ಕೋಲಾರ

'ಆರ್ಥಿಕಾಭಿವೃದ್ಧಿ; ನಾರಿ ಕೊಡುಗೆ ಅಪಾರ'

Published On :

ಚಿಕ್ಕಬಳ್ಳಾಪುರ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ವಿಶೇಷವಾಗಿ ಮಹಿಳೆಯರ ಕೊಡುಗೆ ಮಹತ್ತರವಾದುದು ಎಂದು ಶಿಕ್ಷಣ ತಜ್ಞ ಡಾ. ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುರುಷರಗಿಂತ ಮಹಿಳೆಯರು ತಮ್ಮನ್ನು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಆದರೂ ಬಡತನಕ್ಕೆ ಮಹಿಳೆ ಕಾರಣ ಅಂತ ಸಮಾಜ ಪಟ್ಟಕಟ್ಟುವುದು ಅವೈಜ್ಞಾನಿಕವಾಗಿದೆ ಎಂದು ವಿಶ್ಲೇಷಿಸಿದರು.
ಪುರುಷರು ಸ್ತ್ರೀಯರ ಏಳಿಗೆಗೆ ಅಡ್ಡಿ ಎಂಬ ಭ್ರಮೆಯನ್ನು ಮಹಿಳೆಯರು ಬಿಟ್ಟು ಏಕಾಗ್ರತೆಯಿಂದ ದೇಶದ ಅಭಿವೃದ್ಧಿ ಸಾಧಿಸಬೇಕು, ಇದಕ್ಕೆ ಅತ್ಯಂತ ಶೋಷಣೆಗೆ ಒಳಗಾದ ಅಮೇರಿಕಾದ ಮಹಿಳೆ ಮಲಾಲಾಳ ಆತ್ಮವಿಶ್ವಾಸವೇ ಮಾದರಿ ಎಂದವರು ತಿಳಿಸಿ, ಹೆಣ್ಣು ಮಗು ಹುಟ್ಟಿದರೆ ಅದು ಹಿರಿಮೆ ಎಂದು ಭಾವಿಸಬೇಕು, ಮಹಿಳೆಯರು ಈ ದೇಶದ ಅಭಿವೃದ್ಧಿಗೆ ನಿರ್ಣಾಯಕ ಪಾತ್ರವಹಿಸುತ್ತಾರೆ ಎನ್ನುವುದನ್ನು ಅರಿಯಬೇಕೆಂದರು.
ಶತ-ಶತಮಾನಗಳಿಂದಲೂ ದ್ವಿತೀಯ ದರ್ಜೆ ಪ್ರಜೆ ಎಂದು ಮಹಿಳೆಯರನ್ನು ನೋಡುವ ನಮ್ಮ ಸಮಾಜ ಬದಲಾಗಬೇಕು. ಶೋಷಣೆ ಗುರಿಯಾಗುವ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕೆಂದರು.
ಹೆಣ್ಣಿನ ಏಳಿಗೆಯನ್ನು ಹೆಣ್ಣು ಮಕ್ಕಳೇ ಸಹಿಸದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಹೆಣ್ಣೇ ಹೆಣ್ಣನ ಅಭಿವೃದ್ಧಿಗೆ ಮಾರಕವಾಗಿದ್ದಾಳೆ. ಪ್ರತಿ ಮನೆಯಲ್ಲಿ ಅತ್ತೆ ಸೊಸೆ ನಡುವೆ ಮನಸ್ತಾಪಗಳು ಹೆಚ್ಚುತ್ತಿವೆ. ಸೊಸೆಯರನ್ನು ಮಗಳಂತೆ ಪರಿಗಣಿಸುವ ಮನೋಭಾವ ಅತ್ತೆ ಸ್ಥಾನದಲ್ಲಿರುವ ಮಹಿಳೆಯರಲ್ಲಿ ಬೆಳೆಯಬೇಕು. ಅದೇ ರೀತಿ ಅತ್ತೆಯನ್ನು ತಾಯಿಯಂತೆ ಕಾಣುವ ಸ್ವಭಾವ ಸೊಸೆಯರದಾಗಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ಎನ್. ಶಿವರಾಮರೆಡ್ಡಿ, ಲೀಲಾವತಿ, ಬಾಹುಬಲಿ, ಎನ್. ಲೋಕನಾಥ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.