ವಿವಾಹಿತೆಗೆ ಕಿರುಕುಳ: ಯುವಕನಿಗೆ ಬಿತ್ತು ಗೂಸಾ
ಚಿಕ್ಕಬಳ್ಳಾಪುರ: ತನ್ನ ಸಹಪಾಠಿ ವಿವಾಹಿತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಕೀಟಲೆ ಮಾಡುತ್ತಿದ್ದ ಯುವಕನನ್ನು ಹಿಡಿದುಕೊಂಡು ಸಾರ್ವಜನಿಕರೇ ಕಂಬಕ್ಕೆ ಕಟ್ಟಿ ಚೆನ್ನಾಗಿ ಥಳಿಸಿದ್ದಾರೆ. ಕೊನೆಗೆ ಪೊರಕೆ ಸೇವೆಯಿಂದಲೂ ನೀರುಗಾಯಿ ಹಣ್ಣಗಾಯಿ ಮಾಡಿದ್ದಾರೆ. ಪೊಲೀಸರ ಸಕಾಲಿಕ ಮಧ್ಯೆ ಪ್ರವೇಶದಿಂದ ಬಚಾವಾಗಿದ್ದಾನೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿರುವ ಭರತ್(23) ತನ್ನ ದುವರ್ತನೆಯಿಂದ ಸಾರ್ವಜನಿಕರ ಕೋಪಕ್ಕೆ ಗುರಿಯಾದ ಆರೋಪಿ. ಭಾನುವಾರ ನಗರದ ಕೆಳಗಿನ ತೋಟದಲ್ಲಿರುವ (ಎಚ್ .ಎಸ್ .ಗಾರ್ಡನ್) ಯುವತಿಯ ಮನೆಯ ಮುಂದೆ ಅಡ್ಡಾಡುತ್ತಾ ರೇಗಿಸುತ್ತಿದ್ದ. ತಕ್ಷಣ ಆಕೆ ಸ್ಥಳೀಯರಿಗೆ ವಿಷಯ ತಿಳಿಸಿದಾಗ ಕೆಲವರು ಆತನನ್ನು ಹಿಡಿದುಕೊಂಡು ಸಮೀಪದಲ್ಲಿಯೇ ಇದ್ದ ಕಂಬಕ್ಕೆ ಕಟ್ಟಿ ಹಾಕಿದ್ದಾರೆ.ಅಂಗಿ ಬಿಚ್ಚಿ ತಮ್ಮ ಮನಸ್ಸಿಗೆ ಬಂದಂತೆ ಚೆನ್ನಾಗಿ ಜಾಡಿಸಿದ್ದಾರೆ. ಮಹಿಳೆಯರು ಪೊರಕೆಗಳನ್ನು ಹಿಡಿದುಕೊಂಡು ಬಂದು ಥಳಿಸಿದ್ದಾರೆ.
ಭರತ್ ಓದುತ್ತಿರುವ ಕಾಲೇಜಿನಲ್ಲಿ ಯುವತಿ ಓದುತ್ತಿದ್ದಳು. ಆಗ ಇವರಿಬ್ಬರ ಮಧ್ಯೆ ಪರಿಚಯವಿತ್ತು. ಗೆಳೆತನದಿಂದ ಸಲುಗೆ ಹೆಚ್ಚಾದ ಕಾರಣ ಆಕೆ ತನ್ನ ಮನೆಯ ಸಂಕಷ್ಟಗಳನ್ನು ಆತನ ಮುಂದೆ ಹೇಳಿಕೊಂಡಿದ್ದಾಳೆ. ನನ್ನ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಇದರಿಂದ ವಿಚ್ಚೇದನ ಪಡೆದು ತಮ್ಮವರೊಂದಿಗೆ ವಾಸ ಮಾಡುತ್ತಿದ್ದೇನೆ ಎಂದೆಲ್ಲಾ ಸಮಸ್ಯೆಗಳನ್ನು ಹೇಳಿಕೊಂಡಿದ್ದಾಳೆ.
ಆಕೆಯ ಕಷ್ಟಗಳನ್ನು ಕೇಳುತ್ತಿದ್ದ ಭರತ್ ಸಲುಗೆಯನ್ನು ದುರುಪಯೋಗಪಡಿಸಿಕೊಂಡು ಆತನೂ ಕಿರುಕುಳ ಕೊಡಲು ಶುರುವಿಟ್ಟುಕೊಂಡಿದ್ದಾನೆ. ನಾ ಹೇಳಿದಂತೆಯೇ ಕೇಳಬೇಕು. ಇಲ್ಲದಿದ್ದಲ್ಲಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ತಮ್ಮ ತಂದೆಗೆ ಹೇಳಿ ವ್ಯಾಸಂಗಕ್ಕೆ ತೊಂದರೆ ಮಾಡುತ್ತೇನೆ. ನಿನ್ನ ಫೋಟೋಗಳನ್ನು ವೈಬ್ಸೈಟ್ಗೆ ಅಪಲೋಡ್ ಮಾಡುವುದಲ್ಲದೇ ಕೆಟ್ಟ ಹೆಸರು ತರುತ್ತೇನೆ ಎಂದೆಲ್ಲಾ ಬೆದರಿಕೆ ಹಾಕುತ್ತಿದ್ದಾನೆ. ಕಾಲೇಜಿಗೆ ಹೋಗುವಾಗ ಹಿಂಬಾಲಿಸುವುದು, ಪ್ರತಿನಿತ್ಯ ಆಕೆಯ ಮನೆ ಬಳಿಗೆ ಹೋಗಿ ಮೊಬೈಲ್ ಕರೆ ಮಾಡಿ ರೇಗಿಸುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಯುವತಿ ಕೊನೆಗೆ ತನ್ನ ನೋವನ್ನು ಜನರ ಮುಂದಿಟ್ಟಿದ್ದಾಳೆ. ಮತ್ತೊಂದೆಡೆ ಆರೋಪಿ ಬೇರೆ ರೀತಿಯಲ್ಲಿ ಹೇಳುತ್ತಿದ್ದಾನೆ. ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾನೆ. ಯುವತಿ ನೀಡಿರುವ ದೂರಿನ್ವಯ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

