ಸಿಇಒ ವಿರುದ್ಧ ಜಿಪಂ ಸದಸ್ಯರ ಮುನಿಸು
ಚಿಕ್ಕಬಳ್ಳಾಪುರ: ಜಿಪಂ ಸ್ಥಾಯಿ ಸಮಿತಿ ಮತ್ತು ಸಾಮಾನ್ಯ ಸಭೆಯ ಗಮನಕ್ಕೆ ತರದೇ ಕೆಲವು ವಿಷಯಗಳಿಗೆ ಅನುಮೋದನೆ ನೀಡಿರುವುದಕ್ಕೆ ಸದಸ್ಯರು ಜಿಪಂ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಕೈಗೊಂಡಿರುವ ನಿರ್ಧಾರಗಳಿಗೆ ಅನುಮೋದನೆ ನೀಡುವಂತೆ ಅಧ್ಯಕ್ಷ ಕೇಶವರೆಡ್ಡಿ ಸಭೆಯನ್ನು ಕೋರಿದಾಗ ಗಮನ ಸೆಳೆದ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ವೇಣುಗೋಪಾಲರೆಡ್ಡಿ, “B~¡Þ^æVæ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಹಿಂದೆ ಅನುಮೋದನೆ ಪಡೆದುಕೊಂಡಿರುವುದರ ಬಗ್ಗೆ ಕೇಳಿದಕ್ಕೆ ತಮಗೆ ಮಾಹಿತಿಯನ್ನು ¬ÞtÄÇ’ ಎಂದರು. ಆಗ ಅಧ್ಯಕ್ಷರು, ಸದಸ್ಯರು ಧ್ವನಿಗೂಡಿಸಿದರು. 2011, 2012, 2013ರಲ್ಲಿ ಸ್ಥಾಯಿ ಸಮಿತಿ ಇರಲಿಲ್ಲ. ಆಗ ಸಮಿತಿಗಳಲ್ಲಿ ಚರ್ಚೆಯಾಗಿರುವ ವಿಷಯಗಳಿಗೆ ಯಾವ ರೀತಿ ಅನುಮೋದನೆ ಪಡೆಯಲಾಗಿದೆ? ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಒಪ್ಪಿಗೆ ಪಡೆಯಲಾಗಿದೆಯೇ? ಎಂದು ಸಿಇಒರನ್ನು ಪ್ರಶ್ನಿಸಿದರು.
ಜವಳಿ ಮತ್ತು ಕೈ ಮಗ್ಗ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ಟೆಂಡರ್ ಕರೆದು ಸಾಮಗ್ರಿಗಳನ್ನು ಖರೀದಿಸಿರುವುದು. ಹಣವನ್ನು ಖರ್ಚು ಮಾಡಿರುವುದರ ಉದಾಹರಣೆ ನೀಡಿದರು.
ಡಿಸಿ ಭವನವೇ ಬೇಡ: ನೂತನ ಜಿಲ್ಲಾಡಳಿತ ಭವನದಲ್ಲಿ ಹಾಕಲಾಗಿದ್ದ ಜಿಪಂ ಸದಸ್ಯರ ಹೆಸರುಗಳನ್ನೊಳಗೊಂಡ ನಾಮಫಲಕವನ್ನು ತೆಗೆಸಿ ಹಾಕಲಾಗಿದೆ. ಮತ್ತೆ ಹಾಕಿಸಬೇಕೆಂದು ಕೋರಿದ್ದರೂ ಸಹ ಇದುವರೆಗೂ ಸ್ಪಂದಿಸಿಲ್ಲ ಎಂದು ಸದಸ್ಯರು ಆರೋಪಿಸಿದರು. ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಅವರು ಅನುಮತಿ ಕೊಟ್ಟ 24 ಗಂಟೆಗಳಲ್ಲಿ ನಾಮಫಲಕವನ್ನು ಹಾಕಿಸುತ್ತೇವೆ. ಎಲ್ಲಾ ಅವರ ಕೈಯಲ್ಲಿದೆ ಎಂದು ಸಿಇಒ ತಿಳಿಸಿದರು.
