ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ
ಬಂಗಾರಪೇಟೆ: ವಿದ್ಯಾರ್ಥಿ ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಆಧುನಿಕ ಯುಗದಲ್ಲಿ ಮಕ್ಕಳು ಮುಂದೆ ಬರಬೇಕೆಂದು ಹೋಪ್ ಮಿನಿಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ರಾಬರ್ಟ್ ಡಿ. ರೋಜಾ ಹೇಳಿದರು. ಅವರು ಹೋಪ್ಮಿನಿಸ್ಟ್ರೀಸ್ ಸಂಸ್ಥೆಯ ವತಿಯಿಂದ ರಾಮಸಂದ್ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ಪುಸ್ತಕ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ಅವಕಾಶವನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ವಿದ್ಯಾಬ್ಯಾಸಕ್ಕೆ ಹೆಚ್ಚು ಗಮನ ನೀಡಿ ವ್ಯಾಸಂಗ ಮಾಡಿ ತಮ್ಮ ತಂದೆ ತಾಯಿ ಕುಟುಂಬವನ್ನು ಪೋಷಣೆ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದರು. ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಆಧುನಿಕ ಜೀವನ ನಡೆಸುತ್ತಿರುವ ಈ ಕಾಲದಲ್ಲಿ ಶಿಕ್ಷಣ ಮುಖ್ಯವಾಗಿದ್ದು ಗುಣಾತ್ಮಕ ಶಿಕ್ಷಣವನ್ನು ಪಡೆಯುವ ಮೂಲಕ ಹೆಚ್ಚು ಸಮಯವನ್ನು ಓದಿಗೆ ಮೀಸಲಿಡಬೇಕು, ಸಮಯ ಅತ್ಯಮೂಲ್ಯವಾದುದು, ಇದನ್ನು ವ್ಯರ್ಥ ಮಾಡದೇ ನಮಗೆ ಸಿಗುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಜಯರಾಜ್, ಶಿಕ್ಷಣ ಸಂಯೋಜಕ ಶ್ರೀರಾಮಯ್ಯ, ತಾಲೂಕು ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಎಲ್. ಆನಂದ್, ತಾಲೂಕು ಶಿಕ್ಷಕರ ಸಂಘದ ಖಜಾಂಚಿ ಶ್ಯಾಮಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಸುರೇಶ್, ಶಿವಪ್ಪ, ಆಣಜನಪ್ಪ, ಸಿಆರ್ಪಿ, ವೆಂಕಟಪ್ಪ, ಶಿಕ್ಷಕ ವೃಂದದವರಾದ ಆನಂದ್, ಶ್ರೀನಾಥ್, ಪದ್ಮಾವತಿ, ವಿಜಯಕುಮಾರ್, ಶ್ರೀನಿವಾಸ್, ತ್ಯಾಗಪ್ಪ, ನಾಗಪ್ಪ, ಸೂರ್ಯಪ್ರಕಾಶ್, ಜಯಶ್ರೀ, ಬಸವರಾಜ, ರವೀಂದ್ರ, ಪ್ರಭಾವತಿ, ರಾಜಪ್ಪ, ಉಮೇಶ್ಕುಮಾರ್, ರಾಮಕೃಷ್ಣಾರೆಡ್ಡಿ, ರವಿಕುಮಾರ್, ನಾರಾಯಣಸ್ವಾಮಿ ಹಾಜರಿದ್ದರು.
ಹಳ್ಳಿಗಳ ಸಮಸ್ಯೆ ಅಲಿಸಲು ಕಾಂಗ್ರೆಸ್ ಪ್ರವಾಸ
ಕೋಲಾರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಸುಗಟೂರು ಹೋಬಳಿಯ 42 ಹಳ್ಳಿಗಳಿಗೆ ಶಾಸಕ ರಮೇಶ್ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಜನತೆಯ ಸಮಸ್ಯೆ ಅಲಿಸಲಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು. ತಾಲೂಕಿನ ಜನ್ನಘಟ್ಟ ಗ್ರಾಮದ ಶ್ರೀ ಗಂಗಮಾಂಬಿಕ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಶಾಸಕರು ಕ್ಷೇತ್ರ ಪ್ರವಾಸಕ್ಕೆ ಬರಲಾಗುತ್ತಿಲ್ಲ. ಶೀಘ್ರವೇ ಶಾಸಕರ ನೇತೃತ್ವದಲ್ಲಿ ಸುಗಟೂರು ಹೋಬಳಿಯಲ್ಲಿ ಪ್ರವಾಸ ಕೈಗೊಂಡು ಕುಡಿಯುವ ನೀರು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿದ್ದಾರೆಂದರು. ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ ಮಾತನಾಡಿ, ಶಾಸಕರಿಗೆ ಶ್ರೀನಿವಾಸಪುರ ಕ್ಷೇತ್ರವನ್ನು ಮಾದರಿ ಮಾಡಬೇಕೆಂಬ ಆಸೆ ಇದೆ ಎಂದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಟಿ.ವಿ. ಕೃಷ್ಣಪ್ಪ, ಸರ್ಕಾರದ ನಾಮ ನಿರ್ದೇಶಕ ಸುಗಟೂರಿನ ಕೆ. ರವಿರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

