ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ
ಮುಳಬಾಗಲು: ತಾಲೂಕಿನ ಆವಣೆ ಗ್ರಾಮದ ಕಾಮಾಕ್ಷಿದೇವಿ ಸಮೇತ ಪ್ರಸನ್ನ ರಾಮಲಿಂಗೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಲಕ್ಷಾಂತರ ಮಂದಿ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಸಕ ಕೊತ್ತೂರು ಜಿ. ಮಂಜುನಾಥ್ ರಥೋತ್ಸವಕ್ಕೆ ಚಾಲನೆ ನೀಡಿದರು. ಕೀಲುಹೊಳಲು ಗ್ರಾಮದ ಸಲ್ಲಾಪುರಮ್ಮ ಉತ್ಸವ ಆಗಮಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತಹಸೀಲ್ದಾರ್ ಆರ್. ಸೋಮಶೇಖರ್, ಉಪ ತಹಸೀಲ್ದಾರ್ ಹರಿಪ್ರಸಾದ್, ರಾಜಸ್ವನಿರೀಕ್ಷಕ ಬಲರಾಮೇಗೌಡ, ಸಂಚಾಲಕ ಎಂ.ವಿ. ಅಶ್ವಥನಾರಾಯಣ, ಜಿಪಂ ಸದಸ್ಯೆ ಗೀತಾ ಆನಂದರೆಡ್ಡಿ, ತಾಪಂ ಅಧ್ಯಕ್ಷೆ ಸುಬ್ಬಮ್ಮ, ಆವಣಿ ಗ್ರಾಪಂ ಅಧ್ಯಕ್ಷೆ ಭಾನುಪ್ರಿಯಾ ವಿಜಯಕುಮಾರ್, ಕಲ್ಲುಪಲ್ಲಿ ಪ್ರಕಾಶ್, ಜಿ. ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು.
ಮರಳು ಅಡ್ಡೆ ಮೇಲೆ ದಾಳಿ; ಎರಡು ಜೆಸಿಬಿ ವಶ
ಟೇಕಲ್: ತಿಮ್ಮನಾಯಕನಹಳ್ಳಿಯ ಅಮಾನಿ ಅರಸಿಕೆರೆಯಲ್ಲಿ ಕೆಲವರಿಂದ ಮರಳು ಮಾಫಿಯಾ ನಡೆಯುತ್ತಿದ್ದು, ಮಾಸ್ತಿ ಪೊಲೀಸರು ಮರಳು ದಂಧೆ ನಡೆಸುತ್ತಿದ್ದ 2 ಜೆಸಿಬಿಗಳನ್ನು ವಶಪಡಿಸಿಕೊಂಡಿದ್ದು, ಕೇಸು ದಾಖಲಿಸಿಕೊಂಡಿದ್ದಾರೆ. ತಿಮ್ಮನಾಯಕನಹಳ್ಳಿ ಕೆರೆಯಲ್ಲಿ ಸುಮಾರು 1 ತಿಂಗಳಿನಿಂದ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ರಾತ್ರಿ ವೇಳೆ 10 ಕ್ಕೂ ಹೆಚ್ಚು ಜೆಸಿಬಿಬಳಸಿ ಮರಳು ತೆಗೆದು ಮಾರಾಟ ಮಾಡಲಾಗುತ್ತಿತ್ತು. ಇದನ್ನು ಸುದ್ದಿ ಮಾಡಲು ಹಾಗೂ ಕೆರೆಯ ಚಿತ್ರ ತೆಗೆಯುತ್ತಿದ್ದಾಗ ಕೆಲವು ಪ್ರಭಾವಿ ವ್ಯಕ್ತಿಗಳು ವರದಿಗಾರರಿಗೂ ಬೆದರಿಕೆ ಹಾಕಲಾಗಿತ್ತು. ಟೇಕಲ್ ಸುತ್ತಮುತ್ತ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಂತರ್ಜಲಮಟ್ಟ ಹೆಚ್ಚಿಸಲು ಇಂತಹ ಮರಳು ಮಾಫಿಯಾಗಳಿಗೆ ಕಡಿವಾಣ ಹಾಕಬೇಕೆಂದು ಸುತ್ತಮುತ್ತಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

