ಕೋಲಾರ

ಸಿಡಿಲು ಬಡಿದು 30 ಮೇಕೆಗಳ ಸಾವು

Published On :

ಬಂಗಾರಪೇಟೆ: ಸಿಡಿಲು ಬಡಿದು 30 ಮೇಕೆಗಳು ಮೃತಪಟ್ಟು ಒಂದೂವರೆ ಲಕ್ಷ ರು. ನಷ್ಟ ಉಂಟಾಗಿರುವ ಘಟನೆ ತಾಲೂಕಿನ ದೋಣಿಮಡಗು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಗ್ರಾಮದ ಗೋಪಾಲಪ್ಪ ಎಂಬುವರ ಮೇಕೆಗಳೇ ಸಿಡಿಲಿಗೆ ಬಲಿಯಾಗಿದ್ದು, ಶುಕ್ರವಾರ ರಾತ್ರಿ ಈ ಪ್ರದೇಶದಲ್ಲಿ ಬಿರು ಮಳೆ ಬರುವ ವಾತಾವರಣವಿತ್ತು. ಈ ವೇಳೆ ರಭಸವಾಗಿ ಸಿಡಿಲು ಬಡಿಯಿತು. ಮೊದಲು ಗೋಪಾಲಪ್ಪ ಮನೆ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ನಾಶವಾಗಿದೆ. ನಂತರ ಪಕ್ಕದಲ್ಲೆ ಇದ್ದ ಮೇಕೆಗಳ ಶೆಡ್‌ಗೆ ಬಡಿದು ಒಳಗಿದ್ದ ಮೂವತ್ತು ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದ ರೈತ ಗೋಪಾಲಪ್ಪನಿಗೆ ಸುಮಾರು ಒಂದೂವರೆ ಲಕ್ಷ ನಷ್ಟ ಉಂಟಾಗಿದೆ. ಪರಿಹಾರ ಕೊಡಿಸಬೇಕೆಂದು ಗೋಪಾಲಪ್ಪ ಕೋರಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಉಷಾರವರು ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.