ಕೋಲಾರ

ಸುದ್ದಿ ಸಂಕ್ಷೇಪ

Published On :

ಅಂಗವಿಕಲರ ಬಸ್ ಪಾಸ್ ಅವಧಿ ವಿಸ್ತರಣೆ
ಗೌರಿಬಿದನೂರು: ರಾಜ್ಯ ಸಾರಿಗೆ ಸಂಸ್ಥೆಯ ಅಂಗವಿಕಲರ ರಿಯಾಯಿತಿ ಬಸ್ ಪಾಸ್ ಅವಧಿಯನ್ನು 2004 ಫೆಬ್ರವರಿ14ರವರಿಗೂ ವಿಸ್ತರಿಸಲಾಗಿದ್ದು, ಅಂಗವಿಕಲರು ಬಸ್‌ಪಾಸ್ ನವೀಕರಿಸಿಕೊಳ್ಳಬೇಕೆಂದು ಕೃಷ್ಣಪ್ಪ ಹಾಗೂ ಲೇಪಾಕ್ಷಿ ಸಂತೋಷರಾವ್ ತಿಳಿಸಿದ್ದಾರೆ.
ಮಹಿಳೆ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಮೆಲ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡಚಿನ್ನಹಳ್ಳಿ ಗ್ರಾಮದ ಬತ್ಯಪ್ಪ ಎಂಬವರ ಮಗಳಾದ ಭಾಗ್ಯ(32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬೆಮೆಲ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೀಘ್ರವೇ ಫ್ಲೋರೈಡ್ ಮುಕ್ತ ನೀರಿನ ಘಟಕ
ಚಿಂತಾಮಣಿ: ಪ್ಲೋರೈಡ್ ಮುಕ್ತ ನೀರನ್ನು ಗ್ರಾಮೀಣ ಜನರಿಗೆ ಒದಗಿಸಲು ಪ್ಲೋರೈಡ್ ಮುಕ್ತ ನೀರಿನ ಘಟಕವನ್ನು ಶೀಘ್ರವೇ ಪ್ರಾರಂಭಿಸಲಾಗುವುದೆಂದು ಕೆಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಡಿ.ಆರ್. ಶಿವಕುಮಾರಗೌಡ ಹೇಳಿದರು. ತಾಲೂಕಿನ ಚಿಲಕಲನೇರ್ಪು ಹೋಬಳಿ ಏನಿಗದಲೆ ಗ್ರಾಮದಲ್ಲಿ ಕೆಜೆಪಿ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವಾರು ಹಳ್ಳಿಗಳಲ್ಲಿ ಪ್ಲೋರೈಡ್ ನೀರಿನ ಅಂಶ ಹೆಚ್ಚಾಗಿದ್ದು, ಇದರಿಂದ ಜನರಿಗೆ ಮೂಳೆ, ಕಣ್ಣು, ಹಲ್ಲು ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದು, ಇದನ್ನು ತಪ್ಪಿಸಲು ಪ್ಲೋರೈಡ್ ಮುಕ್ತ ನೀರಿನ ಘಟಕಕ್ಕೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೆಜೆಪಿಯ ದಯಾನಂದ್, ಆಂಜಪ್ಪ, ಚಲಪತಿ, ವೆಂಕಟರವಣ, ಬಂಗಾರುಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.