'ದೇಶ ರಕ್ಷಣೆಯಲ್ಲಿ ಎನ್‌ಸಿಸಿ ಪಾತ್ರ ದೊಡ್ಡದು'
ಕೋಲಾರ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ ಬಹಳ ಮುಖ್ಯವಾದುದು, ಇದನ್ನು ರೂಢಿಸಿಕೊಂಡಾಗ ಜೀವನ ಉಜ್ವಲವಾಗುತ್ತದೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಸಂಸ್ಥೆಗಳ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್‌ಸಿಸಿ ತರಬೇತಿ ಶಿಬಿರದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಿಬಿರಾರ್ಥಿಗಳಿಗೆ ನೀಡುವ ಗೌರವಧನ ಹಾಗೂ ಅವರ ಭತ್ಯೆ ಅತ್ಯಂತ ಕಡಿಮೆ. ಈ ವಿಚಾರವಾಗಿ ಸರ್ಕಾರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ದೇಶದ ರಕ್ಷಣೆಯಲ್ಲಿ ಎನ್‌ಸಿಸಿ ಶಿಬಿರಾರ್ಥಿಗಳ ಪಾತ್ರ ಹಿರಿದಾಗಿದ್ದು, ಎನ್‌ಸಿಸಿ ಪ್ರಾರಂಭವಾಗಿ 50 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಒಂದು ಸ್ವಂತ ಕಟ್ಟಡವಿಲ್ಲದಿರುವುದು ನಿಜಕ್ಕೂ ಖಂಡನೀಯ. ಈ ಕುರಿತಾಗಿ ಸಮಗ್ರ ಪರಿಶೀಲನೆ ಮಾಡಿ 5 ಎಕರೆ ಜಮೀನನ್ನು ಎನ್‌ಸಿಸಿ ತರಬೇತಿ ಶಿಬಿರಗಳಿಗೆ ಅನುಕೂಲವಾಗುವಂತೆ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಸಿ.ಸಿ. ತರಬೇತಿ ಸಂಸ್ಥೆಯ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಅಮನ್ ವಿಷ್ಣೋಯಿ,ಕ್ಯಾಪ್ಟನ್‌ಗಳಾದ ಕೆ.ಎಸ್. ಶೈಲಜಾ, ಎಂ. ಶಂಕರ್, ಲೆಫ್ಟಿನೆಂಟ್‌ಗಳಾದ ಪಿ.ಆರ್. ದೊಡ್ಡಾರೆಡ್ಡಿ, ಜಿ. ರವಿಚಂದ್ರನ್, ಎಂ.ಸದಾಶಿವ, ವಸಂತಕುಮಾರ್, ಮರಿಯಾ, ವಾಸಂತಿ, ಬಾಲಾಜಿ ಹಾಗೂ ವಾಸನ್ ಐ ಕೇರ್‌ನ ವೆಂಕಟಲಕ್ಷ್ಮಿ, ರಾಘವೇಂದ್ರ, ಶಿವಕುಮಾರ್ ಮತ್ತು ಶ್ರೀಕಾಂತ್ ಇದ್ದರು. ಮುಖ್ಯೋಪಾಧ್ಯಾಯ ಎಸ್. ಲಕ್ಷ್ಮೀನಾರಾಯಣರೆಡ್ಡಿ ಸ್ವಾಗತಿಸಿ, ಶಿಕ್ಷಕ ಜಿ. ವೆಂಕಟೇಶಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

