ಕೋಲಾರ

ಡಿಸಿಸಿ ಬ್ಯಾಂಕಿನಿಂದ 30 ಕೋಟಿ ಸಾಲ

Published On :

ಕೋಲಾರ: ಜಿಲ್ಲೆಯ ಕೆಲವು ಸಹಕಾರಿಗಳ ವೈಫಲ್ಯದಿಂದ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಹೊಸ ಆಡಳಿತ ಮಂಡಳಿ ಬಂದ ಮೇಲೆ ಚೇತರಿಕೆ ಕಂಡಿದ್ದು ಕೇವಲ ಮೂರು ತಿಂಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ 4441 ರೈತರಿಗೆ 30 ಕೋಟಿ ಸಾಲ ನೀಡುವ ಮೂಲಕ ರೈತರ ನೆರವಿಗೆ ಮುಂದಾಗಿದೆ.
ರೈತರಿಗೆ ಸಾಲ ನೀಡಲು ಹಿಂದೇಟು ಹಾಕುವ ವಾಣಿಜ್ಯ ಬ್ಯಾಂಕುಗಳಿಗೆ ಸೆಡ್ಡು ಹೊಡೆದಿರುವ ಡಿಸಿಸಿ ಬ್ಯಾಂಕ್‌ನ ನೂತನ ಆಡಳಿತ ಮಂಡಳಿ ರೈತರಿಗೆ ಸಾಲ ನೀಡುವ ಮೂಲಕ ಡಿಸಿಸಿ ಬ್ಯಾಂಕ್‌ನ ಬಗ್ಗೆ ಜನತೆಯಲ್ಲಿರುವ ಅನುಮಾನ, ತಾತ್ಸಾರವರನ್ನು ಹೊಗಲಾಡಿಸಲು ದಿಟ್ಟತನ ಪ್ರದರ್ಶಿಸುತ್ತಿದೆ. ನೂತನ ಆಡಳಿತ ಮಂಡಳಿ ರಚನಗೊಂಡ ದಿನದಿಂದಲೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ನಿರ್ದೇಶಕರು ಪ್ರತಿ ಹಂತದಲ್ಲೂ ರೈತರ ಪರವಾಗಿ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಬ್ಯಾಂಕ್ ಮೇಲೆ ರೈತರು ವಿಶ್ವಾಸವಿಟ್ಟು ಖಾತೆ ತೆರೆಯುವಂತೆ ಮಾಡಿದ್ದಾರೆ.
ಆಡಳಿತ ಮಂಡಳಿಯ ಪ್ರಯತ್ನದಿಂದಾಗಿ ಕೋರ್ ಬ್ಯಾಂಕಿಂಗ್ ಪದ್ಧತಿ ಸಹ ಪ್ರಾರಂಭಿಸಲಾಗಿದೆ. ಬ್ಯಾಂಕ್ ತನ್ನ ಸ್ವಂತ ಹೂಡಿಕೆ, ಬಂಡವಾಳದಿಂದಲೇ ರೈತರಿಗೆ ಈಗಾಗಲೇ 30 ಕೋಟಿ ಸಾಲ ವಿತರಿಸಿ ಮುಂದಿನ ತಿಂಗಳು ಕನಿಷ್ಠ 6 ಕೋಟಿ ಸಾಲ ವಿತರಿಸಲು ನಿರ್ಧರಿಸಿದೆ. 30 ಕೋಟಿ ಕೃಷಿ ಸಾಲದೊಂದಿಗೆ ಈಗಾಗಲೇ 1.12 ಕೋಟಿ ಹೈನುಗಾರಿಕೆ ಸಾಲವನ್ನು ವಿತರಿಸಿದೆ. ಕೃಷಿ ಸಾಲಕ್ಕೆ ಶೂನ್ಯ ಬಡ್ಡಿಯಾದರೆ, ಹೈನುಗಾರಿಕೆ ಮತ್ತು 10 ಲಕ್ಷದವರೆಗಿನ ಕೃಷಿ ಸಾಲಕ್ಕೆ ಶೇ. 3ರ ಬಡ್ಡಿ ವಿಧಿಸಿ ರೈತರು ಮೀಟರ್ ಬಡ್ಡಿ ದಂಧೆಗೆ ಸಿಲುಕದಂತೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.