ಉಪ್ಪಾರ ಸಂಘದಿಂದ ಭಗೀರಥ ಜಯಂತಿ
ಹುಳಿಯಾರು: ತಾಲೂಕು ಉಪ್ಪಾರ ಸಂಘ ಹಾಗೂ ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ, ದೊಡ್ಡಎಣ್ಣೇಗೆರೆ ಉಪ್ಪಾರ ಸಮಾಜದ ವತಿಯಿಂದ ಸಮೀಪದ ದೊಡ್ಡಎಣ್ಣೇಗೆರೆ ಗೇಟ್ ವೃತ್ತದಲ್ಲಿ ಶನಿವಾರ ಭಗೀತಥ ಜಯಂತಿಯನ್ನು ನಡೆಸಲಾಯಿತು.
ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿಸ್ವಾಮೀಜಿ ಸಾನಿಧ್ಯದಲ್ಲಿ ಜಯಂತಿ ಕಾರ್ಯಕ್ರಮ ನಡೆಯಿತು. ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಪುಟ್ಟಣ್ಣಶೆಟ್ಟಿ ಅವರು ಉದ್ಘಾಟನೆ ನೆರೆವೇರಿಸಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ನಾಗಪ್ಪ ಭಗೀರಥ ಭಾವಚಿತ್ರ ಅನಾವರಣ ಮಾಡಿದರು. ತಾಲೂಕು ಉಪ್ಪಾರಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಪಿ.ಎ.ಸಿ.ಎಂ ಸದಸ್ಯರಾದ ಡಿ.ವಿ.ಮಂಜುನಾಥ್, ವಕೀಲರಾದ ವೆಂಕೋಬ, ತಾ.ಪಂ.ಉಪಾಧ್ಯಕ್ಷ ಜಯಣ್ಣ, ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಗ್ರಾ.ಪಂ.ಸದಸ್ಯರಾದ ಬಸವರಾಜು, ಉಪ್ಪಿನಕಟ್ಟೆ ಚನ್ನಬಸಮ್ಮ ಶಂಕರಪ್ಪ, ಲಕ್ಷ್ಮೀದೇವಿ, ನಾಟಿವೈದ್ಯರಾದ ಪೂಜಾರಜ್ಜರ ನಾಗಪ್ಪ, ಸೊಮನಹಳ್ಳಿ ಕಲ್ಲೇಶ್ ಉಪಸ್ಥಿತರಿದ್ದ ಸಮಾರಂಭದಲ್ಲಿ ಲೋಕೇಶ್ ಸ್ವಾಗತಿಸಿ, ಚಂದ್ರಯ್ಯ ನಿರೂಪಿಸಿ, ನಾರಾಯಣಸ್ವಾಮಿ ವಂದಿಸಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಪುರಸ್ಕರಿಸಲಾಯಿತು. ಸಮಾರಂಭಕ್ಕೂ ಮುನ್ನಾ ಪೂರ್ಣಕುಂಭ ಮೆರವಣಿಗೆ ನಡೆಸಲಾಯಿತು.
25, 26ಕ್ಕೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಮುಳಬಾಗಲು: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂನ್ 25 ಮತ್ತು 26ರಂದು ನಡೆಸಲು ಶನಿವಾರ ಪಟ್ಟಣದ ಡಿವಿಜಿ ಸರ್ಕಾರಿ ಶಾಲೆಯಲ್ಲಿ ಶನಿವಾರ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಸಭೆ ನಿರ್ಧರಿಸಲಾಯಿತು.
ಸಭೆಯು ಮು.ಕೃಪದ್ಮನಾಭರಾವ್ ಅಧ್ಯಕ್ಷತೆಯಲ್ಲಿ ಸೇರಿ, ನೂತನವಾಗಿ ಪ್ರಾರಂಭವಾಗಲಿರುವ ಡಿವಿಜಿ ರಂಗ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಸಾಹಿತ್ಯ ಸಮ್ಮೇಳನಾಧ್ಯಕ್ಷರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ಸೋಮವಾರ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲು ಸಭೆ ನಿರ್ಧರಿಸಿತು. ಸಂಭಾವ್ಯ ಅಧ್ಯಕ್ಷರ ಪಟ್ಟಿಯನ್ನು ಸದಸ್ಯರಿದಂ ಪಡೆಯಲಾಯಿತು. ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಜಗನ್ನಾಥ್, ತಾಯಲೂರು ಗೋಪಿ, ಅಪ್ಪೋಜಿಗೌಡ, ಕನ್ನಡ ಭಟ ವೆಂಕಟಪ್ಪ, ಶಂಕರ್ ಕೇಸರಿ, ಓಂಶಕ್ತಿ ಚಲಪತಿ, ಚಾಂದ್ ಪಾಷ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

