ಮಾನವ ಹಕ್ಕುಗಳ ಜಾಗೃತಿ ಸಮಿತಿ ರಚನೆ
ಮಾಲೂರು: ತಾಲೂಕಿನಲ್ಲಿ ನೂತನವಾಗಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್ ಅಧ್ಯಕ್ಷತೆಯಲ್ಲಿ ಇಲ್ಲಿನ ಕೃಷಿಕ ಸಮಾಜದಲ್ಲಿ ನಡೆದ ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಎಂ. ವೆಂಕಟೇಶ್, ಗೌರವಾಧ್ಯಕ್ಷರಾಗಿ ಎಂ.ಕೆ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಸಿ. ನಾರಾಯಣರೆಡ್ಡಿ, ಉಪಾಧ್ಯಕ್ಷರಾಗಿ ಎಂ. ಕೃಷ್ಣಪ್ಪ, ಸಿ.ಆರ್. ರೇವಣ್ಣ, ಎಸ್.ಪಿ. ಶಂಕರ್, ಕಾರ್ಯದರ್ಶಿಯಾಗಿ ಶಿವಣ್ಣ, ಸಹ ಕಾರ್ಯದರ್ಶಿಯಾಗಿ ಸಿ.ಎಂ. ನಾರಾಯಣಸ್ವಾಮಿ, ಎನ್. ಬೀರೇಶ್, ಖಂಜಾಚಿಯಾಗಿ ಶಿವಕುಮಾರ್ ರೆಡ್ಡಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್, ಮಂಜುನಾಥ್ ಹಾಗೂ ಕೆ. ಚಂದ್ರಪ್ಪರವರನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್ ರವರು ಮಾನವ ಹಕ್ಕು ಉಳಿಸುವ ಭರದಲ್ಲಿ ಅಧಿಕಾರಿಗಳ ಶೋಷಣೆ ಸಲ್ಲ. ಉಲ್ಲಂಘನೆಯಾಗಿದ್ದ ಪಕ್ಷದಲ್ಲಿ ರಾಜಿಯ ಪ್ರಶ್ನೆ ಇಲ್ಲದೆ ಶೋಷಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು. ಜಿಲ್ಲಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಕೆ.ಸಿ. ಸಂತೋಷ್ ಇದ್ದರು.
ರೈತ ಸಂಜೀವಿನಿ ಪರಿಹಾರ ವಿತರಣೆ
ಮುಳಬಾಗಲು: ತಾಲೂಕಿನ ವಮ್ಮಸಂದ್ರ ಗ್ರಾಮದ ಪ್ರಗತಿಪರ ರೈತ ನಾರಾಯಣಪ್ಪ ಎಂಬುವರು 20-10-2013ರಂದು ಮೃತರಾಗಿದ್ದರು. ಅವರ ಪತ್ನಿ ಸರಸ್ಪತಮ್ಮನವರಿಗೆ ರಾಜ್ಯ ಕೃಷಿ ಮಾರುಕಟ್ಟೆ ಸಮಿತಿ ರೈತಸಂಜೀವಿನಿ ಯೋಜನೆಯಡಿ 50 ಸಾವಿರ ಚೆಕ್ನ್ನು ಸಮಿತಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್ ಮಂಗಳವಾರ ವಿತರಿಸಿದರು.
ಕೊಲೆ ಬೆದರಿಕೆ: ಪ್ರತಿಭಟನೆ ಇಂದು
ಮುಳಬಾಗಲು: ಶಾಸಕ ಕೊತ್ತೂರು ಮಂಜುನಾಥ್ಗೆ ಕೊಲೆ ಬೆದರಿಕಿ ಹಾಕಿರುವ ಆರೋಪಿ ಕರ್ನಾಟಕ ದಲಿತ ರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ನಾರಾಯಣಸ್ವಾಮಿ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ಅಂಬೇಡ್ಕರ್ ವೃತ್ತದವರೆವಿಗೂ ಮೆರವಣೆಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದೆಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

