ಕಾಮಗಾರಿ ಶೀಘ್ರ ಮುಗಿಸಲು ಮನವಿ
ಮಾಲೂರು: ನೂರು ಹಾಸಿಗೆಯ ಆಸ್ವತ್ರೆ ಕಾಮಗಾರಿ ಆಡಚಣೆಯಿಂದ ಅಪರೇಷನ್ ಥಿಯೇಟರ್ ಮುಚ್ಚಿದ್ದು, ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಶೀಘ್ರ ಪೂರ್ಣಗೊಳಿಸುವಂತೆ ಒತ್ತಡ ತರಬೇಕು ಎಂದು ಸರ್ಕಾರಿ ಆಸ್ವತ್ರೆ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ಗೌಡ ಆಸ್ವತ್ರೆಗೆ ಭೇಟಿ ನೀಡಿದ್ದ ತಾಪಂ ಅಧ್ಯಕ್ಷ ಪುಟಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಹಾಲಿ ಅಸ್ವತ್ರೆಗೆ ಹೊಂದಿಕೊಂಡಂತೆ ನಿರ್ಮಿಸುತ್ತಿರುವ ನೂರು ಹಾಸಿಗೆ ಆಸ್ವತ್ರೆ ಕಟ್ಟಡ ಕಾಮಗಾರಿ ವೀಕ್ಷಿಸಿಲು ಬಂದಿದ್ದ ತಾಪಂ ಅಧ್ಯಕ್ಷ ಪುಟಸ್ವಾಮಿರನ್ನು ಭೇಟಿ ಮಾಡಿದ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ಗೌಡ, ಕಾಮಗಾರಿಯಿಂದ ಧೂಳು ಹೆಚ್ಚಾಗಿ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಪರೇಷನ್ ಥಿಯೇಟರ್ನ್ನು ಕಳೆದ ಎಂಟು ತಿಂಗಳಿಂದ ಮುಚ್ಚಲಾಗಿದೆ. ಇದರಿಂದ ಅಪರೇಷನ್ ಪ್ರಕರಣದ ರೋಗಿಗಳನ್ನು ಬೇರೆಡೆ ಕಳುಹಿಸಬೇಕಾದ ಸ್ಥಿತಿ ಇದ್ದು, ಬಡ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಮನವಿ ಮಾಡಿದರು.
ವೈದ್ಯಾಧಿಕಾರಿಗಳ ಬೇಡಿಕೆಗೆ ಸ್ಪಂದಿಸಿದ ತಾಪಂ ಅಧ್ಯಕ್ಷ ಪುಟಸ್ವಾಮಿ ಈ ತಿಂಗಳ 6 ರಂದು ನಡೆಯಲಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುವುಗಾಗಿ ತಿಳಿಸಿದರು. ಸಹಾಯಕ ಆರೋಗ್ಯ ಆಡಳಿತಾಧಿಕಾರಿ ಚಂದ್ರ ಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಸೋಮಶೇಖರ್, ಕಿರಣ್, ರಾಮಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

