀತ ಸಮಸ್ಯೆ ಕುರಿತು ಜ್ಞಾನ ಮತ್ತು ಕಾಳಜಿ ಇರುವ ವಕೀಲರನ್ನು ನೇಮಿಸಬೇಕು ಸೇರಿದಂತೆ ಮತ್ತಿತರ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಉಷಾ ಅವರಿಗೆ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವವನ್ನು ಜೀವಿಕ ತಾಲೂಕು ಸಂಚಾಲಕ ರಾಮಚಂದ್ರಪ್ಪ, ತಿಪ್ಪಣ್ಣ, ಸುಮತಿ, ಶಕುಂತಲ, ಅರುಣ, ಭಾರತಿ, ವನಜಾಕ್ಷಿ, ಚಿಟ್ಟಮ್ಮ, ಭವ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

