ಕೋಲಾರ

ರೈತ ಸಂಘದ ಅಧ್ಯಕ್ಷರ ಗಡಿಪಾರಿಗೆ ಆಗ್ರಹ

Published On :

ಬಂಗಾರಪೇಟೆ: ರೈತ ಸಂಘದ ಹೆಸರಲ್ಲಿ ವರ್ತಕರಿಂದ ಹಣ ಸುಲಿಗೆ ಮಾಡುತ್ತಿರುವ ಸಂಘದ ಅಧ್ಯಕ್ಷ ರಾಮೇಗೌಡರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ನೂರಾರು ವರ್ತಕರು ಹಾಗೂ ಸಾರ್ವಜನಿಕರು ತಾಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ರಾಮೇಗೌಡ ರೈತ ಸಂಘದ ಅಧ್ಯಕ್ಷರಾದ ಬಳಿಕ ಪಟ್ಟಣದಲ್ಲಿ ಸಣ್ಣ, ಮಧ್ಯಮ ವ್ಯಾಪಾರಿಗಳು ಹಾಗೂ ವರ್ತಕರು ಮುಕ್ತವಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ, ನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ವರ್ತಕರ ಬಳಿ ಬಂದು ಹಣಕ್ಕಾಗಿ ಪೀಡಿಸುವರು ಹಣ ನೀಡಲು ನಿರಾಕರಿಸಿದರೆ ಇಲ್ಲಸಲ್ಲದ ಆರೋಪ ಮಾಡಿ ವರ್ತಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಮೆಗೌಡ ಮತ್ತು ಅವರ ಸಹಚರರು ರೈತ ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಇತರೇ ರೈತರ ಸಂಘದ ಸದಸ್ಯರಿಗೆ ಮಸಿ ಬಳೆಯುತ್ತಿದ್ದಾರೆ, ರೋಲ್ಕಾಲ್ ಮಾಡುವುದು ರಾಮೇಗೌಡರಿಗೆ ಕಾಯಕವಾಗಿದೆ. ಇತ್ತೀಚೆಗೆ ಪಟ್ಟಣದಲ್ಲಿ ನಡೆದ ರೈತ ಸಂಘದ ಸಮಾವೇಶಕ್ಕೆ ಪಟ್ಟಣದ ಎಲ್ಲಾ ಅಂಗಡಿಗಳಿಂದ ಹಣ ವಸೂಲಿ ಮಾಡಲಾಗಿದೆ ಅಲ್ಲದೆ ಅವರು ಹೇಳಿದಷ್ಟು ಹಣ ನೀಡದ ವರ್ತಕರನ್ನು ಗುರಿಯಾಗಿಟ್ಟುಕೊಂಡು ನಂತರ ಅವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ.
ರೈತ ಸಂಘದ ಸಮಾವೇಶಕ್ಕೆ ಭಾರತ್ ಟ್ರೇಡಿಂಗ್ ಕಂಪನಿ ಮಾಲೀಕರು ಹಣ ನೀಡಲಿಲ್ಲವೆಂದು ಗುರುವಾರ ತಮಿಳುನಾಡಿನಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದಾರೆಂದು ಆರೋಪಿಸಿ ಅಂಗಡಿ ಮೇಲೆ ಅಕ್ರಮವಾಗ ದಾಳಿ ಮಾಡಿ ವರ್ತಕರಲ್ಲಿ ಭೀತಿ ಉಂಟು ಮಾಡಲಾಗಿದೆ. ರೈತ ಸಂಘ ಇರುವುದು ರೈತರಿಗೆ ಅನ್ಯಾಯವಾದರೆ ಪ್ರತಿಭಟಿಸಲು. ಆದರೆ ಇವರು ರೈತರ ಹಿತಾಸಕ್ತಿಯನ್ನು ಬಿಟ್ಟು ಅಡ್ಡ ದಾರಿ ಹಿಡಿದಿದ್ದಾರೆ. ಎಂದು ತಹಸೀಲ್ದಾರ್ ಉಷಾರವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.