ಕೋಲಾರ

'ಚಿಟ್ಟೆ ಸಾಲು' ಶಿಶು ಕವಿತೆಗಳ ಲೋಕಾರ್ಪಣೆ

Published On :

ಮಾಲೂರು: ಬೆಳಕು ಜಗತ್ತಿಗೆ ಎಷ್ಟು ಮುಖ್ಯವೂ ಉತ್ತಮ ಸಮಾಜ ನಿರ್ಮಾಣಕ್ಕೆ ಕವಿಗಳ ಕಾವ್ಯ ಅಷ್ಟೇ ಮುಖ್ಯ ಎಂದು ಅಂಕಣಕಾರ ಎಚ್.ಎಸ್. ಸತ್ಯನಾರಾಯಣ ತಿಳಿಸಿದರು.
ಚೈತನ್ಯ ಕಲಾ ನಿಕೇತನ ಸಂಸ್ಥೆ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 59 ನೇತಿಂಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ ಕವಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಮಕ್ಕಳ ಸಾಹಿತ್ಯ ಭವಿತವ್ಯದ ಅಭಿವೃದ್ಧಿಗೆ ಪೂರಕವಾಗಿದ್ದರೂ ಮಕ್ಕಳ ಸಾಹಿತ್ಯ ಅಲಕ್ಷ್ಯಕ್ಕೆ ಒಳಗಾಗಿರುವುದು ತುಂಬಾ ವಿಷಾಧನೀಯ ಎಂದರು.
ಕವಿ ಡಿ.ಟಿ. ಪ್ರಸನ್ನ ಅವರ ಚಿಟ್ಟೆ ಸಾಲು ಶಿಶು ಕವಿತೆಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಕವಿ ಸತ್ಯಮಂಗಳ ಮಹದೇವ್, ಪೋಷಕರ ಒತ್ತಡ ಮಕ್ಕಳ ಮೇಲೆ ಅತೀವ ದುಷ್ಟರಿಣಾಮ  ಬೀರುತ್ತಿದ್ದು, 13 ವರ್ಷದ ನಂತರದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ. ಇದು ಸಮಾಜದಲ್ಲಿ ಇಂದು ನಡೆಯುತ್ತಿರುವ ಅನೇಕ ಅತ್ಯಾಚಾರ ಹಾಗೂ ಅನಾಹುತಗಳಿಗೆ ಕಾರಣವಾಗಿದೆ ಎಂಬುದನ್ನು ನವಿರಾಗಿ ತಮ್ಮ ಕವಿತೆಯಲ್ಲಿ ತಿಳಿಸಿರುವ ಪ್ರಸನ್ನ ಅವರು ಮುಗ್ದ ಮನಸ್ಸಿನ ಮಕ್ಕಳಲ್ಲಿರುವ ಅತಿವೇಗದ ಗ್ರಹಿಕೆಯನ್ನು ತಮ್ಮ ರಚನೆಯ ಕವಿತೆ ಸಾಲುಗಳನ್ನು ಕಾಣಿಸುತ್ತದೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಅಶ್ವಥ್ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಕವಿ ನಾ. ಗುರುಮೂರ್ತಿ ಪ್ರಸ್ತಾವಿಕ ಮಾತನ್ನಾಡಿದರು. ಸಂಸ್ಥೆಯ ಅಧ್ಯಕ್ಷ ಜ.ಮು. ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚು.ಸಾ.ಪ. ಕಾರ್ಯದರ್ಶಿ ಪಿ. ನಾರಾಯಣಪ್ಪ, ತಾಲೂಕು ಅಧ್ಯಕ್ಷ ಕುಂ. ಚಂದ್ರಪ್ಪ, ಶರಣಪ್ಪ ಗಬ್ಬೂರ್ ಮಾತನಾಡಿದರು. ಕಲಾವಿದ ಕಾಟಯ್ಯ, ಕವಿಗಳಾದ ಡಾ.ನಾ. ಮುನಿರಾಜು, ಸುರೇಶ್ ಜಕಾತಿ,ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ತಿಮ್ಮಸಂದ್ರ ನಾಗರಾಜ್, ಹುಲ್ಕೂರ್ ವೆಂಕಟೇಶ್, ಇಂದ್ರಮ್ಮ, ಬಿ.ಎಚ್. ಸುರೇಶ್, ಸರ್ವೆಶ್, ಶ್ರೀನಿಧಿ ಶ್ರೀನಿವಾಸ್, ಗುಟ್ಟಪ್ಪ,ನಾಗೂಂಡಹಳ್ಳಿ ಶ್ರೀನಿವಾಸ್, ನಾರಿಗಾನಹಳ್ಳಿ ಶ್ರೀನಿವಾಸ್, ಕೋಳಾಲಪ್ಪ, ಭರತ್, ವೆಂಕಟೇಶ್, ಸತ್ಯನಾರಾಯಣ್, ಪ್ರವೀಣ್ ಕವನಗಳನ್ನು ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.