ಕೋಲಾರ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕವಿಗೋಷ್ಠಿ

Published On :

ಮಾಲೂರು: ಮಹಿಳೆಯರನ್ನು ಕಾಣುವ ಸಮಾಜದ ದೃಷ್ಟಿ ಕೋನ ಬದಲಾಗಬೇಕಾಗಿದೆ ಎಂದು ಶಾಸಕ ಮಂಜುನಾಥ್‌ಗೌಡರ ಪತ್ನಿ ಅರಿದ್ರ ಮಂಜುನಾಥ್‌ಗೌಡ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಭಾನುವಾರ ಚೈತನ್ಯ ಕಲಾ ನಿಕೇತನ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 61ನೇ ತಿಂಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ-ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪುರಷರಿಗೆ ಸರಿಸಮನಾಗಿ ದುಡಿಯುತ್ತಿರುವ ಮಹಿಳೆಗೆ ಪ್ರತಿ ಕ್ಷಣ ಭೀತಿ ಕಾಡುತ್ತಿದ್ದು, ಸಂಪೂರ್ಣ ರಕ್ಷಣೆ ಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿಯತ್ರಿ ಡಾ. ಫರೀಫಾ, ಮಹಿಳೆಯರು ಬರೆಯುವ ಕಾವ್ಯ ಆತ್ಮಕಥನ ರೂಪದಲ್ಲಿದ್ದು ಅನುಭವದಿಂದ ಮೂಡಿದಂತಿರುತ್ತದೆ. ದೌರ್ಜನ್ಯಗಳ ನಿಯಂತ್ರಣಕ್ಕೆ ಹಲವಾರು ಕಾಯ್ದೆಗಳ ಸರ್ಕಾರ ಜಾರಿ ಮಾಡಿದ್ದರೂ ಮಹಿಳೆಯರ ಮೇಲೆ ನಿತ್ಯ ನಿರಂತರ ದೌರ್ಜನ್ಯಗಳಾಗುತ್ತಿರುವುದು ವಿಷಾಧನೀಯ ಎಂದರು.
ಚೈತನ್ಯ ಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷ ಜ.ಮು. ಚಂದ್ರ ಪ್ರಾಸ್ತವಿಕ ಮಾತನ್ನಾಡಿದರು. ಕವಿಯತ್ರಿಗಳಾದ ಮುಳಬಾಗಿಲಿನ ರಾಜೇಶ್ವರಿ, ಎಸ್.ಟಿ. ಭಾರತಿ, ಜಿ.ಎಸ್. ಕವಿತಾ, ಎನ್. ಪ್ರಭಾವತಿ, ಆರ್.ಎನ್.ಪುಪ್ಬ, ಕೆ.ಜಿ.ಎಫ್.ನ ರಾಧಾ, ಡಾ. ಅನನ್ಯ ಲಕ್ಷ್ಮಿ, ಜಯಲಕ್ಷ್ಮಿ, ಅನುಪಮ ಸುರೇಶ್, ನಾಗಮ್ಮ, ಐಶ್ವರ್ಯ, ಉಮಾ ತಮ್ಮ ಕವನಗಳನ್ನು ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.