ರಸ್ತೆ ಬದಿ ಡಾ.ರಾಜ್ ಪುತ್ಥಳಿ ಅನಾಥ!
ಮಾಲೂರು: ಸುಂದರವಾಗಿ ಬಂದಿಲ್ಲ ಎಂಬ ಕಾರಣಕ್ಕಾಗಿ ಇಲ್ಲಿನ ಪುರಸಭೆ ಆವರಣದಲ್ಲಿ ಸ್ಥಾಪಿತವಾಗಿದ್ದ ನಟ ಡಾ.ರಾಜ್ ಪ್ರತಿಮೆ ಬದಲಾಯಿಸಿದ ಭುವನೇಶ್ವರಿ ಕಲಾ ಸಂಘ, ಅದನ್ನು ತಾಲೂಕಿನ ಮಡಿವಾಳ ಗ್ರಾಮದ ಚರಂಡಿ ಬದಿ ಬೀಸಾಕಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
2002ರ ಜೂನ್ 24 ರಂದು ಸ್ಥಳೀಯ ಭುವನೇಶ್ವರಿ ಕಲಾ ಸಂಘ ಡಾ. ರಾಜ್ ಅವರ ಕಪ್ಪುಶಿಲೆ ಪ್ರತಿಮೆಯನ್ನು ಇಲ್ಲಿನ ಪುರಸಭೆ ಆವರಣದಲ್ಲಿ ಸ್ಥಾಪಿಸಿತ್ತು. ಇದನ್ನು ರವಿಶಂಕರ್ ಗೂರುಜಿ ಹಾಗೂ ಬಾಲಗಂಗಾಧರನಾಥ್ ಸ್ವಾಮೀಜಿ ಅನಾರವಣಗೊಳಿಸಿದ್ದರು. ಈ ವೇಳೆ, ರಾಜ್ ಕುಟುಂಬದ, ಶಿವಣ್ಣ, ರಾಘಣ್ಣ, ಪುನೀತ್ ಹಾಗೂ ಪಾರ್ವತಮ್ಮ ಕೂಡಾ ಬಂದಿದ್ದರು. ನಂತರ ಈ ಪ್ರತಿಮೆಗೆ ಬಗ್ಗೆ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಭುವನೇಶ್ವರಿ ಕಲಾ ಸಂಘದ ಹಿರಿಯ ಸದಸ್ಯ ಹಾಗೂ ಚಲನಚಿತ್ರ ನಟ ಸಿದ್ದಪ್ಪ ಅವರ ಪರಿಶ್ರಮದಿಂದಾಗಿ ಕಳೆದ ವರ್ಷ ಹೊಸ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ, ಇದೀಗ ಹಳೆ ಪ್ರತಿಮೆ ಬೆಂಗಳೂರು ರಸ್ತೆಯ ಮಡಿವಾಳ ಗ್ರಾಮದ ರಸ್ತೆ ಪಕ್ಕದಲ್ಲಿ ಅನಾಥವಾಗಿ ಬಿದ್ದಿದ್ದು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆವಾಂತರಕ್ಕೆ ಭುವನೇಶ್ವರಿ ಕಲಾ ಸಂಘವೇ ಹೊಣೆ ಎಂದು ಗ್ರಾಮದ ನಿವಾಸಿ ಜೈರಾಮ್ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘದ ಮುಖ್ಯಸ್ಥ ಲಿಂಗೇಶ್ವರಯ್ಯ, ಡಾ.ರಾಜ್ ಪುತ್ಥಳಿಯನ್ನು ಮಡಿವಾಳ ಗ್ರಾಮದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಸ್ಥಾಪಿಸುತ್ತೇವೆ ಎಂದು ರಾಜ್ ಅಭಿಮಾನಿ ನಾರಾಯಣಸ್ವಾಮಿ ತೆಗೆದುಕೊಂಡು ಹೋಗಿದ್ದರು. ಆದರೆ, ಅದನ್ನು ರಸ್ತೆ ಬದಿಯಲ್ಲಿ ಬೀಸಾಕಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

