ಕೋಲಾರ

ಶೈಕ್ಷಣಿಕ ಮಟ್ಟ ಹೆಚ್ಚಳಕ್ಕೆ ಪ್ರವಾಸ

Published On :

ಬಂಗಾರಪೇಟೆ: ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗ ಮಾಡಿಕೊಂಡು ರಾಜ್ಯಕ್ಕೆ ಕೀರ್ತಿ ತರಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
  ಪಟ್ಟಣದ ಬಿಆರ್‌ಸಿ ಸಭಾಂಗಣದಲ್ಲಿ ತಾಲೂಕಿನ ಪ್ರೌಢಶಾಲೆಯ 171 ವಿದ್ಯಾರ್ಥಿಗಳನ್ನು ಮೂರು ಬಸ್ಸುಗಳಲ್ಲಿ ಕರ್ನಾಟಕ ದರ್ಶನ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಮಾರ್ಗದರ್ಶಿ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂಬ ಹಿತದೃಷ್ಟಿಯಿಂದ ಸಾವಿರಾರು ಕೋಟಿ ಅನುದಾನ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ರಾಜ್ಯದ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ಇದಾಗಿದ್ದು, ಅವರ ಜ್ಞಾನ  ಹೆಚ್ಚಾಲಿದೆ ಎಂದು ತಿಳಿಸಿದರು.
ಮಕ್ಕಳು ಎಚ್ಚರಿಕೆಯಿಂದ ಶಿಕ್ಷಕರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕೆಂದು ತಿಳಿಸಿ, ಪ್ರವಾಸ ಸುಖಕರವಾಗಿರಲೆಂದು ಹಾರೈಸಿದರು. 171ಮಕ್ಕಳಿಗೂ ಟೀ ಶರ್ಟ್, ಬ್ಯಾಗ್, ಟೋಪಿಗಳನ್ನು ಶಾಸಕರು ವಿತರಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಕೆ. ಜಯರಾಜ್ ಮಾತನಾಡಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಿಂದ ಆಯ್ದು 171 ಮಕ್ಕಳನ್ನು ನಾಲ್ಕು ದಿನಗಳ ಪ್ರವಾಸ ಕಳುಹಿಸಲಾಗುತ್ತಿದೆ ಎಂದರು.
ಪ್ರವಾಸಿ ಸ್ಥಳಗಳು: ಕರ್ನಾಟಕದ ಹಿರಿಯೂರು, ಮಾರಿಕಣಿವೆ, ಚಿತ್ರದುರ್ಗ, ಹೊಸಪೇಟೆ, ಹಂಪೆ, ಲಕ್ಕುಂಡಿ, ಕೂಡಲಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಆಲಮಟ್ಟಿ ಡ್ಯಾಂ, ಘಾಟಿ ಸುಬ್ರಮಣ್ಯ, ತುಮಕೂರು, ಗೋರವನಹಳ್ಳಿ ಸ್ಥಳಗಳನ್ನು ನಾಲ್ಕು ದಿನಗಳಲ್ಲಿ ನೋಡಿ ವಾಪಸಾಗಲಿದ್ದಾರೆ ಎಂದರು. ತಹಸೀಲ್ದಾರ್ ಉಷಾ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣೆಗೌಡ, ಕೆಜಿಎಫ್ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಯುವರಾಜ್, ಶಿಕ್ಷಣ ಸಂಯೋಜಕರಾದ ಶ್ರೀರಾಮಯ್ಯ, ಸೋಮಶೇಖರ್, ಸುರೇಶ್, ನಯಾಜ್, ಬಿಆರ್‌ಪಿ ವಿವಿಪತಿ, ಸಿಆರ್‌ಪಿ ಶ್ರೀನಿವಾಸನ್, ನಾಗರಾಜ್, ಜಾತಪ್ಪ, ನಿರ್ಮಲ, ಚಂದ್ರಪ್ರಭಾ, ಮನ್ಸೂರು, ತಾರಾ, ರಾಜಪ್ಪ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.