ಸಭೆ ಬರ್ಖಾಸ್ತು
ಬಂಗಾರಪೇಟೆ: ದಲಿತರ ಕುಂದುಕೊರತೆ ಆಲಿಸುವ ಸಭೆಗೆ ಸ್ಥಳೀಯ ಶಾಸಕರು ಹಾಗೂ ಪೊಲೀಸ್ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಆಕ್ರೋಶಗೊಂಡ ದಲಿತ ಮುಖಂಡರು ಸಭೆ ರದ್ದು ಮಾಡಿ ಇಬ್ಬರು ಶಾಸಕರು ಭಾಗವಹಿಸುವ ಸಭೆಯನ್ನು ಮತ್ತೊಮ್ಮೆ ನಿಗದಿಪಡಿಸುವಂತೆ ಆಗ್ರಹಿಸಿದರು.
ದಲಿತರೇ ಹೆಚ್ಚಾಗಿರುವ ತಾಲೂಕಿನಲ್ಲಿ ಸರ್ಕಾರ ಪ್ರತಿ ಆರು ತಿಂಗಳಿಗೊಮ್ಮೆ ಅಟ್ರಾಸಿಟಿ ಸಭೆ ಕರೆದು ಅವರು ಎದುರಿಸುತ್ತಿರುವ ಸಮಸ್ಯೆಗಳ ಕಡೆ ಅಧಿಕಾರಿಗಳು ಬೆಳಕು ಚೆಲ್ಲಬೇಕೆಂದು ಸೂಚಿಸಿದೆ. ಆದರೆ ಆರು ತಿಂಗಳಿಗೊಮ್ಮೆ ಇರಲಿ ವರ್ಷಕ್ಕೊಮ್ಮೆ ಸಹ ಸಭೆಯನ್ನು ಕರೆಯುವುದಿಲ್ಲ, ಕರೆದರೂ ಯಾವುದೇ ಇಲಾಖೆ ಅಧಿಕಾರಿಗಳು ಭಾಗವಹಿಸುವುದಿಲ್ಲ. ಅಧಿಕಾರಿಗಳಿದ್ದರೆ ಶಾಸಕರಿರುವುದಿಲ್ಲ, ಶಾಸಕರಿದ್ದರೆ ಅಧಿಕಾರಿಗಳು ಗೈರು ಹಾಜರಾಗುವರು ಎಂದು ಅಧಿಕಾರಿಗಳ ಹಾಗೂ ಶಾಸಕರ ಬಗ್ಗೆ ಮುಖಂಡರು ಬೇಸರ ವ್ಯಕ್ತಪಡಿಸಿದರು. ಗುರುವಾರ ಪಟ್ಟಣದ ಶಾದಿಮಹಲ್ನಲ್ಲಿ ಅಟ್ರಾಸಿಟಿ ಸಭೆಯನ್ನು ತಾಲೂಕು ಆಡಳಿಡ ಎರಡು ವರ್ಷಗಳ ಬಳಿಕ ಆಯೋಜಿಸಿತ್ತು, ಸಭೆಯಲ್ಲಿ ತಹಸೀಲ್ದಾರ್ ಸೋಮಶೇಖರ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಜರಿದ್ದರು, ಆದರೆ ತಾಲೂಕಿಗೆ ಇಬ್ಬರು ಶಾಸಕರು ಇರುವುದರಿಂದ ಇಬ್ಬರೂ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದರಿಂದ ಸಭೆಗೆ ಬಂದಿರಲಿಲ್ಲ,ಇವರಲ್ಲದೆ ಕೆಜಿಎಫ್ ರಕ್ಷಣಾಧಿಕಾರಿ ಹಾಗೂ ಉಪ ರಕ್ಷಣಾಧಿಕಾರಿಗಳೂ ಸಭೆಗೆ ಬಂದಿರಲಿಲ್ಲ. ಇದರಿಂದ ಕುಪಿತರಾದ ದಲಿತ ಮುಖಂಡರು ಅಧಿಕಾರಿಗಳಿಗೆ ಹಾಗೂ ಶಾಸಕರುಗಳಿಗೆ ನಿರ್ಲಕ್ಷ್ಯವಾಗಿದೆ, ಅಟ್ರಾಸಿಟಿ ಸಭೆಯನ್ನು ಬಲವಂತವಾಗಿ ಮಾಡುವಂತಾಗಿದೆ, ತಾಲೂಕಿನಲ್ಲಿ ದಲಿತರು ಹತ್ತಾರು ಸಮಸ್ಯೆಗಳನ್ನು ಪ್ರತಿ ನಿತ್ಯ ಎದುರಿಸುತ್ತಿದ್ದಾರೆ ಆ ಬಗ್ಗೆ ಯಾರ ಬಳಿ ಹೇಳಿಕೊಳ್ಳಬೇಕು, ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇರುವ ಅಟ್ರಾಸಿಟಿ ಸಭೆಯನ್ನೂ ಸಮರ್ಪಕವಾಗಿ ಕರೆಯದೆ ಕಡೆಗಣಿಸಲಾಗಿದೆ, ಇಬ್ಬರು ಶಾಸಕರೂ ದಲಿತ ವರ್ಗದಿಂದ ಆಯ್ಕೆಯಾಗಿದ್ದರೂ ನಮ್ಮ ಸಮಸ್ಯೆಗಳು ಈಡೇರಿಲ್ಲ ಎಂದು ಮುಖಂಡ ಡಾ.ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

