ಕೋಲಾರ

ಒಡಿಸ್ಸಾ ಪ್ರಕರಣ ಖಂಡಿಸಿ ಧರಣಿ

Published On :

ಚಿಕ್ಕಬಳ್ಳಾಪುರ: ಇತ್ತೀಚೆಗೆ ಒಡಿಸ್ಸಾದಲ್ಲಿ ಇಬ್ಬರು ಜೀತದಾಳುಗಳ ಬಲಗೈಯನ್ನು ಕತ್ತರಿಸಿದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಜೀತ ಪದ್ಧತಿಯಿಂದ ಬಡಜನರನ್ನು ದೂರ ಮಾಡಬೇಕೆಂದು ಒತ್ತಾಯಿಸಿ ಜೀವಿಕ ಸಂಘಟನೆ ಪ್ರತಿಭಟಿಸಿತು.
ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ಹೊರಟ ಜೀವಿಕ ಸಂಘಟನೆ ಕಾರ್ಯಕರ್ತರು ಜೀತಪದ್ಧತಿ ವಿರುದ್ಧ ಘೋಷಣೆ ಕೂಗಿ, ಜೀತದಾಳುಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರವನ್ನು ಆಗ್ರಹಿಸಿದರು.
ಕೂಡಲೇ ಒಡಿಸ್ಸಾ ಸರ್ಕಾರ ಕ್ರೂರತ್ವವನ್ನು ಮೆರೆದ ಮಾಲೀಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಹಲ್ಲೆಗೆ ಗುರಿಯಾದವರಿಗೆ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದ ಮುಖಂಡರು, ಜೀತ ಪದ್ಧತಿಯಿಂದ ಬಿಡುಗಡೆಗೊಳಿಸಿ ಜೀತದಾಳುಗಳಿಗೆ ನ್ಯಾಯ ಒದಗಿಸಲು ತ್ವರಿತಗತಿನ್ಯಾಯಾಲಯ ಸ್ಥಾಪನೆ ಮಾಡಬೇಕು. ಈಗಾಗಲೇ ಬಿಡುಗಡೆ ಜೀತದಾಳುಗಳಿಗೆ ಬಿಡುಗಡೆ ಪರಿಹಾರ ಮತ್ತು ಸವಲತ್ತುಗಳನ್ನು ಒದಗಿಸಬೇಕೆನ್ನುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಜೀವಿಕ ಸಂಘಟನೆಯ ಗೋಪಾಲ್, ನಾರಾಯಣಸ್ವಾಮಿ, ರತ್ನಮ್ಮ, ಮುನಿಕೃಷ್ಣ, ಸಿ.ಎಂ. ಮೂರ್ತಿ, ರವಿಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.