ಕೋಲಾರ

ಕೆಜಿಎಫ್‌ನಲ್ಲಿ ಕೈದಿಗಳ ದಿಢೀರ್ ಧರಣಿ

Published On :

ಕೆಜಿಎಫ್: ಕೆಜಿಎಫ್‌ನ ಚಾಂಪಿಯನ್‌ರೀಫ್ ವ್ಯಾಪ್ತಿಯ ಉಪಕಾರಾಗೃಹ(ಸಬ್‌ಜೈಲ್)ದಲ್ಲಿ ಕೈದಿಗಳಿಗೆ ಸರಿಯಾಗಿ ಊಟ ಮತ್ತು ಇತರೆ ಸೌಲಭ್ಯ ಒದಗಿಸುತ್ತಿಲ್ಲ. ಕಾರಾಗೃಹ ಅಧಿಕಾರಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಬೆಳಗ್ಗೆ ಕೈದಿಗಳು ಉಪಹಾರವನ್ನು ಕೈ ಬಿಟ್ಟು ದಿಢೀರ್ ಜೈಲಿನಲ್ಲಿ ಧರಣಿ ನಡೆಸಿದರು.
ಕಾರಾಗೃಹ ಅಧಿಕಾರಿ ಬಸವರಾಜ್ ಜಾಳ್ಳನವರ್ ಅವರು 6 ತಿಂಗಳಿಂದ ಇಲ್ಲಿರುವ ಸುಮಾರು 47 ಕೈದಿಗಳಿಗೆ ಸರಿಯಾಗಿ ವಾರಕ್ಕೊಮ್ಮೆ ಮಾಂಸಹಾರ ಊಟ ನೀಡುತ್ತಿಲ್ಲ. ಮಲಗಲು ಸರಿಯಾದ ಹಾಸಿಗೆ ರಗ್ಗು ನೀಡುತ್ತಿಲ್ಲ. ಕ್ಷೌರ ಮಾಡಿಸಲು ಯಾರನ್ನೂ ಕರೆಸುತ್ತಿಲ್ಲ. ಸೋಪು, ಶ್ಯಾಂಪೂ ನೀಡುತ್ತಿಲ್ಲ. ತಮ್ಮನ್ನು ನೋಡಲು ಬರುವ ಸಂಬಂಧಿಕರ ಬಳಿ ಹಣವನ್ನು ಪೀಡಿಸುತ್ತಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗಲು ತಮ್ಮಲ್ಲಿ ಸಾವಿರಗಟ್ಟೆ ಹಣ ನೀಡುವಂತೆ ಒತ್ತಾಯಿಸುತ್ತಾರೆ. ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದರೆ ನಮ್ಮ ವಿರುದ್ದ ದಬ್ಬಾಳಿಕೆ ನಡೆಸುವುದಲ್ಲದೆ ನಿಮ್ಮನ್ನು ಇಲ್ಲಿಂದ ಬಳ್ಳಾರಿ ಮತ್ತು ಹೊಸಪೇಟೆ ಜೈಲ್‌ಗೆ ಕಳುಹಿಸುವುದಾಗಿ ಬೆದರಿಸುತ್ತಾರೆ ಕೈದಿಗಳು ಆರೋಪಿಸಿದ್ದಾರೆ. ಕಾರಾಗೃಹದ ಮುಖ್ಯಸ್ಥರಾದ ಕೆಜಿಎಫ್ ನ್ಯಾಯಾಲಯ ನ್ಯಾಯಾಧೀಶರು ಸ್ಥಳಕ್ಕಾಗಮಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಇಲ್ಲಿನ ಅಧಿಕಾರಿಯನ್ನು ಕೂಡಲೇ ವರ್ಗಾಯಿಸಬೇಕು ಅಲ್ಲಿಯ ತನಕ ತಾವು ಪ್ರತಿಭಟನೆಯನ್ನು ಮುಂದುವರಿಸುವುಗದಾಗಿ ಪಟ್ಟುಹಿಡಿದರು. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ.ವಿವೇಕಾನಂದ ಹಾಗೂ ಡಿಸಿಐಬಿ ಅಧಿಕಾರಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಸಂಬಂಧಪಟ್ಟ ಇಲಾಖೆ ಮತ್ತು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು ಹಾಗೂ ಕಾರಾಗೃಹ ಅಧಿಕಾರಿಯೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.