ಡಾ.ಗೂಳೇಗೌಡರಿಗೆ ಅಂತಾರಾಷ್ಟ್ರೀಯ ಗೌರವ
ಕೆಜಿಎಫ್: ಬೇತಮಂಗಲ ಪಟ್ಟಣದ ಕೆಂಗಲ್ ಹನುಮಂತಯ್ಯ ವಿಚಾರ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಾ.ಎಂ.ಗೂಳೇಗೌಡ ಸಮಾಜ ಸೇವೆ ಗುರುತಿಸಿ ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸೋಷಿಯಲ್ ಆ್ಯಂಡ್ ಎಕನಾಮಿಕ್ ಡೆವಲಪ್ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಜನಸೇವಾ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಡಾ.ಎಂ.ಗೂಳೇಗೌಡ ಅವರು ಜನರಿಗೆ ಕುಡಿಯುವ ನೀರು ಸಿಗಲು ಗಂಗಾ-ಕಾವೇರಿ ಜೀವ ನದಿಗಳ ಜೋಡಣೆ ಬಗ್ಗೆ 25 ವರ್ಷಗಳಿಂದ ಸುದೀರ್ಘವಾಗಿ ವರದಿ ಸಲ್ಲಿಸುತ್ತಾ ಕೇಂದ್ರದ ಗಮನ ಸೆಳೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಸುಮಾರು 11 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸು ಇಂದಿನ ಭಾರತದ ಪ್ರಧಾನಿ ಮೋದಿ ಅವರ ನನಸು ಮಾಡುವ ಬಗ್ಗೆ ದೇಶದ ಜನರ ನೀರಿನ ದಾಹವನ್ನು ನೀಗಿಸಲು ಮತ್ತು ಅಂತಾರಾಜ್ಯಗಳ ನೀರಾವರಿ ಸಮಸ್ಯೆ ಬಗೆಹರಿಸಲು ಇದೇ ಮಾರ್ಗವೆಂದು ಸಾಕಷ್ಟು ವರದಿ ಪ್ರಕಟಿಸಿದ್ದಾರೆ. ಇವರ ಹೋರಾಟಕ್ಕೆ ಹಲವು ಕೇಂದ್ರ ನಾಯಕರು ಬೆಂಬಲ ಸೂಚಿಸಿದ್ದಾರೆ.
ಜನಪದ ಕಲಾವಿದರಿಗೆ ಸನ್ಮಾನ
ಚಿಂತಾಮಣಿ: ತಾಲೂಕಿನ ಕಾಗತಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಚನ್ನಕೇಶವಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಜನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಮರಿಯಪ್ಪ, ಕೆ.ಎಂ. ನಾರಾಯಣ ಸ್ವಾಮಿ, ಭಕ್ತರಹಳ್ಳಿ ಶಿವಶಂಕರ್, ಬೆಳಮಾರನಹಳ್ಳಿ ವಿಶ್ವನಾಥ್ ಹಾಗೂ ಸೀಪುರ ನಾಗೇಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಅವರ ಕಾರ್ಯವನ್ನು ಶ್ಲಾಘಿಸಲಾಯಿತು.
ಧರ್ಮದರ್ಶಿ ಕಾಗತಿ ವಿ. ವೆಂಕಟರತ್ನಂ, ಕುರುಬೂರು ಆನಂದಗೌಡ, ಚಿಂತಾಮಣಿ ಬಾಲಕರ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಎನ್. ರಮಣಾ ರೆಡ್ಡಿ, ಎಸ್.ಸಿ. ಶ್ರೀನಿವಾಸ ರೆಡ್ಡಿ, ಜುವೆಲರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಆರ್. ಶಿವಕುಮಾರ್, ನಿವೃತ್ತ ಶಿಕ್ಷಕರಾದ ಅಶ್ವತ್ಥನಾರಾಯಣ, ಹಿರಿಯ ನಾಗರೀಕರ ವೇದಿಕೆ ಅಧ್ಯಕ್ಷ ಕೆ.ಎಸ್. ಅಪ್ಪಾಜಿ ರೆಡ್ಡಿ, ಯುವಜನ ಸೇವಾಧಿಕಾರಿ ಲಕ್ಷ್ಮಣ ರೆಡ್ಡಿ, ಜನಪದ ಗಾಯಕ ಸೀಕಲ್ ನರಸಿಂಹಪ್ಪ, ಪಟೇಲ್ ಬೈರಾರೆಡ್ಡಿ, ಚುಸಾಪ ಪ್ರಧಾನ ಕಾರ್ಯದರ್ಶಿ ರಾಯಲ್ ಶಿ .ಮ. ಮಂಜುನಾಥ್, ಕೆ.ಪಿ. ನಾಗರಾಜ ರಾವ್, ಎಂ.ವಿ. ಅಶ್ವತ್ಥ ನಾರಾಯಣ ಮತ್ತಿತರರು ಗಣ್ಯರು ಉಪಸ್ಥಿತರಿದ್ದರು.
ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ
ಮುಳಬಾಗಲು: ಪಟ್ಟಣದಲ್ಲಿ ಶ್ರೀನಿವಾಸ ಕಾಂಡಿಮೆಂಟ್ನಿಂದ ನೂಗಲಬಂಡೆವರೆವಿಗೂ 50.54 ಓಪರ್ ಯೋಜನೆಯಡಿ 1 ಕೋಟಿ ವೆಚ್ಚದ ಡಾಂಬರೀಕರಣ ರಸ್ತೆ ಅಭಿವೃದ್ಧಿಗೆ ಶಾಸಕ ಕೊತ್ತೂರು ಮಂಜುನಾಥ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಪಟ್ಟಣವನ್ನು ಸುಂದರವಾಗಿಸಲು ಪುರಸಭೆ ಸದಸ್ಯರು, ಸಾರ್ವಜನಿಕರು, ಸಂಘ ಸಂಸ್ಧೆಗಳು ನೆರವಾಗಬೇಕು. ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಪುರಸಭೆ ಅಧ್ಯಕ್ಷಣಿ ಶಾಹೀನ್ ತಾಜ್, ಉಪಾಧ್ಯಕ್ಷೆ ದಿವ್ಯಾಶ್ರೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ಸದಸ್ಯ ಜಿ.ಠಾಕೂರ್ ಸಿಂಗ್, ಮುಖಂಡ ಕಲ್ಲುಪಲ್ಲಿ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

