ಅಂಬೇಡ್ಕರ್ ನಾಮಫಲಕ ಅನಾವರಣ
ಗೌರಿಬಿದನೂರು: ತಾಲೂಕಿನ ಆನೂಡಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ 123ನೇ ಜಯಂತಿ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕ ಎಚ್.ಎನ್.ಸುನಂದ್ಕುಮಾರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಎಚ್.ಎಸ್. ನಂಜುಂಡಪ್ಪ ಆನೂಡಿ ಗ್ರಾಮದ ಅರುಣ್ಕುಮಾರ್, ನಾಗರಾಜ್, ಲಕ್ಷ್ಮೀಪತಿ, ಹನುಮಂತಪ್ಪ, ಓಬಳೇಶ್, ಚಿಂತಾಮಣಿ ನರಸಿಂಹಮೂರ್ತಿ ಎ.ಎಸ್., ದಲಿತ ಮುಖಂಡ ಅಂಜಿನಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅನುಮತಿ ಇಲ್ಲದ ಶಾಲೆಗೆ ಸೇರಿಸಬೇಡಿ
ಶಿರಾ: ತಾಲೂಕಿನ ವಿವಿಧೆಡೆ ಇಲಾಖೆ ಅನುಮತಿ ಪಡೆಯದೆ ಅನುಮತಿ ಪಡೆದು ಭಾಷಾ ನೀತಿ ಉಲ್ಲಂಘನೆಯ ನಂತರ ಮರು ಮಾನ್ಯತೆ ಪಡೆಯದೆ ಕಿರಿಯ ಪ್ರಾಥಮಿಕ ಶಾಲೆಗೆ ಅನುಮತಿ ಪಡೆದು, ಹಿರಿಯ ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿರುವ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡದಿರಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ. ತಾಲೂಕಿನಲ್ಲಿ ಪೂನಂ ಶಾಲೆ ಶಿರಾ ನಗರ, (ಪೂರ್ವ ಪ್ರಾಥಮಿಕ ಶಾಲೆಗೆ ಅನುಮತಿ ಪಡೆದಿಲ್ಲ) ಪ್ರಗತಿ ಶಾಲೆ ದೊಡ್ಡಗ್ರಹಾರ,(ಪೂರ್ವ ಪ್ರಾಥಮಿಕ ಶಾಲೆಗೆ ಅನುಮತಿ ಪಡೆದಿಲ್ಲ), ಜ್ಞಾನಭಾರತಿ ಶಾಲೆ ಮದಲೂರು (ಪೂರ್ವ ಪ್ರಾಥಮಿಕ ಶಾಲೆಗೆ ಅನುಮತಿ ಪಡೆದಿಲ್ಲ), ಸೌಜನ್ಯ ಕಾನ್ವೆಂಟ್ ಬುಕ್ಕಾಪಟ್ಟಣ (1ರಿಂದ 5ನೇ ತರಗತಿವರೆಗೆ ಮರು ಮಾನ್ಯತೆ ಪಡೆದಿಲ್ಲ ಹಾಗೂ 7ನೇ ತರಗತಿಗೆ ಅನುಮತಿ ಪಡೆದಿರುವುದಿಲ್ಲ), ವಿದ್ಯಾಜ್ಯೋತಿ ಶಾಲೆ, ಸಿರಾ ಟೌನ್ (1ರಿಂದ 5ನೇ ತರಗತಿಗೆ ಮರು ಮಾನ್ಯತೆ ಪಡೆದಿರುವುದಿಲ್ಲ), ಶ್ರೀ ರಕ್ಷಾ ವಿದ್ಯಾನಿಕೇತನ ಶಾಲೆ, ಸಿರಾ ಟೌನ್ (6ಮತ್ತು 7ನೇ ತರಗತಿಗೆ ಅನುಮತಿ ಪಡೆದಿರುವುದಿಲ್ಲ) ಆದ್ದರಿಂದ ಮೇಲ್ಕಂಡ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು, ನಾಳೆ ಚುನಾವಣೆ
ಹುಳಿಯಾರು: ಹೋಬಳಿ ವ್ಯಾಪ್ತಿಯ ಕೆಂಕೆರೆ, ಹೊಯ್ಸಳಕಟ್ಟೆ ಗ್ರಾಪಂ ಉಪಾಧ್ಯಕ್ಷರ ಸ್ಥಾನಕ್ಕೆ, ಹುಳಿಯಾರು ಎಪಿಎಂಸಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆಗಳು ನಡೆಯಲಿವೆ. ತಾ. 5 ರಗುರುವಾರದಂದು ಕೆಂಕೆರೆ ಗ್ರಾ.ಪಂ. ಯಉಪಾಧ್ಯಕ್ಷ ಸ್ಥಾನಕ್ಕೆ , ತಾ. 6ರ ಶುಕ್ರವಾರದಂದು ಹೊಯ್ಸಲಕಟ್ಟೆ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ, ತಾ.7ರ ಶನಿವಾರ ಹುಳಿಯಾರು ಎಪಿಎಂಸಿ ಅಧ್ಯಕ್ಷಗಾದಿಗೆ ಚುನಾವಣೆಗಳು ನಡೆಲಿವೆ.
