ಕೋಲಾರ

ಬರಹಗಾರರು, ಮಾಧ್ಯಮ ಜೊತೆಗೂಡಿ ಕಾರ್ಯನಿರ್ವಹಿಸಲಿ: ನಾಗಣ್ಣ ಕಿವಿಮಾತು

Published On :

ಶಿರಾ: ಬರಹಗಾರರು, ಮಾಧ್ಯಮ ಮಿತ್ರರು ನೊಂದವರ ಜೊತೆಗೂಡಿ ಕೆಲಸ ಮಾಡಬೇಕು. ನಮ್ಮ ನಮ್ಮ ನಡುವೆ ಸುಮಧುರ ಸಂಬಂಧ ಇರಬೇಕು. ನಾವು ಮಾಡುವ ಸಂಘಟನೆಯು ಜಾತಿಯೇತರ, ಪಕ್ಷೇತರ ಸಂಘಟನೆಯಾಗಿರಬೇಕು. ನಾವು ಮಾಡುವ ಕಾರ್ಯ ಟೀಕೆಗೆ ಒಳಗಾಗಬಾರದು. ರಚನಾತ್ಮಕ ಟೀಕೆಗಳನ್ನು  ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪತ್ರಕರ್ತ ಎಸ್. ನಾಗಣ್ಣ  ತಿಳಿಸಿದರು.
ಅವರು ನಗರದ ಪ್ರೆಸಿಡ್ಸೆನ್ಸಿ ಸ್ಕೂಲ್‌ನಲ್ಲಿ ನಡೆದ ಶಿರಾ ತಾಲೂಕಿನ ಬರಹಗಾರರು ಮತ್ತು ಮಾಧ್ಯಮ ಮಿತ್ರರ  ಒಕ್ಕೂಟ ರಚನೆಯ ಪೂರ್ವಭಾವಿ  ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಂಘಟನೆಯಿಂದ ಜನಪರ ಕಾರ್ಯಕ್ರಮ ಮಾಡಬೇಕು. ನಾವು ಮಾಡುವ ಸಂಘಟನೆಯಿಂದ ಉತ್ತಮ ಫಲಿತಾಂಶ ಬರದಿದ್ದರೆ ಬೇಸರವಾಗುತ್ತದೆ. ಪಾಟೀಲ ಪುಟ್ಟಪ್ಪನವರು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಕಟ್ಟಿ ಬೃಹತ್ ಸಂಸ್ಥೆಯಾಗಿ ಬೆಳೆಸಿದ್ದಾರೆ. ಆದರೆ ಇದು ಬೆಳೆಯಲು ಕೆಲವು ಸಂದರ್ಭಗಳಲ್ಲಿ ಕಠಿಣ ನಿಲುವುಗಳು ಕಾರಣವಾಗಿವೆ. ನಾವು ಮಾಡುವ ಕೆಲಸ ಹೊಗಳಿಕೆ ತೆಗಳಿಕೆಗೆ ಗಮನ ಕೊಡಬಾರದು ಎಂದರು.
ಒಳ್ಳೆಯ ಸಂಘಟನೆಯನ್ನು ಕಟ್ಟೋಣ. ಪದಾಧಿಕಾರಿಗಳ ಬಗ್ಗೆ ಮುಂದೆ 27 ಏಪ್ರಿಲ್ 2014ರಂದು ಭಾನುವಾರ ಶಿರಾ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಭೆ ಸೇರಿ ಸಂಘಟನೆಯ ಹೆಸರಿನ ಬಗ್ಗೆ, ಕಾರ್ಯಚಟುವಟಿಕೆಯ ಬಗ್ಗೆ ವ್ಯಾಪಕವಾದ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳೋಣ ಎಂದು ತಿಳಿಸಿದರು. ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ಸೇರಿರುವುದು ಬಹಳ ಸಂತೋಷದ ವಿಷಯ ಎಂದು ತಿಳಿದರು.
ದುಗುಡ ಬೇಡ: ಯಲದಬಾಗಿಯ ವೆಂಕಟನಾರಾಯಣ ಮಾತನಾಡಿ ಸಂಘಟನೆಯನ್ನು ದುಗುಡ ದುಮ್ಮಾನಗಳಿಗಾಗಿ ಕಟ್ಟಬಾರದು ಎಂದರು.  ಪತ್ರಕರ್ತ ಕೆ. ಕರಿಸ್ವಾಮಿಯವರು ತಮ್ಮ ಅಭಿಪ್ರಾಯ ತಿಳಿಸಿ, ನಾವು ಮೂಲಭೂತ ಅಗತ್ಯವಾದ ಕೆಲಸವನ್ನು ಮಾಡಬೇಕು. ಕೇವಲ ಜನಪ್ರಿಯ ಕಾರ್ಯಕ್ರಮ ಮಾಡುತ್ತಾ ವೇದಿಕೆಗಳ ಮೇಲೆ ಮಿಂಚಬಾರದು ಎಂದರು.  
ರೂಪು ರೇಷೆ: ಕೆ.ಎ.ಎಸ್. ಅಧಿಕಾರಿ ಬೆಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಾದ ಎಚ್. ಜನ್ನಪ್ಪ ಪ್ರಾಸ್ತಾವಿಕ ಮಾತನಾಡಿ ಸಂಘಟನೆಯ ರೂಪರೇಷೆಗಳ ಬಗ್ಗೆ ತಿಳಿಸಿದರು. ಹಾಗೂ ಬರಗೂರು ರಾಮಚಂದ್ರಪ್ಪನವರ ಹಾಗೂ ಡಾ. ಜಿ. ರಾಮಕೃಷ್ಣ ಅವರು ಈ ಒಕ್ಕೂಟ ರಚನೆಯ ಬಗ್ಗೆ ಅವರು ಬರೆದು ಕಳುಹಿಸಿದ ಅಭಿಪ್ರಾಯಗಳನ್ನು ಓದಿ ತಿಳಿಸಿದರು.
ಸಭೆಯಲ್ಲಿ ಶಿಕ್ಷಣ ಸಲಹೆಗಾರರು ಹಾಗೂ ಲೇಖಕರಾದ ಪ್ರೊ. ಯಾದಲಡಕು ಜಯರಾಮಯ್ಯ, ಪ್ರೊ. ಕಟಾವೀರನಹಳ್ಳಿ ನಾಗರಾಜು, ಪ್ರೊ.ಕೆ. ಚಂದ್ರಣ್ಣ, ಪ್ರೊ. ಶಿವರಾಮಯ್ಯ, ಪ್ರೊ. ಕಟಾವೀರನಹಳ್ಳಿ ನಾಗರಾಜ್, ಪದವಿಪೂರ್ವಶಿಕ್ಷಣ ಇಲಾಖೆ ಸಹ ನಿರ್ದೇಶಕ ಅಶೋಕ್‌ಕುಮಾರ್, ವರದಿಗಾರರಾದ ಗೋಮಾರನಹಳ್ಳಿ ಮಂಜುನಾಥ್  ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.