ಕೋಲಾರ

ಚೌಡರೆಡ್ಡಿ ಪರ ನಾರಾಯಣಸ್ವಾಮಿ ಮತಯಾಚನೆ

Published On :

ಬಂಗಾರಪೇಟೆ: ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತೂಪಲ್ಲಿ ಚೌಡ ರೆಡ್ಡಿ ಪರ ಅವರ ಅಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಪಟ್ಟಣದ ವಿದ್ಯಾಸಂಸ್ಥೆಗಳಿಗೆ ತೆರಳಿ ಮತ ಯಾಚಿಸಿದರು.
ನಂತರ ಪಟ್ಟಣದ ಸಂತೋಷ್ ಶಾಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪದವೀಧರ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಲಿ ಪರಿಷತ್ ಸದಸ್ಯ ಶಿವಯೋಗಿಸ್ವಾವು ಕಳೆದ ಆರು ವರ್ಷಗಳಿಂದ ಶಿಕ್ಷಕರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಅವರ ಸಾಧನೆ ಶೂನ್ಯ ಎಂದು ಆರೋಪಿಸಿದರು.
ಪಕ್ಷದ ಮುಖಂಡ ಕೆ.ಸಿ. ಶಂಕರೇಗೌಡ, ತಾಲೂಕು ಶಿಕ್ಷಕರ ಸಂಘ ಅಧ್ಯಕ್ಷ ಬಾಲಕೃಷ್ಣೇಗೌಡ, ಮುಖಂಡರಾದ ಶ್ರೀನಿವಾಸ ಗೌಡ, ಗಾಂಧಿ, ಪ್ರೇಮಮ್ಮ, ಜಯದೇವ್ ಮಾತನಾಡಿದರು. ಶಿಕ್ಷಕ ಮುಖಂಡರಾದ ಆದಿಲ್ ಪಾಷ, ಮದಿಆಳಗನ್, ಶ್ಯಾಮಮೂರ್ತಿ, ದೇವರಾಜ್, ಏಳೆಸಂದ್ರ ನಾಗರಾಜ್, ಮಂಜುನಾಥ್, ಭೋಡಿರೆಡ್ಡಿ, ಶ್ರೀನಾಥ್, ಕೃಷ್ಣಪ್ಪ, ಆಶ್ವತ್ಥ್, ಆಂಜನೇಯ ಗೌಡ, ಸಂಜೀವಪ್ಪ, ಮುದ್ದೇಗೌಡ, ಲೋಕೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.