ಅವಿಶ್ವಾಸ ನಿರ್ಣಯಕ್ಕೆ ಬೆಂಬಲ: ಶಾಸಕ
ಹುಳಿಯಾರು: ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆನ್ನುವ ದೃಷ್ಟಿಯಿಂದ ಗ್ರಾ.ಪಂ. ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿರುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಹುಳಿಯಾರು ಗ್ರಾ.ಪಂ. ನ ಅಧ್ಯಕ್ಷರ ವಿರುದ್ಧ ಇತರ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ, ಗೊತ್ತುವಳಿ ಪಾಸಾದ ನಂತರ ಅವಿಶ್ವಾಸ ಮಂಡಿಸಿದ ಸದಸ್ಯರೊಂದಿಗೆ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾ.ಪಂ.ನ ಹಾಲಿ ಅಧ್ಯಕ್ಷೆ ಪುಟ್ಟಿಬಾಯಿ ಅವರು ಮಹಿಳಾ ಮೀಸಲಾತಿಯಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರು ಒಂದು ವರ್ಷದ ನಂತರ ತಮ್ಮ ಅಧಿಕಾರವನ್ನು ಮತ್ತೊಬ್ಬರಿಗೆ ಬಿಟ್ಟು ಕೊಡಬೇಕೆಂದು ತಮ್ಮ ಸಮ್ಮುಖದಲ್ಲಿ ತೀರ್ಮಾನವಾಗಿತ್ತಾದರೂ ತಮ್ಮ ಅವಧಿ ಮುಗಿದ ನಂತರವೂ ಅಧಿಕಾರ ತ್ಯಜಿಸದೆ ಅಧ್ಯಕ್ಷೆಯಾಗಿ ಮುಂದುವರೆದಿದ್ದು ಮತ್ತೊಬ್ಬ ಮಹಿಳೆಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಸಮಾನ ನ್ಯಾಯ ಎಂಬಂತೆ ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲಿಸಿರುವುದಾಗಿ ಹೇಳಿದ ಅವರು ಇದಕ್ಕೆ ವಿಶೇಷವಾಗಿ ಅರ್ಥೈಸುವ ಅಗತ್ಯವಿಲ್ಲ ಎಂದರು.
ಸೀಗೆಹಳ್ಳಿ ಕಾಲೇಜಿಗೆ ಶೇ.100 ಫಲಿತಾಂಶ
ತುರುವೇಕೆರೆ: ತಾಲೂಕಿನ ಸೀಗೆಹಳ್ಳಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ತನ್ನ ದ್ವಿತೀಯ ಪಿಯುಸಿ ಯ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶವನ್ನು ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ 16 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡಾ 82.35 ಫಲಿತಾಂಶ ಲಭಿಸಿದೆ. ಕಲಾ ಹಾಗೂ ವಾಣಿಜ್ಯ ವಿಭಾಗ ಎರಡರಿಂದ ಶೇ. 87.88 ಫಲಿತಾಂಶ ಬಂದಿದೆ. ಇದರಲ್ಲಿ ಪ್ರಥಮ ಸ್ಥಾನ 17, ದ್ವಿತೀಯ ಸ್ಥಾನ 7 ಹಾಗೂ ತೃತೀಯ ಸ್ಥಾನವನ್ನು 6 ವಿದ್ಯಾರ್ಥಿಗಳು ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕಾವ್ಯ 534 ಅಂಕ ಗಳಿಸಿ ಅತ್ಯುನ್ನತ ಶ್ರೇಣಿ ಗಳಿಸಿದ್ದಲ್ಲದೇ ಕನ್ನಡದಲ್ಲಿ 96 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ಚೈತ್ರ 494 ಅಂಕ ಗಳಿಸಿ ಕಾಲೇಜಿನಲ್ಲಿ 2 ನೇ ಸ್ಥಾನ ಗಳಿಸಿದ್ದಾಳೆ. ಉತ್ತಮ ಅಂಕ ಪಡೆದವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

