ಕೋಲಾರ

ಪ್ರತಿಯೊಬ್ಬ ನಾಗರಿಕನಿಗೆ ದೇಶ ಭಕ್ತಿ ಅಗತ್ಯ

Published On :

ಮಾಲೂರು: ದೇಶದ ಪ್ರತಿಯೊಬ್ಬ ನಾಗರಿಕನು ದೇಶ ಭಕ್ತಿ ಹಾಗೂ ಬಹುಸಂಖ್ಯಾತ ಧರ್ಮಕ್ಕೆ ಗೌರವ ಸಲ್ಲಿಸಬೇಕು ಎಂದು ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ರಮೇಶ್‌ರಾಜ್ ಹೇಳಿದರು. ಪಟ್ಟಣದ ಕೃಷಿಕ ಸಮಾಜದಲ್ಲಿ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ತರುಣ ಸಮಾವೇಶ ಹಾಗೂ ಶ್ರೀರಾಮ ಸೇನೆ ಬೆಂಬಲಿತ ನಮೋ ಬ್ರೀಗ್ರೇಡ್‌ಗೆ ಚಾಲನೆ ನೀಡಿ ಮಾತನಾಡಿ, ಹಿಂದೂಸ್ತಾನದಲ್ಲಿ ಮತಾಂತರ ಹೆಚ್ಚಾಗಿದ್ದು, ಮತ ಬ್ಯಾಂಕಿಗಾಗಿ ಧರ್ಮರಕ್ಷಿಸಬೇಕಾದವರೇ ಮತಾಂತರ ಮಾಡುವವರ ಬೆನ್ನಲೆಬು ಆಗಿ ನಿಲ್ಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಶ್ರೀ ರಾಮ ಸೇನೆ ಕಾರ್ಯಕರ್ತರು ತಮ್ಮ ಪ್ರಾಣ ತೊರೆದು ಹಿಂದೂ ಧರ್ಮ ಕಾಪಾಡಲಿದ್ದಾರೆ ಎಂದರು. ಹಿಂದೂಸ್ತಾನ್ ಶ್ರೀರಾಮ್ ಹಾಗೂ ಆರ್‌ಎಸ್‌ಎಸ್‌ನ ಅಮರನಾಥ್ ಮಾತನಾಡಿದರು. ಮಾಲೂರು ತಾಲೂಕು ಶ್ರೀರಾಮ ಸೇನೆಯ ನೂತನ ಪದಾಧಿಕಾರಿಗಳನ್ನು ಹಾಗೂ ನೂತನವಾದ ಶ್ರೀರಾಮ ಸೇನೆ ಬೆಂಬಲಿತ ನಮೋ ಬ್ರೀಗ್ರೇಡ್ ಪದಾಧಿಕಾರಿಗಳನ್ನು ಆರಿಸಲಾಯಿತು. ಶ್ರೀ ರಾಮಸೇನೆ ತಾಲೂಕು ಸಂಚಾಲಕ ಭರತ್‌ಭೂಷಣ್, ಉಪಾಧ್ಯಕ್ಷ-ಶ್ಯಾಮ್‌ಕುಮಾರ್, ಪ್ರಧಾನ ಕಾರ್ಯದರ್ಶಿ-ಭಾನುಮೂರ್ತಿ, ಕಾರ್ಯದರ್ಶಿ-ಚೇತನ್, ನಗರ ಸಂಚಾಲಕ-ಸಂತೋಷ್,ನಗರ ಉಪಾಧ್ಯಕ್ಷ-ಸತೀಶ್, ನಗರ ಕಾರ್ಯದರ್ಶಿ-ರಮೇಶ್. ಶ್ರೀರಾಮ ಸೇನೆ ಬೆಂಬಲಿತ ನಮೋ ಬ್ರೀಗ್ರೆಡ್ ತಾಲೂಕು ಸಂಚಾಲಕ-ನಾಗರಾಜು, ಉಪಾಧ್ಯಕ್ಷ-ಹೇಮಂತ್, ಕಾರ್ಯದರ್ಶಿ-ಶಿವಕುಮಾರ್, ನಗರ ಸಂಚಾಲಕ-ಮನೋಹರ್, ನಗರ ಕಾರ್ಯದರ್ಶಿ-ಶ್ರೀಕಾಂತ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.