ಆಗ ಮತ್ತೆ ಸದಸ್ಯರು ಗರಂ ಆದರು. ತಮಗೆ ಜಿಲ್ಲಾಡಳಿತ ಭವನವೇ ಬೇಡ, ಬೇರೆ ಕಡೆ ಬಾಡಿಗೆ ಹೋಗಿ ಇರೋಣ, ಪ್ರಸ್ತುತ ನಮ್ಮ ಹೆಸರುಗಳ ನಾಮಫಲಕವನ್ನು ಹಾಕಿಸಲು ಸಾಧ್ಯವಾಗದಿದ್ದರೆ ಇದು ನಮ್ಮ ಕಟ್ಟಡವಲ್ಲ, ಬಾಡಿಗೆ ಕಟ್ಟಡ ತರಹ. ಪ್ರಸ್ತುತ ಭವನದಲ್ಲಿ ಜಿಪಂ ಇಲಾಖೆಗೆ ಸೇರಿದ ಕೊಠಡಿಗಳ ನಿರ್ವಹಣೆಗೆ ನೀಡಲಾಗುತ್ತಿರುವ ಅನುದಾನವನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಭವನದಲ್ಲಿರುವ ಎಲ್ಲಾ ಇಲಾಖೆಗಳು ವಿದ್ಯುತ್, ಸ್ವಚ್ಛ, ಭದ್ರತೆಗಾಗಿ ನಿರ್ವಹಣಾ ವೆಚ್ಚವನ್ನು ನೀಡಬೇಕು. ಸರ್ಕಾರದಿಂದ 75 ಲಕ್ಷ ಬಿಡುಗಡೆಯಾಗಿದ್ದು, ಇದರಲ್ಲಿ 16 ತಿಂಗಳಿಗೆ 39 ಲಕ್ಷ ನೀಡಬೇಕು. ಇದಕ್ಕೆ ಅನುಮೋದನೆ ನೀಡಬೇಕು ಎಂದರು. ನಾಮಫಲಕವನ್ನು ಹಾಕಿಸಿದ ನಂತರ ಹಣವನ್ನು ನೀಡೋಣ ಎಂದು ಸದಸ್ಯರು ತಿಳಿಸಿ ಸುಮ್ಮನಾದರು.
ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುನೇಗೌಡ, ನಾರಾಯಣಮ್ಮ, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸಭೆಗೆ ರಾಹು ಕಾಟ
ಮೂಢನಂಬಿಕೆಗಳ ನಿಷೇಧದ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿರುವುದರ ನಡುವೆ ರಾಹುಕಾಲ ಇದ್ದ ಕಾರಣ ಜಿ.ಪಂ. ಸಾಮಾನ್ಯ ಸಭೆಯನ್ನು ಒಂದೂವರೆ ಗಂಟೆ ಕಾಲ ಮುಂದೂಡಿದ ಪ್ರಸಂಗ ಇಲ್ಲಿನ ಜಿ.ಪಂ.ನಲ್ಲಿ ನಡೆಯಿತು. 3ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೇಶವರೆಡ್ಡಿರವರ ಅಧ್ಯಕ್ಷತೆಯಲ್ಲಿ ಮೊದಲನೇ ಸಾಮಾನ್ಯ ಸಭೆಯನ್ನು ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಜಿ.ಪಂ.ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಅಧಿಕಾರಿಗಳು ಮತ್ತು ಜಿ.ಪಂ. ಸದಸ್ಯರೆಲ್ಲರೂ ಬೆಳಿಗ್ಗೆ 10.30ಕ್ಕೆ ಆಗಮಿಸಿದರು. ಆದರೆ, ಸಂಬಂಧಪಟ್ಟ ಕಡತಗಳನ್ನು ತೆಗೆದುಕೊಂಡು ಅಧಿಕಾರಿಗಳು ಸಭಾಂಗಣಕ್ಕೆ ಹೋಗಿ ಕುಳಿತುಕೊಂಡರೆ, ಜಿ.ಪಂ.ಸದಸ್ಯರು ಮಾತ್ರ ಬೆಳಿಗ್ಗೆ10.30 ರಿಂದ ಮಧ್ಯಾಹ್ನ 12ಗಂಟೆಯವರೆಗೆ ರಾಹುಕಾಲ ಇದೆ ಎಂದುಕೊಂಡು ಅಧ್ಯಕ್ಷರ ಕೊಠಡಿಗೆ ಹೋಗಿ ಕುಳಿತುಕೊಂಡರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಸಭಾಂಗಣಕ್ಕೆ ಬಂದು ವಿಷಯವನ್ನು ತಿಳಿದುಕೊಂಡು ಮತ್ತೆ ತಮ್ಮ ಕಚೇರಿಗೆ ತೆರಳಿದರು. ಇತ್ತ ಅಧಿಕಾರಿಗಳು ಮಾತ್ರ ಕಾದು ಕಾದು ಸುಸ್ತಾದರು. ರಾಹುಕಾಲ ಹಿನ್ನೆಲೆಯಲ್ಲಿ ಅಧ್ಯಕ್ಷರ ಕೊಠಡಿ ಸೇರಿದ ಸದಸ್ಯರಿಂದ ಚರ್ಚೆ ಜೋರಾಗಿ ನಡೆಯಿತು. ಒಳಗಿನ ವಿದ್ಯಮಾನಗಳು ಹೊರಗೆ ತಿಳಿಯಬಾರದೆಂದು ಬಾಗಿಲನ್ನು ಹಾಕಿಕೊಂಡು ಮಾತುಕತೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

