ಕೋಲಾರ

ಕಾಗತಿ ವಿ. ವೆಂಕಟರತ್ನಮ್‌ರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ನೇಮಿಸಲು ಆಗ್ರಹಿಸಿ

Published On :

ಚಿಂತಾಮಣಿ: ತೃತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾಗತಿ ವಿ. ವೆಂಕಟರತ್ನಂ ಅವರನ್ನು ಅಧ್ಯಕ್ಷರಾಗಿ ಮಾಡಿ ಎಂದು ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಫೆಡರೇಷನ್, ಕನ್ನಡ ಸಾಹಿತ್ಯ ಪರಿಷತ್ ಮನವಿ ಮಾಡಿದೆ. ಪ್ರಸ್ತುತ ಚಿಂತಾಮಣಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ಇವರು 1974 ರಿಂದ ಸಮಾಜಸೇವೆ, ಶ್ರೀ ಮುನೇಶ್ವರ ಸ್ವಾಮಿ ದೇವಾಲಯ ಬಡಗವಾರಹಳ್ಳಿ ಪ್ರತಿ ತಿಂಗಳು ಹುಣ್ಣಿಮೆ ಕಾರ್ಯಕ್ರಮ, ಸಾಧುಸಂತರ ಸೇವೆ, ಹಿರಿಯರಿಗೆ ಸನ್ಮಾನ ಕಾರ್ಯಕ್ರಮ, ಕಾಗತಿ ಗ್ರಾಮದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಜೀರ್ಣೋದ್ಧಾರ 2001 ರಲ್ಲಿ ಉಚಿತ ವಿವಾಹ, 13 ವರ್ಷಗಳಿಂದ ದೇವರ ರಥೋತ್ಸವ, ವಿದ್ಯಾರ್ಥಿ, ಗ್ರಾಮಸ್ಥರಿಗೆ ವಿವಿಧ ಚಟುವಟಿಕೆಗಳಿಗೆ ಸಾರ್ವಜನಿಕರಿಂದ ಹಣ ವಸೂಲಿ ಇಲ್ಲದೆ ನಿರ್ವಹಣೆ, ಸಾಹಿತ್ಯ ಸೇವೆಯಲ್ಲಿ 2006 ರಲ್ಲಿ ಬೀರಮಾನಗಳ್ಳಿ ರಾಮಕೃಷ್ಣ ಸಹಕಾರದೊಂದಿಗೆ ಜಿಲ್ಲಾ ಕಾವ್ಯೋತ್ಸವ, 2011 ರಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಚಿಂತಾಮಣಿಯಲ್ಲಿ, 2006 ರಿಂದ ಈವರೆಗೆ ಸಾಹಿತ್ಯ ವೇದಿಕೆ, ಚುಸಾಪ ಮೂಲಕ ಮನೆಗೊಂದು ಕವಿಗೋಷ್ಠೆ, 2006 ರಿಂದ ಶಾಲಾ ಅಂಗಳದಲ್ಲಿ ಕವಿಕಾವ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. 2011 ರಿಂದ ಎಸ್.ಎಸ್.ಎಲ್.ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಭೋದನ ತರಗತಿಗಳು, 2014 ರಲ್ಲಿ ಪ್ರಥಮ ಬಾರಿಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ರಾಜ್ಯ ಮಟ್ಟದ ಸಂಘ ಸಂಸ್ಥೆಗಳಿಂದ ಕೆ.ಎಸ್. ನರಸಿಂಹಸ್ವಾಮಿ ನೆನಪಿನ ಪ್ರೇಮಕವಿ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳು ದೊರಕಿವೆ. ಈ ರೀತಿಯಾಗಿ ಸಮಾಜಕ್ಕೆ ಹಲವಾರು ಜನಪರ, ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಇವರನ್ನು ತೃತೀಯ ತಾಲೂಕು ಕನ್ನಡ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಮಾಡಿ ಎಂದು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಗೆ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.