ಚಿಂತಾಮಣಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದ ಅಕ್ರಮ ಕಟ್ಟಡ ನೆಲಸಮ
ಚಿಂತಾಮಣಿ: ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಅಡ್ಡಿಯಾಗಿದ್ದ ಅಕ್ರಮ ಕಟ್ಟಡವನ್ನು ನಗರಸಭೆ ಅಧಿಕಾರಿಗಳ ಸಮಕ್ಷಮದಲ್ಲಿ ನೆಲಸಮ ಮಾಡಲಾಯಿತು. ನಗರದ ಆಜಾದ್ಚೌಕ ಬಳಿ ಇರುವ ಹರಿಹರೇಶ್ವರಸ್ವಾಮಿ ದೇವಾಲಯ ಹಿಂಭಾಗದ ಕಾಲುವೆ ಒಂದನ್ನು ಸಾರ್ವಜನಿಕರ ಹಿತಾಸಕ್ತಿಯಿಂದ ಸಾರ್ವಜನಿಕರು ಸುಗಮವಾಗಿ ಸಂಚರಿಸಲು ನಗರಸಭೆ ಕೆ.ಎಂ.ಆರ್.ಪಿ ಯೋಜನೆಯಡಿಯಲ್ಲಿ ಲಕ್ಷಾಂತರ ರು. ವೆಚ್ಚ ಮಾಡಿ ನಿರ್ಮಾಣ ಮಾಡಿದ ಸೀಮೆಂಟ್ ರಸ್ತೆ ನಿರ್ಮಿಸಿ ಹಲವು ತಿಂಗಳು ಕಳೆದರೂ ವ್ಯಕ್ತಿಯೊಬ್ಬರು ಕಳೆದ ಹಲವು ವರ್ಷಗಳ ಹಿಂದೆ ರಸ್ತೆಯ ಅಡ್ಡಲಾಗಿ ಕಟ್ಟಡವನ್ನು ನಿರ್ಮಿಸಿದ ಪರಿಣಾಮ ನಾಗರೀಕರಿಗೆ ಸುಗಮವಾಗಿ ಸಂಚರಿಸಲು ಅಡಚಣೆ ಉಂಟಾಗಿತ್ತು. ನಾಗರೀಕರ ದೂರಿನ ಮೇರೆಗೆ ನಗರಸಭೆ ಆಯುಕ್ತ ಪದ್ಮನಾಭ್ ಹಾಗೂ ಅಧ್ಯಕ್ಷ ಜಿಯಾವುಲ್ಲಾ ರೆಹಮಾನ್ ಮತ್ತು ನಗರಸಭೆ ಅಧಿಕಾರಿಗಳಾದ ಸಿ.ಕೆ. ಬಾಬು, ಚಕ್ರಪಾಣಿ ಸ್ಥಳದಲ್ಲೇ ಇದ್ದು ಕಟ್ಟಡವನ್ನು ತೆರವುಗೊಳಿಸಲು ಸೂಚಿಸಿದ ಪರಿಣಾಮ ನೆಲಸಮ ಮಾಡಲಾಯಿತು. ಇದರಿಂದ ಈ ಭಾಗದ ನಿವಾಸಿಗಳಿಗೆ ಹೂವಿನಪೇಟೆ, ನಾರಸಿಂಹಪೇಟೆ, ಅಯೂಬಿರಸ್ತೆ, ಬ್ರಾಹ್ಮಣರ ಪೇಟೆ, ಹಳೇಪೇಟೆ ಮುಖಾಂತರ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಟ್ಟ ಅಧಿಕಾರಿಗಳಿಗೆ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

