ಕೋಲಾರ

ಔಷಧ ಮಿಶ್ರಿತ ಸೊಪ್ಪು ತಿಂದು ರೇಷ್ಮೆ ಹುಳು ಸಾವು

Published On :

ಶಿಡ್ಲಘಟ್ಟ: ಹಣ್ಣಾಗುವ ಹಂತಕ್ಕೆ ಬಂದಿದ್ದ ರೇಷ್ಮೆ ಹುಳುಗಳು ಔಷಧ ಮಿಶ್ರಿತ ಹಿಪ್ಪುನೇರಳೆ ಸೊಪ್ಪು ತಿಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಗೌಡನಹಳ್ಳಿ ಗ್ರಾಮದ ರೈತ ಕೃಷ್ಣಪ್ಪ ಎಂಬ ರೈತ ಮೇಯಿಸುತ್ತಿದ್ದ ಸುಮಾರು 150 ಮೊಟ್ಟೆ ರೇಷ್ಮೆ ಹುಳುಗಳು ಇನ್ನೆರಡು ದಿನಗಳಲ್ಲಿ ಹಣ್ಣಾಗುವ ಹಂತದಲ್ಲಿದ್ದವು. ಎರಡು ದಿನಗಳ ಹಿಂದೆ ಜಮೀನಿನ ವಿಚಾರಕ್ಕೆ ಸಹೋದರರೊಂದಿಗೆ ಜಗಳವಾಗಿತ್ತು, ನಿನ್ನೆ ಸಂಜೆ ನಮ್ಮ ತೋಟದಿಂದಲೇ ಎಂದಿನಂತೆ ಹಿಪ್ಪುನೇರಳೆ ಸೊಪ್ಪನ್ನು ತಂದು ಹುಳುಗಳಿಗೆ ನೀಡಲಾಗಿತ್ತು, ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಶೇ.80 ರಷ್ಟು ಹುಳುಗಳು ಸತ್ತುಹೋಗಿವೆ. ರೇಷ್ಮೆ ಇಲಾಖೆಯ ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತ ಸಂಘದ ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್ ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.