ಅಪಘಾತ ಪ್ರಕರಣ: ಸಿಪಿಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಸಂಸ ಧರಣಿ
ಕೋಲಾರ: ರಸ್ತೆ ಅಪಘಾತದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರನ್ನು ಬಲಿ ತೆಗೆದುಕೊಂಡ ಟ್ರ್ಯಾಕ್ಟರ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವ ಗ್ರಾಮಾಂತರ ಸಿಪಿಐ ಸುಧಾಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಯಿತು.
ಕಳೆದ ಮೇ 12ರಂದು ತಾಲೂಕಿನ ಕೆಂದಟ್ಟಿ ಗೇಟ್ ಬಳಿ ರಾತ್ರಿ ಸಂಭವಿಸಿದ ಟ್ರಾಕ್ಟರ್ ಮತ್ತು ದ್ವಿಚಕ್ರವಾಹನ ಅಪಘಾತದಲ್ಲಿ ವೆಂಕಟಾಪುರ ಗ್ರಾಮದ ರಾಜಪ್ಪ ಮತ್ತು ಚಿಕ್ಕಯ್ಯೂರು ಗ್ರಾಮದ ಸತೀಶ್ ಅಸು ನೀಗಿದ್ದರು.
ಘಟನೆಗೆ ಕಾರಣವಾದ ಟ್ರ್ಯಾಕ್ಟರ್ ಚಾಲಕ ವಾಹನ ಸಮೇತ ತಲೆಮರೆಸಿಕೊಂಡಿದ್ದು, ವಾಹನವನ್ನು ಪತ್ತೆ ಹಚ್ಚಿದ ಮೃತರ ಕುಟುಂಬದವರು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಟ್ರ್ಯಾಕ್ಟರ್ ಮಾಲೀಕ ಹಾಗೂ ಘಟನೆಗೆ ಸಂಬಂಧಿಸಿದ ವಾಹನ ತಮ್ಮದೇ ಎಂದು ಪೊಲೀಸರ ಸಮ್ಮುಖದಲ್ಲೇ ಒಪ್ಪಿಕೊಂಡಿದ್ದನಲ್ಲದೆ, ವಿಮೆ ಇರುವುದರಿಂದ ಮೃತರ ಕುಟುಂಬಕ್ಕೆ ಪರಿಹಾರ ಸಿಗುವಂತೆ ಮಾಡುವುದಾಗಿ ತಿಳಿಸಿದ್ದ. ಆದರೆ, ಸಿಪಿಐ ಕುಮ್ಮಕ್ಕಿನಿಂದ ಠಾಣೆಯ ಆವರಣದಲ್ಲಿದ್ದ ವಾಹನವನ್ನು ತೆಗೆದುಕೊಂಡು ಹೋಗಿದ್ದಾನೆಂದು ದಸಂಸ ಮುಖಂಡರು ಆರೋಪಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್ ಪಾಷಾ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ವರದೇನಹಳ್ಳಿ ವೆಂಕಟೇಶ್, ಬೀರಮಾನಹಳ್ಳಿ ಆಂಜಿನಪ್ಪ, ಮಲ್ಲಸಂದ್ರ ವೆಂಕಟಸ್ವಾಮಿ, ಲಕ್ಷ್ಮಿಸಾಗರ ರಾಜಣ್ಣ, ಶ್ರೀರಾಮು ಹಾಗೂ ಮೃತರ ಕುಟುಂಬದ ಸದಸ್ಯರು ಪ್ರತಿಭಟನೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

