ಕೋಲಾರ

ಚುನಾವಣೆಗೆ ರಚಿಸಿರುವ ತಂಡಗಳಿಗೆ ಸೂಚನೆ

Published On :

ಕೋಲಾರ: ಲೋಕಸಭಾ ಚುನಾವಣಾ ಕೋಲಾರ ಮೀಸಲು ಕ್ಷೇತ್ರಕ್ಕೆ ಚುನಾವಣೆಯ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು ಎಲ್ಲಾ ತಂಡಗಳು ಸಕ್ರಿಯವಾಗಿ ಕೆಲಸ ನಿರ್ವಹಿಸಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ನಡೆಯುವಂತೆ ಎಲ್ಲಾ ತಂಡಗಳು ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸಬೇಕೆಂದು ವೆಚ್ಚದ ವೀಕ್ಷಕರಾದ ಮುರುಗಯ್ಯನ್ ತಿಳಿಸಿದರು.  
ಅವರು ಗುರುವಾರ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ತಂಡಗಳ ಅಭ್ಯರ್ಥಿಗಳಿಗೆ ಚುನಾವಣೆ ಸಂದರ್ಭದಲ್ಲಿ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿಯನ್ನು ನೀಡಿದರು.
ವಿಶೇಷವಾಗಿ ಕ್ಷಿಪ್ರ ದಳ, ಸ್ಟಾಟಿಕ್ ತಂಡ, ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀಕ್ಷಕ ತಂಡ, ಎಂಸಿಅಂಡ್‌ಎಂಸಿ, ವೆಚ್ಚದ ಪರಿಶೀಲನಾ ಶಾಖೆ, ತಂಡಗಳು ನಾಳೆಯಿಂದಲೇ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ಪರಿಶೀಲನೆ, ಅಕ್ರಮವಾಗಿ ಮದ್ಯ ಸಾಗಿಸುವ ವಸ್ತುಗಳ ಬಗ್ಗೆ, ಜಪ್ತಿ ಮಾಡಿ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಬೇಕೆಂದರು.
ಎಂ.ಸಿ.ಎಂ.ಸಿ ತಂಡ ಜಾಹೀರಾತುಗಳು, ಕೇಬಲ್ ಟಿವಿಗಳು ಹಾಗೂ ಪತ್ರಿಕೆಗಳಲ್ಲಿ ಬರುವಂತಹ ಜಾಹೀರಾತುಗಳನ್ನು ಪ್ರತಿದಿವಸ ಪರಿಶೀಲಿಸಿ ಅದರ ಭಾಗಗಳನ್ನು ಚುನಾವಣಾ ವೀಕ್ಷಕರಿಗೆ ಸಲ್ಲಿಸಬೇಕೆಂದರು.
ವೆಚ್ಚದ ವೀಕ್ಷಕರಾದ ಎಸ್. ಸುದರ್ಶನ್ ಸಾಗರ್ ಮಾತನಾಡಿ ಅಭ್ಯರ್ಥಿಗಳು ಸಭೆ ಸಮಾರಂಭಗಳು ನಡೆಸುವ ಸಂದರ್ಭಗಳಲ್ಲಿ ಅವರ ವೆಚ್ಚಗಳನ್ನು ಶಾಡೋ ರಿಜಿಸ್ಟರ್‌ನಲ್ಲಿ ನಮೂದಿಸಬೇಕೆಂದರು.
ಎಸ್ಪಿ ಅಜಯ್ ಹಿಲೋರಿ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಕೆಲ ವೆಚ್ಚಗಳನ್ನು ಅಕ್ರಮವಾಗಿ ಮಾಡುತ್ತಾರೆ.  ಅವುಗಳೆಂದರೆ ಹಣ ಹಂಚುವುದು, ಮದ್ಯ ವಿತರಣೆ ಮಾಡುವುದು ಹಾಗೂ ಉಡುಗೋರೆಗಳನ್ನು ಕೊಡುವುದು, ಇಂತಹ ಸಂದರ್ಭದಲ್ಲಿ ಅವುಗಳನ್ನು ಜಪ್ತಿ ಮಾಡಿ ಪೊಲೀಸ್ ವಶಕ್ಕೆ ಒಪ್ಪಿಸಬೇಕೆಂದು ತಿಳಿಸಿದರು. ಕೆಲವೊಮ್ಮೆ ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲು ಚುನಾವಣಾ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಬೇಕೆಂದರು.ಸಭೆಯಲ್ಲಿ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಿ.ಕೆ. ರವಿ ಅವರು ಪಾರದರ್ಶಕ ಚುನಾವಣೆ ಬಗ್ಗೆ ತಂಡಗಳಿಗೆ ಮಾಹಿತಿಯನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.