ದಾನಿಗಳೇ ಪುಸ್ತಕ ತಲುಪಿಸಿದ್ರು!
ಕೋಲಾರ: ತಾಲೂಕಿನ 31 ಕ್ಲಸ್ಟರ್ಗಳ ವ್ಯಾಪ್ತಿಯ 360 ಶಾಲೆಗಳ 22684 ಶಾಲಾ ಮಕ್ಕಳಿಗೆ ಸುಮಾರು 1.25 ಲಕ್ಷಕ್ಕೂ ಹೆಚ್ಚು ನೋಟ್ಬುಕ್ಗಳನ್ನು ನೀಡಿರುವ ದಾನಿಗಳೇ ಶಾಲೆಗೆ ತಲುಪಿಸುವ ಕೆಲಸವನ್ನು ಮಾಡಿ ಗಮನ ಸೆಳೆದರು.
ಛತ್ರಕೋಡಿಹಳ್ಳಿ ಶಾಲೆ ಆವರಣದಲ್ಲಿ ಶನಿವಾರ ತಾಲೂಕಿನ 360 ಸರ್ಕಾರಿ ಶಾಲೆಗಳಿಗೆ ನೋಟ್ಬುಕ್ ತಲುಪಿಸುವ ಕಾರ್ಯ ನಡೆದಿತ್ತು. ಬೆಂಗಳೂರಿನ ಫ್ಯೂಚರ್ ಇಂಡಿಯಾ ಟ್ರಸ್ಟ್, ಸ್ಯಾಮ್ಸಂಗ್ ಸೇವಾ ಟ್ರಸ್ಟ್, ಸೀನಾಪ್ಟೀಸ್ ಕಂಪನಿಗಳು ಸೇವಾ ಮನೋಭಾವದ 50ಕ್ಕೂ ಹೆಚ್ಚು ಉದ್ಯೋಗಿಗಳು ಕೊಡುಗೆಯಾಗಿ ನೀಡಿರುವ ನೋಟ್ಬುಕ್ಗಳನ್ನು ಶಾಲೆಗಳಿಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿದ್ದರು. ಇಷ್ಟೊಂದು ಪ್ರಮಾಣದಲ್ಲಿ ದಾನಿಗಳು ಶಾಲೆಗಳಿಗೆ ನೋಟ್ಬುಕ್ ನೀಡಲು ಅವರನ್ನು ಭೇಟಿಯಾಗಿ ಮನವೊಲಿಸಿ ಕರೆತಂದ ಸಿಆರ್ಪಿ ವೀರಣ್ಣ ಮತ್ತವರ ತಂಡ ದಾನಿಗಳೊಂದಿಗೆ ಸಹಕರಿಸಿತ್ತು. ಈ ಸಂದರ್ಭದಲ್ಲಿ ರವಿಕುಮಾರ್, ನರೇಶ್ ಇದ್ದರು.
ಸೊಸೆಯ ಅನೈತಿಕ ಸಂಬಂಧ; ಘರ್ಷಣೆಯಲ್ಲಿ ಮಾವ ಸಾವು
ಚಿಂತಾಮಣಿ: ಅನ್ಯ ವ್ಯಕ್ತಿ ಜೊತೆ ಸೊಸೆ ಪರಾರಿಯಾದ ಘಟನೆಗೆ ಸಂಬಂಧಿಸಿದ ಘರ್ಷಣೆಯಲ್ಲಿ ಮಾವ ಸಾವನ್ನಪ್ಪಿರುವ ಘಟಣೆ ಬೊಮ್ಮೇಪಲ್ಲಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮೇಪಲ್ಲಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮುನಿಯಪ್ಪ (55) ಎಂಬ ವ್ಯಕ್ತಿ ಘರ್ಷಣೆಯಲ್ಲಿ ಕುಸಿದುಬಿದ್ದು, ಸಾವನ್ನಪ್ಪಿರುವ ದುರ್ದೈವಿ. ಟಿ. ದೇವಪ್ಪಲ್ಲಿ ಗ್ರಾಮದ ಸುರೇಶ ಎಂಬಾತ ಕಳೆದ ಹಲವು ದಿನಗಳ ಹಿಂದೆ ಮೃತಪಟ್ಟ ಮುನಿಯಪ್ಪನ ಮಗ ರಾಮಾಂಜಿ ಜೊತೆಗೆ ಆಗಾಗ ಮನೆಗೆ ಬರುತ್ತಿದ್ದ. ರಾಮಾಂಜಿ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಪತ್ನಿ ಕವಿತ ಜೊತೆ ಪ್ರೀತಿ, ಸ್ನೇಹ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಹೊಂದಿದ್ದ ರಾಮಾಂಜಿ ಪತ್ನಿ ಸುರೇಶನ ಜೊತೆ ಓಡಿ ಹೋಗಿ ಖಾಸಗಿ ಮನೆಯೊಂದರಲ್ಲಿ ವಾಸವಾಗಿದ್ದರು. ಈ ಘಟಣೆಗೆ ಸಂಬಂಧಿಸಿ ಶುಕ್ರವಾರ ರಾತ್ರಿ ಸುರೇಶ ತನ್ನ ಸ್ವಗ್ರಾಮವಾದ ಟಿ. ಗೊಲ್ಲಹಳ್ಳಿಗೆ ಬಂದಿದ್ದನು. ಶನಿವಾರ ಬೆಳಿಗ್ಗೆ ಬೊಮ್ಮೇಪಲ್ಲಿ ಗ್ರಾಮದ ಟೀ ಅಂಗಡಿ ಬಳಿ ನಿಂತಿದ್ದನ್ನು ಕಂಡ ತಕ್ಷಣ ಗ್ರಾಮಸ್ಥರು ಮುನಿಯಪ್ಪನಿಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ. ಮುನಿಯಪ್ಪ ಹಾಗೂ ಸಂಬಂಧಿಕರು ಸುರೇಶನನ್ನು ಹಿಡಿದು, ಸ್ನೇಹಿತನ ಹೆಂಡತಿಯನ್ನೇ ಅನೈತಿಕ ಸಂಬಂಧ ಇಟ್ಟುಕೊಂಡು ನನ್ನ ಮಗನ ಸಂಸಾರ ಹಾಳು ಮಾಡಿದ್ದೀಯ ಎಂದು ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿ ಘರ್ಷಣೆ ಸಂದರ್ಭದಲ್ಲಿ ಮುನಿಯಪ್ಪ ಕುಸಿದು ಬಿದ್ದ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ಘಟಣಾ ಸ್ಥಳಕ್ಕೆ ಡಿವೈಎಸ್ಪಿ, ಸಣ್ಣ ತಿಮ್ಮಪ್ಪ ಭೇಟಿ ನೀಡಿ, ನಡೆದ ಘಟಣೆ ಬಗ್ಗೆ ವಿಚಾರಣೆ ನಡೆಸಿ ಮಾಹಿತಿಯನ್ನು ಪಡೆದಿದ್ದಾರೆ. ಘಟಣೆಗೆ ಸಂಬಂಧಿಸಿದ ಆರೋಪಿ ಸುರೇಶ್ ಮತ್ತಿತರರು ತಲೆ ಮರೆಸಿಕೊಂಡಿರುವುದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

