ಕೋಲಾರ

ಉಳಿತಾಯ ಬಜೆಟ್ ಮಂಡನೆ

Published On :

1 ಸಾವಿರ ಫಲಾನುಭವಿಗಳಿಗೆ ನಿವೇಶನ ವಿತರಿಸಲು ಸೂಚನೆ
ಬಂಗಾರಪೇಟೆ: ಪ್ರಸಕ್ತ ಸಾಲಿನ ಪುರಸಭೆ ಆಯವ್ಯಯವನ್ನು ಅಧ್ಯಕ್ಷ ಗಂಗಮ್ಮ ಮಂಡಿಸಿದ್ದು ಎಲ್ಲಾ ಮೂಲಗಳಿಂದಲೂ ಪುರಸಭೆಗೆ ಒಟ್ಟು 82,97,448 ಲಕ್ಷ ರು.ಗಳ ಆದಾಯ ಬಂದರೆ ಅದರಲ್ಲಿ ಖರ್ಚು ವೆಚ್ಚಗಳು 2592083 ಹೋಗಿ 5705365 ಲಕ್ಷ ರು.ಗಳ ಉಳಿತಾಯ ಬಜೆಟ್ ಮಂಡಿಸಿದರು.
ಅಧ್ಯಕ್ಷೆ ಗಂಗಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಬಜೆಟ್ ಮಂಡನೆ ಸಭೆಯಲ್ಲಿ 5705365 ಲಕ್ಷ ರು.ಗಳ ಉಳಿತಾಯ ಬಜೆಟ್ ಮಂಡಿಸಿ ಸದಸ್ಯರಿಂದ ಮೆಚ್ಚುಗೆ ಪಡೆದರು.
ನಂತರ ಮಾತನಾಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಾಗಿದ್ದು ಮಂಡಳಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಹೆಸರು ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹಿತವಚನ ನೀಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ಅನೇಕ ಮಂದಿ ಮನೆ ಕಟ್ಟಿಕೊಳ್ಳಲು ನಿವೇಶನವಿಲ್ಲದೆ ಪರದಾಡುತ್ತಿದ್ದರೂ ಹತ್ತು ವರ್ಷಗಳಿಂದ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ನೀಡುವ ಕೆಲಸ ಸಾಗಿಲ್ಲ. ಆದ್ದರಿಂದ ಈ ಬಾರಿ ದೇಶಿಹಳ್ಳಿ ವ್ಯಾಪ್ತಿಯಲ್ಲಿರುವ ಗೋಮಾಳ ಜಾಗದಲ್ಲಿ 25ಎಕರೆ ಸ್ವಾಧೀನಪಡಿಸಿಕೊಂಡು ಕನಿಷ್ಠ ಒಂದು ಸಾವಿರ ಫಲಾನುಭವಿಗಳಿಗೆ ನಿವೇಶನ ವಿತರಿಸಬೇಕೆಂದು ಸೂಚಿಸಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಅನುಮೋದಿಸಿತು. ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಎರಡು ಕೋಟಿ ಮೂವತ್ತು ಲಕ್ಷ ಸರ್ಕಾರದಿಂದ ಬಂದಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸಮಸ್ಯೆ ಬಾರದಂತೆ ಎಚ್ಚರವಹಿಸುವಂತೆ ಹೇಳಿದರು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಈ ಧೋರಣೆ ಬದಲಾಗಬೇಕು ಇಲ್ಲದಿದ್ದರೆ ವರ್ಗಾಯಿಸಿಕೊಂಡು ಹೋಗಿ ಎಂದು ಎಚ್ಚರಿಕೆ ಕೊಟ್ಟರು. ಈ ವೇಳೆ ಸದಸ್ಯ ಸುಹೇಲ್ ದೊಡ್ಡಕೆರೆಯಲ್ಲಿ ವಾಕಿಂಗ್ ಜೋನ್ ನಿರ್ಮಾಣ ಮಾಡಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಇದುವರೆಗೂ ಕಾರ್ಯಗತವಾಗಿಲ್ಲ ಯಾಕೆ ಎಂದು ಧ್ವನಿ ಎತ್ತಿದರು. ಇದಕ್ಕೆ ಸ್ಪಂದಿಸಿದ ಶಾಸಕ ನಾರಾಯಣಸ್ವಾಮಿ ವಾಕಿಂಗ್‌ಜೋನ್  ನಿರ್ಮಾಣಕ್ಕೆ ಬೇಕಾಗಿರುವ 3 ಕೋಟಿ ಬೇಕಾಗಿದ್ದು ಈ ಮೊತ್ತವನ್ನು ನಗರಾಭಿವೃದ್ಧಿ ಸಚಿವರಲ್ಲಿ ಅನುಮೋದನೆ ಪಡೆದು ಮಂಜೂರು ಮಾಡಿಸಿಕೊಂಡು ಬರುವುದಾಗಿ ಸಭೆಗೆ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.