ನಮಗೆ ನಾವೇ ಹಾನಿ ಮಾಡಿಕೊಂಡಂತೆ: ಪ್ರೊ.ವಿಜಯೇಂದ್ರ
ಚಿಂತಾಮಣಿ: ಪರಿಸರಕ್ಕೆ ಹಾನಿಯುಂಟು ಮಾಡುವುದೆಂದರೆ ನಮಗೆ ನಾವೇ ಹಾನಿ ಮಾಡಿಕೊಂಡಂತೆ ಎಂಬ ಅರಿವು ಇನ್ನೂ ಮೂಡಿಲ್ಲ. ಮಾನವನ ಸುಖ ಶಾಂತಿಗೆ ಪ್ರಕೃತಿಯನ್ನು ಬಳಸಿಕೊಳ್ಳಬೇಕೆ ಹೊರತು ಸ್ವಾರ್ಥಕ್ಕಲ್ಲ ಎಂದು ಕುರುಬೂರು ಕೃಷಿ ವಿವಿ ಪ್ರೊ. ವಿಜಯೇಂದ್ರ ಅಭಿಪ್ರಾಯಪಟ್ಟರು. ತಾಲೂಕಿನ ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಮಾತನಾಡಿ, ನೆರಳಿಗಾಗಿ ಸಾಲು ವೃಕ್ಷಗಳನ್ನು ಬೆಳೆಸಿದ ಇತಿಹಾಸವನ್ನು ಓದಿದ್ದೇವೆ. ಪೂರ್ವಜರು ಗಿಡ ನೆಡುವುದು ಹಾಗೂ ಪೋಷಿಸುವುದು ಒಂದು ಧರ್ಮ ಕಾರ್ಯವೆಂದು ಭಾವಿಸಿದ್ದರು. ಮಣ್ಣಿನ ಫಲವತ್ತತೆ ರಕ್ಷಿಸುವುದರೊಂದಿಗೆ ಭೂ ಕುಸಿತವನ್ನು ವೃಕ್ಷಗಳು ತಡೆಗಟ್ಟುತ್ತವೆ. ನೆಲದಲ್ಲಿ ನೀರಿನ ತೇವಾಂಶ ಕಾಪಾಡಿಕೊಂಡು ಬರುವುದು ಕೂಡ ವೃಕ್ಷಗಳೇ ಎಂದರು. ಅತಿಥಿಗಳಾಗಿದ್ದ ಪ್ರವಚನಕಾರ ಟಿ.ಎಲ್.ಆನಂದ್, ಸಿಬಿಐ ಅಧಿಕಾರಿ ಅರುಣ್ಬಾಬು, ಜನಾರ್ದನರೆಡ್ಡಿ, ದೊಡ್ಡಗಂಜೂರು ಣಾಗಭೂಷಣಾಚಾರಿ, ಮುನಿರೆಡ್ಡಿ, ರಾಮಾಜಿ ಗುರೂಜಿ ಮಾತನಾಡಿದರು.
ಎಸ್.ಎಂ.ರಾಘವೇಂದ್ರ, ಶಿಕ್ಷಕ ಪ್ರಕಾಶ್ ರೆಡ್ಡಿ, ಶಿವಣ್ಣ, ಮಂಜು, ಶಿವಾರೆಡ್ಡಿ, ಮೈಲಾಂಡ್ಲಹಳ್ಳಿ ಅಶ್ವತ್ಥ ನಾರಾಯಣಪ್ಪ, ನಾರಾಯಣಸ್ವಾಮಿ ಹಾಗೂ ವಿದ್ಯಾರ್ಥಿಗಳ ಸೇರಿದಂತೆ ಅನೇಕರು ಹಾಜರಿದ್ದರು.
ಪರಿಸರ ನಾಶದಿಂದ ಮನುಕುಲ ನಾಶ
ಗುಡಿಬಂಡೆ: ಮನುಷ್ಯ ಆಧುನಿಕತೆಯ ಗುಂಗಿನಲ್ಲಿ ಪ್ರಕೃತಿಯನ್ನು ನಾಶಮಾಡಲು ಹೊರಟಿದ್ದಾನೆ. ಇದರಿಂದ ಮನುಕುಲ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಹೇಳಿದರು. ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡದಿ ಅವರು, ನಮಗೆ ಉತ್ತಮ ಪರಿಸರ ನೀಡುವಲ್ಲಿ ಗಿಡ-ಮರಗಳು ಬಹುಮುಖ್ಯ ಪಾತ್ರ ವಹಿಸಿವೆ ಎಂದರು. ನ್ಯೂ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಪಿ.ಎನ್.ರಾಜಶೇಖರ್ ಮಾತನಾಡಿದರು. ನ್ಯೂ ಪಬ್ಲಿಕ್ ಶಾಲಾ ಆವರಣದಲ್ಲಿ ಗಿಡಗಳನ್ನು ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು. ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಪರಿಮಳ, ಗೋಪಾಲಕೃಷ್ಣ, ಅಶ್ವತ್ಥಪ್ಪ, ವೆಂಕಟೇಶ್, ಅಶ್ವತ್ಥಮ್ಮ, ನಸ್ರೀನ್ ತಾಜ್, ಚೈತ್ರ, ಬಾಬಾಜಾನ್, ವಾಣಿ, ಪೂರ್ಣಿಮಾ, ಶಿಲ್ಪಾ ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

