ಸಮುದಾಯ ಅಭಿವೃದ್ಧಿಗೆ ರಾಜಕೀಯ ನೆರವು
ಕನ್ನಡ ಪ್ರಭವಾರ್ತೆ,ಮಾಲೂರು.ಜು.1
ಇಂದಿನ ಪರಿಸ್ಥತಿಯಲ್ಲಿ ರಾಜಕೀಯ ಸ್ಥಾನಮಾನ ಸಿಕ್ಕಿದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯವಿರುವುದರಿಂದ ಜನಾಂಗವು ಶಕ್ತಿಶಾಲಿಯಾಗಿ ಸಂಘಟನೆಯಾಗುವುದು ಮುಖ್ಯವಾಗಿದೆ ಎಂದು ಬೆಂಗಳೂರು ಪೂರ್ವ ತಾಲೂಕು ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವೇಣುಗೋಪಾಲ್ ಹೇಳಿದರು.
ತಾಲೂಕಿನ ಯಶವಂತಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ತಿಗಳರ ವಹ್ನಿಕುಲ ಸಂಘ ಹಾಗೂ ತಾಲೂಕು ತಿಗಳರ ವಹ್ನಿಕುಲ ಕ್ಷತ್ರಿಯ ಸಂಘದ ವತಿಯಿಂದ ನೂತನ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಅವರು ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಸ್ಥಾನಮಾನ ಹೊಂದಿದ್ದರೆ ಮಾತ್ರ ಅ ಸಮುದಾಯದ ಸರ್ವತೋಮುಖ ಏಳಿಗೆ ಸಾದ್ಯ ಎಂದರು.
ಸದಸ್ಯರ ನೋಂದಣಿ: ರಾಜ್ಯದ ಜನಸಂಖ್ಯೆಯಲ್ಲಿ ಪ್ರಭಾವಿ ಜನಾಂಗವಾಗಿರುವ ತಿಗಳ ಸಮುದಾಯದಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಂಘಟನೆ ಅಗತ್ಯ. ಈ ನಿಟ್ಟಿನಲ್ಲಿ ಸಮುದಾಯವನ್ನು ರಾಜ್ಯಾದ್ಯಂತ ಸಂಘಟಿಸುವ ಜತೆಯಲ್ಲಿ ಪ್ರಸ್ತುತ ವರ್ಷದಲ್ಲಿ 50 ಸಾವಿರ ಸಾಮುದಾಯದ ಮಂದಿಯನ್ನು ಸದಸ್ಯರನ್ನಾಗಿ ನೋಂದಣಿ ಮಾಡಿಸುವ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಹಿಂದೆ ಸಂಘದ ಪದಾಧಿಕಾರಿಗಳು ಸಮುದಾಯದ ಬೆಳವಣಿಗೆಗಾಗಿ ದುಡಿಯದೆ ಸ್ವಹಿತಾಶಕ್ತಿ ಕಡೆ ಗಮನ ನೀಡಿದ್ದರು. ಇದರಿಂದ ನಮ್ಮ ಸಮುದಾಯದ ಜನತೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಈ ನಿಟ್ಟಿನಲ್ಲಿ ಯುವ ಪಡೆಯೊಂದಿಗೆ ಈ ಬಾರಿ ಸಂಘದ ಚುನಾವಣೆ ಎದುರಿಸಿ ಗೆಲವು ಸಾಧಿಸಲಾಗಿದೆ ಎಂದರು.
ರಾಜಕೀಯ ಪ್ರಜ್ಞೆ ಅಗತ್ಯ: ರಾಜ್ಯ ತಿಗಳರ ಸಂಘದ ರಾಜ್ಯಾಧ್ಯಕ್ಷ ಸಿ.ಜಯರಾಜ್ ಮಾತನಾಡಿ, ಕೃಷಿಯನ್ನೇ ನಂಬಿರುವ ತಿಗಳ ಸಮುದಾಯದವರು ಕಷ್ಟ ಜೀವಿಗಳು,ಅವರಲ್ಲಿ ರಾಜಕೀಯ ಪ್ರಜ್ಞೆ ಕಡಿಮೆ ಇರುವುದರಿಂದಲ್ಲೇ ಇತರೆ ಜನಾಂಗದಂತೆ ರಾಜಕೀಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಸಮುದಾಯ ಅಭಿವೃದ್ಧಿಗಾಗಿ ತಮ್ಮ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಸಂಘಟನೆಯ ಶಕ್ತಿಯನ್ನು ತೋರಿಸಬೇಕು ಎಂದರು.
ಸಮುದಯ ಮುಖಂಡರುಗಳಾದ ಸಿ.ಮುನಿಯಪ್ಪ, ಎನ್.ವಿ.ಈಶ್ವರ್, ವೈ.ಜಗದೀಶ್,ವಿ.ರಾಮಚಂದ್ರ, ಶ್ರೀಧರ್, ಆಶೋಕ್, ನಾಗರಾಜ್, ಬಾಬು ಅದಿತ್ಯ, ಹೂಡಿ ವಿಜಯ ಕುಮಾರ್, ಜ್ಯೋತಿ ಮುನಿಯಪ್ಪ, ತಾಲೂಕು ಸಮಿತಿಯ ಎಂ.ವಿ.ನಾರಾಯಣಸ್ವಾಮಿ, ಎಂ.ಟಿ.ಗಿರಿಯಪ್ಪ, ಎಂ.ಪಿ.ರಾಮಚಂದ್ರ, ಕೆ.ಆರ್.ವೆಂಕಟಸ್ವಾಮಿ, ಎಂ.ಕೃಷ್ಣಪ್ಪ, ಕೋಡಿಹಳ್ಳಿ ವೆಂಕಟೇಶ್, ಲಕ್ಕೂರು ಗುರುಸ್ವಾಮಿ,ರೋಜಾ ರಾಜಪ್ಪ,ಕೆ.ಇ.ಬಿ.ನಾರಾಯಣಪ್ಪ, ಕೆ.ಮುನಿರಾಜು, ಎಂ.ಪಿ.ಚಿನ್ನಪ್ಪ, ನಾರಾಯಣಸ್ವಾಮಿ,ಪೆರಣ್ಣ, ಮೇಮಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

