ಕೋಲಾರ

ಸೀಮೆಎಣ್ಣೆ ಹಂಚಿಕೆ ಗೊಂದಲ: ಪ್ರತಿಭಟನೆ

Published On :

ಶಿಡ್ಲಘಟ್ಟ: ಸೀಮೆ ಎಣ್ಣೆ ಹಂಚಿಕೆ ಗೊಂದಲವನ್ನು ನಿವಾರಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಯನ್ನು ಮುಚ್ಚಿ ಪ್ರತಿಭಟಿಸಿದರು.
ತಾಲೂಕು ಆಡಳಿತದ ಕೇಂದ್ರ ತಾಲೂಕು ಕಚೇರಿಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಕಚೇರಿಗೆ ಬಂದ ಸಾರ್ವಜನಿಕರು ತಾಲೂಕಿನಲ್ಲಿ ಸೀಮೆಎಣ್ಣೆ ಹಂಚಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿಸಿರುವ ಇಲಾಖೆಯ ಕ್ರಮವನ್ನು ಖಂಡಿಸಿ ಶಿರಸ್ತೆದಾರ ಪರಶಿವಮೂರ್ತಿ ಮತ್ತು ಆಹಾರ ಇಲಾಖೆ ನಿರೀಕ್ಷಕ ಶ್ರೀಧರ್ ವಿರುಧ್ಧ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ಯಾರನ್ನು ಕೇಳಬೇಕು: ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಕುಂಬಾರ್ಲಹಳ್ಳಿ ಗ್ರಾಮದಲ್ಲಿ ಸುಮಾರು 80 ಕ್ಕೂ ಅಧಿಕ ಕಾರ್ಡ್‌ಗಳಿಗೆ ಸೀಮೆ ಎಣ್ಣೆ ಎಲ್ಲಿ ಹಾಕುತ್ತಿದ್ದಾರೆ ಎಂಬುದು ಮಾಹಿತಿ ಇಲ್ಲ. ಈ ವಿಚಾರದಲ್ಲಿ ಸೀಮೆಎಣ್ಣೆ ವಿತರಕರಿಗೆ ಕೇಳಿದರೆ ಈ ಬಾರಿ ನನಗೆ ಅಲಾಟ್ಮೆಂಟ್ ಬಂದಿಲ್ಲವೆಂದು ಸಬಬು ಹೇಳುತ್ತಿದ್ದಾರೆ. ನಾವು ಯಾರನ್ನು ಕೇಳಬೇಕೆಂದು ಗ್ರಾಹಕ ರಾಜಣ್ಣ ಪ್ರಶ್ನಿಸಿದರು.
ಈ ಕುರಿತು ಆಹಾರ ಇಲಾಖೆಯ ಶಿರಸ್ತೆದಾರ ಉತ್ತರಿಸಿ, ಈ ಹಿಂದೆ ನಾವು ಸೀಮೆಎಣ್ಣೆ ಅಲಾಟ್ಮೆಂಟ್ ಹಾಕುತ್ತಿದ್ದು ಈ ರೀತಿಯ ಸಮಸ್ಯೆ ಇರಲಿಲ್ಲ. ಈ ಮಾಹೆಯಲ್ಲಿ ಇಲಾಖೆಯ ಆಯುಕ್ತರು ಅಲಾಟ್ಮೆಂಟ್ ಹಾಕಿದ್ದರಿಂದ ಸ್ವಲ್ಪ ಮಟ್ಟಿಗೆ ಗೊಂದಲ ಆಗಿದೆ. ಅದನ್ನು ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಆಗ್ರಹ: ಇದರಿಂದ ಆಕ್ರೋಶಗೊಂಡು ಸಾರ್ವಜನಿಕರು ಪ್ರತಿಯೊಬ್ಬರು ಕಾರ್ಡ್ ಎತ್ತಿಕೊಂಡು ನಿಮ್ಮ ಬಳಿ ಬರಬೇಕಾ ಎಂದು ತರಾಟೆಗೆ ತೆಗೆದುಕೊಂಡರಲ್ಲದೇ ಸೀಮೆಎಣ್ಣೆ ಅಲಾಟ್ಮೆಂಟ್ ಕುರಿತು ಸರಕಾರಿ ನ್ಯಾಯಬೆಲೆ ಅಂಗಡಿ ಅಥವಾ ಸೀಮೆಎಣ್ಣೆ ವಿತರಕರು ಕಡ್ಡಾಯವಾಗಿ ನಾಪಫಲಕದಲ್ಲಿ ಅಳವಡಿಸಲು ನಿರ್ದೇಶನ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಗಫೂರ್ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.