ಕೋಲಾರ

ಚಿನ್ನದ ಗಣಿ ಸಮಸ್ಯೆ: ಪ್ರಧಾನಿ ಬಳಿಗೆ ನಿಯೋಗ- ವೈ. ಸಂಪಂಗಿ ಭರವಸೆ

Published On :

ಕೆಜಿಎಫ್:  ಬಿಜಿಎಂಎಲ್ ಚಿನ್ನದ ಗಣಿಗಳ ಸಮಸ್ಯೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಕಾರ್ಮಿಕರ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಬಳಿಕ ಕರೆದೊಯ್ಯಲಾಗುವುದು ಎಂದು ಚಿನ್ನದ ಗಣಿ ಕಾರ್ಮಿಕರ ಒಕ್ಕೂಟ ಸಂಘಗಳ ಕಾರ್ಯಾಧ್ಯಕ್ಷ ವೈ.ಸಂಪಂಗಿ ಹೇಳಿದರು.
ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶ್ರೀನಿವಾಸಪುರದಲ್ಲಿ ರೇಲ್ವೆ ಕೋಚ್ ಕಾರ್ಖಾನೆಗೆ ಚಾಲನೆ ನೀಡಿದ ಕಾಂಗ್ರೆಸ್ ಸರ್ಕಾರ ಕೇವಲ ಸುಳ್ಳು ಆಸ್ವಾಸನೆಗಳನ್ನು ನೀಡಿದೆ. ಆದರೆ ಕೆಜಿಎಫ್‌ನಲ್ಲಿ ಬಿಜಿಎಂಎಲ್ ಕಾರ್ಖಾನೆಗೆ ಸೇರಿದೆ 12500 ಎಕರೆ ಜಮನು, ಕಾರ್ಮಿಕರು ಹೆಚ್ಚು ಇರುವ ಈ ಭಾಗದಲ್ಲಿ ರೇಲ್ವೆ ಕೋಚ್‌ನ ಮತ್ತೊಂದು ಘಟಕ ಸ್ಥಾಪನಗೆ ರೇಲ್ವೆ ಸಚಿವರಿಗೆ ಮನವಿ ಸಲ್ಲಿಸಾಗುವುದು ಎಂದು ಅವರು ತಿಳಿಸಿದರು.
ಕಾರ್ಮಿಕರು ವಾಸವಿರುವ ಮನೆಗಳನ್ನು ತೆರವುಗೊಳಿಸದಂತೆ ಕೇಂದ್ರ ಗಣಿ ಸಚಿವರಿಗೆ ನಿಯೋಗ ಮನವಿ ಸಲ್ಲಿಸಲಿದೆ. ಪರ್ಯಾಯ ಕಾರ್ಖಾನೆ ಸ್ಥಾಪನೆ, ಸುರಕ್ಷಿತ ಲಾಭದಾಯಕ ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಬಿಜಿಎಂಎಲ್ ಸಮಸ್ಯೆ ಪರಿಹಾರಕ್ಕೆ ಪಕ್ಷಭೇದ ಮರೆತು ಎಲ್ಲಾ ಕಾರ್ಮಿಕ ಸಂಘಟನೆಗಳು, ಮಾಜಿ ಶಾಸಕರು, ವಿವಿಧ ರಾಜಕೀಯ ಪಕ್ಷದವರು ನಿಯೋಗದೊಂದಿಗೆ ಪಾಲ್ಗೊಳ್ಳಲು ತಿಳಿಸಿದರು.
ಈ ವೇಳೆ ಚಿನ್ನದ ಗಣಿ ಕಾರ್ಮಿಕ ಒಕ್ಕೂಟ ಸಂಘದ ಯಶ್ವಂತರಾಜ್, ಗುಣಶೇಖರ್, ಮಣವಾಳನ್, ಮೊಹಮದ್, ಸೆಲ್ವಂ, ಗ್ಲೋಬಲ್ ಗೋಲ್ಡ್ ಮೈನ್ಸ್‌ನ ಲೂಯೀಸ್, ರಾಘವೇಳು, ಪುರುಷೋತ್ತಮನ್, ತೆರೆಸ್‌ರಾಜ್, ನಗರಸಭಾ ಸದಸ್ಯರಾದ ನವೀನ್ ದೀಪಾರಂಕ, ಸ್ಟ್ಯಾನ್ಸೀ, ಮುಖಂಡರಾದ ನೈನಾರವಿ ಸೇರಿದಂತೆ ಇತರೆ ಕಾರ್ಮಿಕ ಮುಖಂಡು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.