ಕೋಲಾರ

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಬಂಗಾರಪೇಟೆ:  ಪಟ್ಟಣದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕು ಪತ್ರ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟದ ಕಾರ್ಯಕರ್ತರು ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆಯ ಮುಂದೆ ಗುರುವಾರ ಜಮಾಯಿಸಿದ ನೂರಾರು ದಲಿತ ಸಂಘಟನೆಯ ಕಾರ್ಯಕರ್ತರು, ಇಂದಿರಾ ಆಶ್ರಯ, ಕುಂಬಾರಪಾಳ್ಯ, ದಿಢೀರ್ ನಗರ, ಸಂಜಯ್ ಗಾಂಧಿ ನಗರದ ವಾಸಿಗಳು ತಮಗೆ ಸಂವಿಧಾನ ಬದ್ಧವಾಗಿ ನೀಡಬೇಕಾಗಿರುವ ಹಕ್ಕುಗಳನ್ನು ನೀಡಿ ಎಂದು ಆಗ್ರಹಪಡಿಸಿದರು.
  ಈ ಸಂದರ್ಭದಲ್ಲಿ  ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೂವರಸನಹಳ್ಳಿ ರಾಜಪ್ಪ ಮಾತನಾಡಿ ಕಳೆದ ಹಲವು ವರ್ಷಗಳಿಂದ ದಸಂಸ ಹಕ್ಕು ಪತ್ರಗಳಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ಅಧಿಕಾರಿಗಳು ದಲಿತರ ಬಗ್ಗೆ ಕಾಳಜಿ ವಹಿಸದೆ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
 ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷೆ ಗಂಗಮ್ಮ, ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್, ವ್ಯವಸ್ಥಾಪಕ ಶ್ರೀನಿವಾಸಮೂರ್ತಿ, ಎಸ್ಡಿಪಿಓ ಸಿ.ವಿ. ರಾಮನ್, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಹನುಮಂತು, ಅವರು ಸ್ಥಳಕ್ಕೆ ಬಂದು ತಿಂಗಳೊಳಗೆ ಸಮಸ್ಯೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಎಸ್ಜೆಪಿ ರಾಜ್ಯ ಸಂಘಟನಾ ಸಂಚಾಲಕ ಐಯ್ಯಪ್ಪಲ್ಲಿ ನಾರಾಯಣಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಕೋಲಾರ ರವಿಕುಮಾರ್, ಸಿ.ವಿ. ನಾಗರಾಜ್, ಸಂಚಾಲಕ ಸಿ.ಜೆ. ನಾಗರಾಜ್, ಪದ್ಮನಾಭಸ್ವಾಮಿ, ಸಂಘಟನಾ ಸಂಚಾಲಕ ರಾಮಪ್ಪ, ಸಂಗನಹಳ್ಳಿ ರಮೇಶ್, ಕೋಲಾರ ಆಂಜಿ, ಹುಣಸನಹಳ್ಳಿ ವೆಂಕಟೇಶ್, ಕಾರಬೆಲೆ ವೆಂಕಟೇಶ್, ಪಳನಿ, ಟೈಲರ್ ಯಲ್ಲಪ್ಪ, ಕಪಾಲಿ ಶಂಕರ್, ನಾರಾಯಣಪುರ ಹರೀಶ್, ಕುಟ್ಟಿ ಮದನ್, ಬಸಣ್ಣ, ರಾಮಣ್ಣ, ಮಂಜುನಾಥ್, ರಮಣ್ಕುಮಾರ್, ಮಹಿಳಾ ಮುಖಂಡರಾದ ಎಸ್, ಪ್ರಭಾವತಿ, ಲಕ್ಷ್ಮಮ್ಮ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.