ಸಂಹಿತೆ ಭಯ: ಫೋಟೋ ತಿರುವು ಮುರುವು!
ಮಾಲೂರು: ಪುರಸಭೆ ಅಧ್ಯಕ್ಷ ಹಾಗೂ ಉಪಾಧಕ್ಷ ಆಯ್ಕೆಗಾಗಿ ಚುನಾವಣೆ ಪ್ರಕ್ರಿಯೆ ನಡೆದ ಪುರಸಭೆ ಸಭಾಂಗಣದಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹಾಲ್ನಲ್ಲಿದ್ದ ಎಲ್ಲ ಗಣ್ಯರ ಫೋಟೋಗಳನ್ನು ತಿರುಗಿಸಿ ಇಟ್ಟಿದ್ದು, ಗಮನ ಸೆಳೆಯಿತು.ಲೋಕಸಭೆ ಚುನಾವಣೆ ನೀತಿ ಸಂಹಿತೆ ಇದ್ದಾಗ ರಾಜಕೀಯ ಪಕ್ಷಗಳ ಧುರೀಣರ ಫೋಟೋಗಳಿಗೆ ಬಟ್ಟೆ ಮೂಲಕ ಮುಚ್ಚಿಡುವುದು ಸಾಮಾನ್ಯ. ಆದರೆ ಇಲ್ಲಿನ ಪುರಸಭೆ ಅಧಿಕಾರಿಗಳು ಫೋಟೋವನ್ನೇ ತಿರುಗಿಸಿ ಹಾಕಿದ್ದು, ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ತೆರವು ಕಾರ್ಯಾಚರಣೆಗೆ 'ಹೈ' ತಡೆಯಾಜ್ಞೆ
ಮಾಲೂರು: ಪಟ್ಟಣದ ಅರಳೇರಿ ರಸ್ತೆಯಲ್ಲಿ ಜಿಲ್ಲಾ ಭೂಮಾಪನ ಇಲಾಖೆಯವರು ರಸ್ತೆ ಬದಿಯ ರಾಜಕಾಲುವೆ ಒತ್ತುವರಿಗಳನ್ನು ಗಡಿ ಗುರ್ತಿಸಿ, ಮಂಗಳವಾರ ನಡೆಯಬೇಕಾದ ತೆರವು ಕಾರ್ಯಾಚರಣೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ನೂರಾರು ಮನೆ ಮಾಲೀಕರು ನಿರಾಳವಾಗಿದ್ದಾರೆ.
ಅರಳೇರಿ ರಸ್ತೆಯಲ್ಲಿರುವ ಹಿರಿಯ ವಕೀಲ ಅಪ್ಪಾಜಿ ಗೌಡ ಪತ್ನಿ ಲಕ್ಷ್ಮಿದೇವಿರವರು ಸೋಮವಾರದಂದು ಹೈಕೋರ್ಟ್ನಲ್ಲಿ ಜಿಲ್ಲಾಡಳಿತದ ಸರ್ವೆ-ಗಡಿ ಗುರುತು ಹಾಗೂ ಕಾರ್ಯಾಚರಣೆಗಳ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಮುಂದಿನ ಆದೇಶ ನೀಡುವ ವರೆಗೂ ತೆರವು ಕಾರ್ಯಚರಣೆ ನಡೆಸದಂತೆ ತಡೆಯಾಜ್ಞೆ ನೀಡಿದೆ. ಹೈಕೋರ್ಟ್ನಿಂದ ಬಂದ ಈ ತಡೆಯಾಜ್ಞೆ ಆದೇಶ ದಿಂದ ಎರಡು ದಿನದಿಂದ ನಿದ್ರೆಯಿಲ್ಲದ ನೂರಾರು ಮನೆ ಮಾಲೀಕರು ಸದ್ಯಕ್ಕೆ ನಿರಾಳವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

