ಕೋಲಾರ

ನಗರ್ತ ಜನಾಂಗಕ್ಕೆ ಹೆಚ್ಚಿನ ಆದ್ಯತೆ

Published On :

ಟೇಕಲ್: ರಾಜ್ಯ ವಿಧಾನಸಭೆಯಲ್ಲಿ ನಗರ್ತ ಜನಾಂಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಒತ್ತಾಯಿಸುವುದಾಗಿ ಶಾಸಕ ಕೆ.ಎಸ್.ಮಂಜುನಾಥಗೌಡ ಅವರು ತಿಳಿಸಿದರು.
ಟೇಕಲ್‌ನಲ್ಲಿ ಮಾಲೂರು ತಾಲೂಕು ನಗರ್ತ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರ್ತ ಜನಾಂಗದ ಸಮುದಾಯ ಭವನ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನಗರ್ತ ಜನಾಂಗದ ಶಿಕ್ಷಣ, ಔದ್ಯೋಗಿಕ, ಆರ್ಥಿಕವಾಗಿ ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಇವರ ಧ್ಯೇಯ ಮತ್ತು ರೂಪುರೇಷಗಳು ಉತ್ತಮವಾಗಿವೆ. ರಾಜ್ಯದಲ್ಲಿ ವರ್ಗ 2ಎಗೆ ಸೇರ್ಪಡೆಯಾಗಿದ್ದು, ನಮ್ಮ ರಾಜ್ಯದಲ್ಲಿಯೂ ನಗರ್ತ ಜನಾಂಗವನ್ನು ವರ್ಗ 2ಎಗೆ ಸೇರ್ಪಡೆ ಮಾಡಲು ನನ್ನ ಕೈಲಾದ ಒತ್ತಾಯವನ್ನು ಮುಂದಿನ ವಿಧಾನಸಭಾ ಕಲಾಪದಲ್ಲಿ ಮಾಡುವುದಾಗಿ ಈ ಸಂದರ್ಭದಲ್ಲಿ ಜನಾಂಗದ ಸಂಪೂರ್ಣ ಜನತೆ ಮಾನ್ಯ ಮುಖ್ಯಮಂತ್ರಿಗಳನ್ನು ನೋಡಿ ಮನವಿ ಪತ್ರ ನೀಡಿ ಒತ್ತಾಯಪಡಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ಅವರು ಮಾತನಾಡಿ, ಯುವ ಪೀಳಿಗೆ ಮುಂದಿನ ಜನಾಂಗದ ಅಡಿಪಾಯವಾಗಿದ್ದು, ಜಿಪಂ ಕ್ಷೇತ್ರಾಭಿವೃದ್ಧಿ ಯೋಜನೆಯಡಿಯಲ್ಲಿ ಈ ಸಮುದಾಯ ಭವನ ಕಟ್ಟಲಾಗಿದೆ. ಮಾಲೂರು ತಾಲೂಕು ಕೇಂದ್ರದಲ್ಲಿ ಭವನ ನಿರ್ಮಿಸಲು ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರ್ತ ಜನಾಂಗದ ರಾಜ್ಯ ಉಪಾಧ್ಯಕ್ಷ ಎಸ್.ಎ. ರಾಮಪ್ರಕಾಶ್, ಬಿ.ಜಿ.ಮುನಿಶಾಮಿಗೌಡ, ಎಚ್.ಹನುಮಂತಪ್ಪ ಮುಂತಾದವರು ಮಾತನಾಡಿದರು. ಪತ್ರಕರ್ತ ಟೇಕಲ್ ಲಕ್ಷ್ಮೀಶ್ ಅವರನ್ನು ಸನ್ಮಾನಿಸಲಾಯಿತು. 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಶೋಕ್ ಬಾಬು, ಚಂದ್ರಶೇಖರ್‌ಗೌಡ, ನಿರ್ಮಲಾ ಆಂಜಿನಪ್ಪ, ಮಂಜುಳಾಶಿವಣ್ಣ, ಎಸ್.ಜಿ.ರಾಮಮೂರ್ತಿ, ಕೃಷ್ಣಗಿರಿಯ ಸುಬ್ಬರಾಯಶೆಟ್ಟಿ, ರಾಮಕೃಷ್ಣಪ್ಪ, ಮುನಿರತ್ನಮ್ಮ ಕೃಷ್ಣಪ್ಪ, ಅನಿತಾಶ್ರೀರಾಮ್, ಟಿ.ಜಿ.ಸೀನಪ್ಪ, ಬಾಲರಾಜ್ ಶೆಟ್ಟಿ, ಟೇಕಲ್ ಆಂಜಿನಪ್ಪ, ಕೃಷ್ಣಪ್ಪ(ಕಿಟ್ಟಿ), ರಾಮಚಂದ್ರಪ್ಪ, ಟಿ.ಎಸ್.ರಮೇಶ್, ರಾಮಪ್ಪ, ವಜೀದ್, ದೇವರಾಜ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.